ಕರ್ನಾಟಕ ಪಬ್ಲಿಕ್ ಶಾಲೆ; ಹೊಸದಾಗಿ ಉಪ ಪ್ರಾಂಶುಪಾಲ ಹುದ್ದೆ ನೇಮಕ
ಬೆಂಗಳೂರು, ಜನವರಿ 06; ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಉಪ ಪ್ರಾಂಶುಪಾಲರ ಹುದ್ದೆಗಳನ್ನು ಹೊಸದಾಗಿ ಸೃಜನೆ ಮಾಡುವ ಬಗ್ಗೆ ಆದೇಶ ಹೊರಡಿಸಲಾಗಿದೆ.
2018-19ನೇ ಸಾಲಿನಲ್ಲಿ 176 ಮತ್ತು 2019-20ನೇ ಸಾಲಿನಲ್ಲಿ 100 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಿದ್ದು ಸದರಿ ಶಾಲೆಗಳಿಗೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಉಪ ಪ್ರಾಂಶುಪಾಲರ ಹುದ್ದೆಗಳನ್ನು ಹೊಸದಾಗಿ ಸೃಜನೆ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ.
ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಇವರ ಪತ್ರ ಸಂಖ್ಯೆಯ ಪ್ರಸ್ತಾವನೆಯಂತೆ ಈ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಸರ್ಕಾರವು 'ಪ್ರತಿ ಮಗುವೂ ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ' ಎಂಬ ಘೋಷ ನೀತಿಯನ್ನು ಅಳವಡಿಸಿಕೊಂಡಿದ್ದು, ಪ್ರತಿ ಮಗುವಿಗೂ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.

ಅದೇ ವೇಳೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಹಕರಿಸುವಂತೆ ಶಾಲೆಗಳಲ್ಲಿ ಬೋಧನಾ ಪದ್ಧತಿಯನ್ನು ಸುಧಾರಿಸಲು ಅವಿಷ್ಕೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ದೂರದೃಷ್ಟಿ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಇತರ ಸಂಪನ್ಮೂಲಗಳ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಒಟ್ಟುಗೂಡಿಸಿ, 01 ರಿಂದ 12ನೇ ತರಗತಿಯವರೆಗೆ ಯಾವುದೇ ಅಡೆ ತಡೆ ಇಲ್ಲದ ನಿರಂತರವಾಗಿ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಪೂರೈಸಬೇಕು.
ಶಿಕ್ಷಣದ ಗುಣಮಟ್ಟ, ಸುಧಾರಿಸಲು ಕರ್ನಾಟಕ ರಾಜ್ಯದಲ್ಲಿ ತಾಲ್ಲೂಕಿಗೆ ಒಂದರಂತೆ 2018- 19ನೇ ಸಾಲಿನಿಂದ 176 ಮತ್ತು 2019-20ನೇ ಸಾಲಿನಿಂದ 100 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಈಗಾಗಲೇ ಪ್ರಾರಂಭಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಅಭಿಯಾನ ಬೆಂಗಳೂರು ಇವರು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ದೈನಂದಿನ ಶೈಕ್ಷಣಿಕ ಮತ್ತು ಸುಲಲಿತ ಆಡಳಿತಾತ್ಮಕ ನಿರ್ವಹಣೆಗಾಗಿ ಹಾಗೂ ಸರ್ಕಾರದ ಯೋಜನಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಉಪಪ್ರಾಂಶುಪಾಲರ ಹುದ್ದೆ ಅತ್ಯಂತ ಮಹತ್ವದ್ದಾಗಿದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಶಾಲೆಯ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಮುಖ್ಯಸ್ಥರಾಗಿರುವುದು ಹಾಗೂ ಇಡೀ ಶಾಲೆಯ ವೇತನ ಸೆಳೆಯುವ ಮತ್ತು ವಿತರಣೆ ಮಾಡುವ ಅಧಿಕಾರ ಅವರದ್ದೇ ಆಗಿರುತ್ತದೆ.
ಅಸ್ತಿತ್ವದಲ್ಲಿರುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಪ್ರಾಂಶುಪಾಲರ ಹುದ್ದೆಯಲ್ಲಿದ್ದು, ಪ್ರಾಂಶುಪಾಲರಿಗೆ ಸಹಾಯಕರಾಗಿರುವುದು ಎಂದು ತಿಳಿಸಿರುತ್ತಾರೆ. ಈ ಹಿನೆಲೆಯಲ್ಲಿ ಕೆ. ಪಿ. ಎಸ್ ಶಾಲೆಗಳ ಕಾರ್ಯಕಾರಿಗಳು ಉಪ ಪ್ರಾಂಶುಪಾಲರ ಹುದ್ದೆ ಮಂಜೂರಾಗದೇ ಇರುವ ಕೆ. ಪಿ. ಎಸ್. ಗಳಲ್ಲಿ ಹಿರಿಯ ಸಹ ಶಿಕ್ಷಕರು ಬೋಧನ ಜೊತೆಗೆ ಉಪ ಪ್ರಾಂಶುಪಾಲರು, ಪ್ರಾಂಶುಪಾಲರ ಅನುಪ ಸ್ಥಿತಿಯಲ್ಲಿ ಇಡೀ ಕೆ. ಪಿ. ಎಸ್. ಸಿನ ಪ್ರಭಾರವನ್ನು ವಹಿಸಬೇಕಾಗುತ್ತದೆ.
ಆದ್ದರಿಂದ ಕೆ. ಪಿ. ಎಸ್ ಶಾಲೆಗಳಲ್ಲಿ ಪತ್ರಾಂತಿಕ ಗ್ರೂಪ್-ಬಿ ಅಧಿಕಾರಿಗಳೇ ಉಪ ಪ್ರಾಂಶುಪಾಲರಾಗಿ ಇರುವುದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತ, ಈ ಹಿನ್ನೆಲೆಯಲ್ಲಿ ಉಪಪ್ರಾಂಶುಪಾಲರು/ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಮಂಜೂರಾತಿ ಆಗದೇ ಇರುವ ಕೆ. ಪಿ. ಎಸ್. ಶಾಲೆಗಳಿಗೆ ಹೊಸದಾಗಿ ಕೆಳಕಂಡಂತೆ ಹುದ್ದೆಗಳನ್ನು ಸೃಜನೆ ಮಾಡುವಂತೆ ಕೋರಿರುತ್ತಾರೆ.
ರಾಜ್ಯದ ಒಟ್ಟು 120 ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾತಿ ಇಲ್ಲದ ಕೆ. ಪಿ. ಎಸ್. ಶಾಲೆಗಳ ಪೈಕಿ ಪಟ್ಟಿಯಲ್ಲಿ ಸೂಚಿಸಿದ 27 ಹೆಚ್ಚುವರಿ ಹುದ್ದೆಗಳನ್ನು ಮುಖ್ಯಶಿಕ್ಷಕರ ಹುದ್ದೆ ಮಂಜೂರಾತಿ ಇಲ್ಲದ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸ್ಥಳಾಂತರಿಸಬಹುದು.
ಉಳಿದ 93 ಕೆಪಿಎಸ್ ಶಾಲೆಗಳಿಗೆ ಹೊಸದಾಗಿ ಮುಖ್ಯ ಶಿಕ್ಷಕರ/ ಉಪಪ್ರಾಂಶುಪಾಲರ ಸಮನಾಂತರ ಹುದ್ದೆಗಳ ಸೃಜನೆ ಮಾಡುವಂತೆ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಇವರು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಮೇಲಿನ ವಿವರಣೆಗಳ ಹಿನ್ನೆಲೆಯಲ್ಲಿ, ಸದರಿ ಪುಸ್ತಾವನೆಯನ್ನು ಪರಿಶೀಲಿಸಲಾಗಿ, ಈ ಕೆಳಕಂಡಂತೆ ಆದೇಶಿಸಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು/ ಉಪ ಪ್ರಾಂಶುಪಾಲರ ವೃಂದದ 58 ಹುದ್ದೆಗಳನ್ನು ಸೃಜಿಸಲು ಹಾಗೂ 500ಕ್ಕೂ ಕಡಿಮೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೊಂದಿರುವ 35 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅವಶ್ಯವಿರುವ ಮುಖ್ಯೋಪಾಧ್ಯಾಯರು/ ಉಪ ಪ್ರಾಂಶುಪಾಲ ವೃಂದದ ಹುದ್ದೆಗಳನ್ನು ಇತರೆ ಶಾಲೆ/ ಕಚೇರಿಗಳಿಂದ ಸ್ಥಳಾಂತರಿಸುವ ಷರತ್ತಿಗೊಳಪಡಿಸಿ ಸರ್ಕಾರದ ಮಂಜೂರಾತಿ ನೀಡಿದೆ.
ಹೊಸದಾಗಿ ಸೃಜಿಸಬೇಕಾದ ಹುದ್ದೆಗಳು; ಬೆಂಗಳೂರು (ಮೈಸೂರು ಮತ್ತು ಬೆಂಗಳೂರು ವಿಭಾಗ) ಮಂಜೂರಾದ ಗ್ರೂಪ-ಬಿ ವೃಂದದ ಮುಖ್ಯ ಶಿಕ್ಷಕರು/ ಉಪ ಪ್ರಾಂಶುಪಾಲರ ಸಮಾನಾಂತರ ಹುದ್ದೆಗಳ ಸಂಖ್ಯೆ 101. ಹೊಸದಾಗಿ ಸೃಜಿಸಬೇಕಾದ ಹುದ್ದೆಗಳ ಸಂಖ್ಯೆ 59. ಧಾರವಾಡ 43, ಕಲಬುರಗಿ 18.











Click it and Unblock the Notifications