ಪ್ರಶ್ನೆ ಪತ್ರಿಕೆ ಸೋರಿಕೆಗೆ ವಾಟ್ಸಪ್ ಗ್ರೂಪ್ ಮಾಡಿದ್ದರು!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 12 : ದ್ವಿತೀಯ ಪಿಯುಸಿ ಪ್ರಶ್ನೆ ಪ್ರತಿಕೆ ಸೋರಿಕೆ ಮಾಡಲು ಆರೋಪಿಗಳು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಬಂಧಿತ ಕಿರಣ್ ವಿಚಾರಣೆ ವೇಳೆ ಸಿಐಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ.

ಹಾನಗಲ್ ಉಪ ಖಜಾನೆ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಕಿರಣ್‌ಗೆ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದ್ದ. ತುಮಕೂರಿನಲ್ಲಿ ಮಂಗಳವಾರ ಬಂಧಿಸಲಾದ ಕಿರಣ್‌ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಸಿಐಡಿ ವಶಕ್ಕೆ ಪಡೆಯಲಾಗಿದೆ. [ಪಿಯು ಪ್ರಶ್ನೆ ಪ್ರತ್ರಿಕೆ ಸೋರಿಕೆಯಾಗಿದ್ದು ಹಾವೇರಿಯಲ್ಲಿ]

2nd puc

ಹಾವೇರಿ ಜಿಲ್ಲೆಯ ಹಾನಗಲ್ ಉಪ ಖಜಾನೆ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ತೇರಗಾಂವ್ ಗ್ರಾಮದವನು. ಮಾರ್ಚ್ 19ರಂದು ಸಂತೋಷ್ ಸಂಪರ್ಕಿಸಿದ್ದ ಕಿರಣ್ ಹಣದ ಆಮಿಷವೊಡ್ಡಿ ಪತ್ರಿಕೆ ಬಹಿರಂಗ ಮಾಡಲು ಸಹಕಾರ ನೀಡುವಂತೆ ಹೇಳಿದ್ದ. [ಪತ್ರಿಕೆ ಸೋರಿಕೆ : ಟೊಮೆಟೊ ಅಣ್ಣನ ಮಗ ಸಿಕ್ಕಿಬಿದ್ದ]

ಕಿರಣ್‌ನಿಂದ ಹಣ ಪಡೆದ ಸಂತೋಷ್ ಉಪ ಖಜಾನೆ ಬೀಗವನ್ನು ಕಿರಣ್‌ಗೆ ನೀಡಿ, ಆತ ಪತ್ರಿಕೆಯ ಫೋಟೋ ತೆಗೆದುಕೊಳ್ಳಲು ನೆರವು ನೀಡಿದ್ದ. ಪತ್ರಿಕೆ ಫೋಟೋ ತಗೆದುಕೊಂಡ ಕಿರಣ್ ನಂತರ ಅದನ್ನು ಕೈ ಬರಹದಲ್ಲಿ ಬರೆದು, ಪತ್ರಿಕೆ ಸೋರಿಕೆಗಾಗಿಯೇ ಮಾಡಿದ್ದ ವಾಟ್ಸಪ್‌ ಗ್ರೂಪ್ ಮೂಲಕ ಉಳಿದ ಆರೋಪಿಗಳಿಗೆ ಕಳುಹಿಸಿದ್ದ. [ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?]

ಸಂತೋಷ್ ಆಸ್ಪತ್ರೆಯಲ್ಲಿ : ಸಂತೋಷ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಗುಣಮುಖನಾದ ನಂತರ ಸಿಐಡಿ ಪೊಲೀಸರು ಆತನನ್ನು ಬಂಧಿಸಲಿದ್ದಾರೆ. ಕೆಲವು ದಿನಗಳ ಹಿಂದೆ ಆಸ್ತಿ ವ್ಯಾಜ್ಯದ ವಿಚಾರದಲ್ಲಿ ಸೋದರ ಸಂಬಂಧಿಗಳ ಜೊತೆ ಜಗಳವಾಡುವಾಗ ಸಂತೋಷ್ ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Criminal Investigation Department of Karnataka has finally managed to track the trail relating to the question paper leak case. During the questioning Kiran said that he got in touch with the second division assistant with whom he had struck a deal.
Please Wait while comments are loading...