SWR: ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೇಸಿಗೆ ವಿಶೇಷ ರೈಲು ಕಾರ್ಯಾಚರಣೆ! ಮಾರ್ಗಗಳು, ನಿಲ್ದಾಣಗಳು

ಹುಬ್ಬಳ್ಳಿ, ಏಪ್ರಿಲ್ 03: ಬೇಸಿಗೆ ಅವಧಿಯಲ್ಲಿ ಸಾಲು ಸಾಲು ರಜೆಗಳಿವೆ. ಶಾಲಾ, ಕಾಲೇಜುಗಳ ಪರೀಕ್ಷೆ ಬಳಿಕ ರಜೆ ನೀಡಲಾಗುತ್ತದೆ. ಇದಲ್ಲದೇ ಬೇಸಿಗೆಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಿರುವ ಕಾರಣ, ದಟ್ಟಣೆ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆಗೆ ಮಾಡಲಿದೆ. ಈ ರೈಲುಗಳು ವಿವಿಧ ಮಾರ್ಗದಲ್ಲಿ ಹತ್ತಾರು ಟ್ರಿಪ್ ಸಂಚರಿಸಲಿವೆ. ವೇಳಾಪಟ್ಟಿ ದಿನಾಂಕ ಇಲ್ಲಿದೆ.

ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್‌ ಬೇಸಿಗೆ ವಿಶೇಷ ರೈಲು (06281/06282) 11 ಟ್ರಿಪ್ ಸಂಚಾರ

* ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್‌ ರೈಲು (06281) ಮೈಸೂರಿನಿಂದ ಪ್ರತಿ ಶನಿವಾರ ಏಪ್ರಿಲ್ (5,12,19, 26), ಮೇ (3,10,17,24,31), ಮತ್ತು ಜೂನ್ (7,14) ರಂದು ಬೆಳಗ್ಗೆ 8:00 ಗಂಟೆಗೆ ಸಂಚಾರ ಆರಂಭಿಸುತ್ತದೆ. ಸೋಮವಾರ ಬೆಳಗ್ಗೆ 06:55ಕ್ಕೆ ಅಜ್ಮೀರ್ ತಲುಪುತ್ತದೆ.

Karnataka Railways South Western Railway To Be Operate These Summer Trains Schedule

* ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್‌ ರೈಲು (06282) ಅಜ್ಮೀರ್‌ನಿಂದ ಪ್ರತಿ ಸೋಮವಾರ (ಏಪ್ರಿಲ್ 7,14,21,28) ಮತ್ತು (ಮೇ 5,12,19,26) ಮತ್ತು (ಜೂನ್ 2,9,16) ರಂದು ಸಂಜೆ 06:50ಕ್ಕೆ ಹೊರಡುತ್ತದೆ. ಬುಧವಾರ ಸಂಜೆ 5:30ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

ರೈಲಿನ ನಿಲುಗಡೆ ವಿವರ

ಮೈಸೂರು-ಅಜ್ಮೀರ್ ರೈಲು ಮಾರ್ಗದಲ್ಲಿ ಈ ವಿಶೇಷ ರೈಲು ಹಾಸನ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಭಾಗ್, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ರತ್ಲಾಂ, ಮಂದಸೋರ್, ನಿಮಾಚ್, ಚಿತ್ತೌರ್ಗಢ್, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

ಈ ವಿಶೇಷ ರೈಲು 14 ಎಸಿ 3 ಟೈರ್ ಬೋಗಿಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಕೋಚ್ ಸೇರಿದಂತೆ 20 ಬೋಗಿಗಳನ್ನು ಹೊಂದಿರಲಿವೆ.

Karnataka Railways South Western Railway To Be Operate These Summer Trains Schedule

ಬೆಂಗಳೂರು SMVT- ಭಗತ್ ಕಿ ಕೋಥಿ -SMVT ಬೆಂಗಳೂರು ರೈಲು(8 ಟ್ರಿಪ್)

* 06557 ಈ ಸಂಖ್ಯೆ ರೈಲು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಏಪ್ರಿಲ್ 5, 12, 19, 26 ರಂದು ಹಾಗೂ ಮೇ 3, 10, 17, 24 ರಂದು ಸಂಜೆ 7:00 ಗಂಟೆಗೆ ಸಂಚಾರ ಆರಂಭಿಸುತ್ತದೆ. ಅಲ್ಲಿಂದ ಸೋಮವಾರ ಮಧ್ಯಾಹ್ನ 1:40 ಕ್ಕೆ ಭಗತ್ ಕಿ ಕೋಥಿಯನ್ನು ತಲುಪುತ್ತದೆ.

* 06558 ಈ ಸಂಖ್ಯೆಯ ರೈಲು ಭಗತ್ ಕಿ ಕೋಥಿಯಿಂದ ಏಪ್ರಿಲ್ 7, 14, 21, 28 ಹಾಗೂ ಮೇ 5, 12, 19, 26 ರಂದು ರಾತ್ರಿ 11:10 ಕ್ಕೆ ಸಂಚಾರ ಆರಂಭಿಸಿ ಬುಧವಾರ ಮಧ್ಯಾಹ್ನ 3:30 ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ರೈಲು ನಿಲುಗಡೆ ನಿಲ್ದಾಣಗಳು

ಈ ರೈಲುಗಳು ಸಂಚಾರದ ವೇಳೆ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ಸಬರಮತಿ, ಮಹೇಸಾನಾ, ಭಿಲ್ಡಿ, ರಾಣಿವಾರ, ಮಾರ್ವಾರ್, ಬಿನ್ಮಲ್ ಮೊದ್ರನ್, ಜಲೋರ್, ಮೊಕಲ್ಸರ್, ಸಂಧಾರಿ ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ವೇಳಾಪಟ್ಟಿ ರೈಲು ವಿವರಕ್ಕಾಗಿ ಸಂಪರ್ಕಿಸಿ

ಒಟ್ಟು 21 ಬೋಗಿಗಳನ್ನು ಹೊಂದಿರುವ ರೈಲು 19 ಎಸಿ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಕೋಚ್‌ಗಳು ಒಳಗೊಂಡಿರುತ್ತದೆ. ನೀವು ಎಂದಿನಂತೆ ಐಆರ್‌ಸಿಟಿಸಿ ಆಪ್ ಮೂಲಕವು ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿ, ರೈಲು ವಿವರಕ್ಕಾಗಿ ನೀಡುವ ತಪ್ಪದೇ ಅಧಿಕೃತ ವೆಬ್‌ಸೈಟ್‌ಗೆ www.enquiry.indianrail.gov.in ಗೆ ಭೇಟಿ ನೀಡಬಹುದು. ಸಹಾಯಕ್ಕೆ 139 ಗೆ ಕರೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+