ಕರ್ನಾಟಕದಲ್ಲಿ 10,070 ಹೊಸ ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಅಕ್ಟೋಬರ್ 01: ಕರ್ನಾಟಕದಲ್ಲಿ ಗುರುವಾರ 10,070 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6,11,837ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಗುರುವಾರ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 130. ಇದುವರೆಗೂ ಮೃತಪಟ್ಟವರು 8,994.
ಕರ್ನಾಟಕದಲ್ಲಿ ಇಂದು 7,144 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕೋವಿಡ್ ಸೋಂಕಿನಿಂದ 4,92,412 ಗುಣಮುಖರಾಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1,10,412.

ಬೆಂಗಳೂರು ನಗರದಲ್ಲಿ 4853 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 2,37,516ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 49,475.
ಗುರುವಾರ ಬಾಗಲಕೋಟೆಯಲ್ಲಿ 336, ಬಳ್ಳಾರಿಯಲ್ಲಿ 486, ದಕ್ಷಿಣ ಕನ್ನಡದಲ್ಲಿ 493, ಹಾಸನದಲ್ಲಿ 383, ಮಂಡ್ಯದಲ್ಲಿ 266, ತುಮಕೂರಿನಲ್ಲಿ 274, ವಿಜಯಪುರದಲ್ಲಿ 257 ಹೊಸ ಪ್ರಕರಣಗಳು ದಾಖಲಾಗಿವೆ.
ಸಚಿವರ ಟ್ವೀಟ್ : ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದು, "ಕರ್ನಾಟಕದಲ್ಲಿ ಇದುವರೆಗೂ 50 ಲಕ್ಷ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ಸೆಪ್ಟೆಂಬರ್ 30ರ ಸಂಜೆಯ ವೇಳೆಗೆ ರಾಜ್ಯಾದ್ಯಂತ 144 ಲ್ಯಾಬ್ ಗಳಲ್ಲಿ ಒಟ್ಟು 50,36,711 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇವುಗಳಲ್ಲಿ 32,30,826 ಆರ್ ಟಿಪಿಸಿಆರ್ ಮತ್ತು 18,05,885 ಟೆಸ್ಟ್ ಗಳು ರಾಪಿಡ್ ಆಂಟಿಜೆನ್ ಟೆಸ್ಟ್ ಆಗಿವೆ" ಎಂದು ಹೇಳಿದ್ದಾರೆ.











Click it and Unblock the Notifications