Karnataka Rain: ಮಳೆ ಇಲ್ಲದೆ ಕರ್ನಾಟಕಕ್ಕೆ ಸಂಕಷ್ಟ, ಡ್ಯಾಂಗಳಲ್ಲಿ ಎಷ್ಟು ನೀರು ಉಳಿದಿದೆ?

ಕಾವೇರಿ, ಕೃಷ್ಣಾ, ಹೇಮಾವತಿ, ತುಂಗಾ, ಭದ್ರಾ ಹೀಗೆ ಕನ್ನಡಿಗರ ನಾಡಲ್ಲಿ ದೊಡ್ಡ ದೊಡ್ಡ ನದಿಗಳೇ ಬತ್ತುತ್ತಿವೆ. ನದಿ ಹರಿಯುವ ಹಳ್ಳಿಗಳಲ್ಲೇ ನೀರಿಗೆ ಬರ ಎದುರಾಗಿದೆ, ಹಾಗೇ ಬೋರ್ ಕೂಡ ಬತ್ತಿ ಹೋಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಮಳೆಗೆ ಮೊರೆ ಇಟ್ಟಿದ್ದರು ಜನ & ರೈತರು. ಹೀಗಿದ್ದಾಗ, ಕರ್ನಾಟಕದಲ್ಲಿ ಇರುವ ಬಹುತೇಕ ಎಲ್ಲಾ ಡ್ಯಾಂಗಳು ಬತ್ತಿ ಹೋಗುತ್ತಿವೆ. ಹಾಗಾದ್ರೆ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ? ತಿಳಿಯೋಣ ಬನ್ನಿ.

ಮಳೆ ಬಂದರೆ ಮಾತ್ರ ಭೂಮಿಗೆ ಕಳೆ, ಇಲ್ಲವಾದರೆ ಪರದಾಟ ಗ್ಯಾರಂಟಿ. ಈ ಕಾರಣ ಸರಿಯಾಗಿ ಮಳೆ ಬೀಳಲಿ ಅಂತಾ ರೈತರು ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗ ಕಳೆದ ವರ್ಷ ಅಂದರೆ 2023 ರಲ್ಲಿ ಮಳೆ ಕೈಕೊಟ್ಟಿತ್ತು. ಹೀಗಾಗಿ ಸರಿಯಾಗಿ ಮಳೆಯೇ ಬೀಳಲಿಲ್ಲ. ಇದೇ ಕಾರಣಕ್ಕೆ ನಮ್ಮ ಕನ್ನಡ ನಾಡಿನ ಬಹುತೇಕ ಜಲಾಶಯಗಳು ಚಳಿಗಾಲದಲ್ಲೇ ಬತ್ತಿ ಹೋಗಿವೆ, ಇನ್ನು ಕೆಲವೇ ಕೆಲವು ಡ್ಯಾಂಗಳಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ. ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Karnataka Rain amp amp Karnataka Dam water level details As Per 01 03 2024

ಕರ್ನಾಟಕದ ಡ್ಯಾಂಗಳ ನೀರಿನ ಮಾಹಿತಿ

1) ಕೆಆರ್‌ಎಸ್ ​ ಜಲಾಶಯ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 15.97 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ​ ಜಲಾಶಯದಲ್ಲಿ 28.05 ಟಿಎಂಸಿ ನೀರು ಸಂಗ್ರಹವಾಗಿತ್ತು.

2) ಕಬಿನಿ ಜಲಾಶಯ: ಕಾವೇರಿ ಕೊಳ್ಳದ ಕಬಿನಿ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಈಗ 11.66 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಕಬಿನಿ ಜಲಾಶಯದಲ್ಲಿ 10.56 ನೀರು ಸಂಗ್ರಹವಾಗಿತ್ತು.

3) ಹೇಮಾವತಿ ಡ್ಯಾಂ: ಕಾವೇರಿ ನದಿ ಉಪನದಿ ಹೇಮಾವತಿಗೆ ಕಟ್ಟಿರುವ ಡ್ಯಾಂಗೆ ಕೂಡ ನೀರಿನ ಹರಿವು ಕಡಿಮೆಯಾಗಿದೆ. 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯವು, ಕಳೆದ 4-5 ವರ್ಷದಿಂದ ತುಂಬಿ ತುಳುಕಿತ್ತು. ಈ ಬಾರಿ ಕೇವಲ 13.38 ಟಿಎಂಸಿ ನೀರನ್ನು ಹೊಂದಿದೆ. ಕಳೆದ ವರ್ಷ ಈ ಸಮಯಕ್ಕೆ 21.50 ಟಿಎಂಸಿ ನೀರು ಡ್ಯಾಂನಲ್ಲಿ ಇತ್ತು.

4) ತುಂಗಭದ್ರಾ ಜಲಾಶಯ: ಬಯಲು ಸೀಮೆ ಜೀವನಾಡಿ ತುಂಗಭದ್ರಾ ಡ್ಯಾಂ ಪೂರ್ತಿಯಾಗಿ ತುಂಬಿಲ್ಲ. ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಇದೀಗ ಕೇವಲ 8.65 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಬರೋಬ್ಬರಿ 28.69 ಟಿಎಂಸಿ ನೀರು ಸಂಗ್ರಹವಿತ್ತು.

5) ಆಲಮಟ್ಟಿ ಡ್ಯಾಂ: ಉತ್ತರ ಕರ್ನಾಟಕದ ಜನರ ಜೀವನಾಡಿ, ಆಲಮಟ್ಟಿ ಡ್ಯಾಂಗೆ ಮಾತ್ರ ಈ ಬಾರಿ ಉತ್ತಮವಾಗಿ ನೀರು ಹರಿದು ಬಂದಿದೆ. ಇಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಆಲಮಟ್ಟಿ ಜಲಾಶಯದ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇದೀಗ 48.70 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಈ ಸಮಯಕ್ಕೆ 49.97 ಟಿಎಂಸಿ ನೀರು ಇತ್ತು.

6) ಲಿಂಗನಮಕ್ಕಿ ಜಲಾಶಯ: ಕರ್ನಾಟಕದ ದೊಡ್ಡ ಡ್ಯಾಂ ಎನಿಸಿಕೊಂಡಿರುವ ಲಿಂಗನಮಕ್ಕಿ ಜಲಾಶಯ ಈ ಬಾರಿ ಅರ್ಧ ಭಾಗ ಕೂಡ ತುಂಬಲಿಲ್ಲ. ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಬೀಳದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯಕ್ಕೆ ಕಡಿಮೆ ನೀರು ಬಂದಿತ್ತು. ಹೀಗಾಗಿ ಲಿಂಗನಮಕ್ಕಿ ಡ್ಯಾಂ ಒಟ್ಟು ಸಾಮರ್ಥ್ಯ 151 ಟಿಎಂಸಿ ಇದ್ದರೂ ಈಗ 39.07 ಟಿಎಂಸಿ ನೀರು ಇದೆ. ಕಳೆದ ವರ್ಷ ಈ ಸಮಯಕ್ಕೆ 66.15 ಟಿಎಂಸಿ ನೀರು ಇತ್ತು.

7) ಭದ್ರಾ ಡ್ಯಾಂ: ಭದ್ರಾ ಡ್ಯಾಂನಲ್ಲಿ 71 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಕೇವಲ 25.20 ಟಿಎಂಸಿ ನೀರು ಸಂಗ್ರಹವಾಗಿದ್ದು ಕಳೆದ ವರ್ಷ ಈ ಸಮಯಕ್ಕೆ ಭದ್ರಾ ಡ್ಯಾಂ 51.53 ಟಿಎಂಸಿ ನೀರನ್ನು ಹೊಂದಿತ್ತು.

8) ಘಟಪ್ರಭಾ ಜಲಾಶಯ: ಡ್ಯಾಂನಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಕೇವಲ 27.89 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಘಟಪ್ರಭಾ ​ಜಲಾಶಯದಲ್ಲಿ 24.01 ಟಿಎಂಸಿ ನೀರು ಇತ್ತು.

9) ಸೂಫಾ ಜಲಾಶಯ: ಮಲೆನಾಡು ಭಾಗದಲ್ಲಿ ಮಳೆ ಕೊರತೆ ಹಿನ್ನೆಲೆ ಸೂಫಾ ಡ್ಯಾಂನಲ್ಲಿ ಕೂಡ ನೀರಿನ ಕೊರತೆ ಕಾಡುತ್ತಿದೆ. ಸೂಫಾ ಡ್ಯಾಂ ಸಾಮರ್ಥ್ಯ 145 ಟಿಎಂಸಿ ಆಗಿದ್ದು, ಈಗ 58.04 ಟಿಎಂಸಿ ನೀರು ಇದೆ. ಕಳೆದ ವರ್ಷ 74.60 ನೀರು ಇತ್ತು.

10) ಹಾರಂಗಿ ಜಲಾಶಯ: ಹಾರಂಗಿ ಗರಿಷ್ಠ 8.50 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗ 3.38 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಕೂಡ ಬಹುತೇಕ ಇಷ್ಟೇ ಅಂದ್ರೆ 3.25 ಟಿಎಂಸಿ ನೀರು ಸಂಗ್ರಹವಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+