ಕರ್ನಾಟಕ ಜೈವಿನ ಇಂಧನ ನೀತಿ ಜಾರಿ ಪ್ರಸ್ತಾವನೆ: ಏನೆಲ್ಲ ಪ್ರಯೋಜನ ಆಗಲಿದೆ?
ಬೆಂಗಳೂರು, ಜುಲೈ 05: ಸಸ್ಯ ಬೀಜ, ಕೃಷಿ ತ್ಯಾಜ್ಯ, ಪ್ರಾಣಿಕೊಬ್ಬು, ಆಮ್ಲಜನಕ ರಹಿತ ಇತರ ಮೂಲಗಳಿಂದ ಉತ್ಪಾದಿಸಬಹುದಾದ ಜೈವಿಕ ಇಂಧನ ವಲಯಕ್ಕೆ ಪೂರಕವಾದ ನೀತಿ ಕರ್ನಾಟಕದಲ್ಲಿ ರೂಪಿಸಬೇಕೆಂಬ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಮನವಿ ಸಲ್ಲಿಸಲಾಗಿದೆ.
ವಿಧಾನಸೌದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಯಲ್ಲಿ ಜೈವಿಕ ಇಂಧನ ಕಾರ್ಯಯೋಜನೆ, ಜೈವಿಕ ನೀತಿ ಜಾರಿ ಬಗ್ಗೆ ಹಾಗೂ ಒಂದು ವರ್ಷದ ಕಾರ್ಯಗಳ ಕುರಿತು ವರದಿಯನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ ಸುಧೀಂದ್ರ, ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ್, ಸದಸ್ಯರಾದ ದಿವಾಕರ್ ಇತರರು ಸಲ್ಲಿಸಿದರು.

ಕರ್ನಾಟಕದಲ್ಲಿ ರಾಜ್ಯದಲ್ಲಿ ಜೈವಿಕ ಇಂಧನ ನೀತಿ ಅನುಷ್ಠಾನಗೊಂಡರೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ನಿರೀಕ್ಷೆ ಸಾಧ್ಯವಿದೆ. ನಮ್ಮ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಬಂಡವಾಳ ಹೂಡಿಕೆಕೆದಾರರನ್ನು ಆಕರ್ಷಿಸಲು ನೂತನ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿಯು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಈ ನೀತಿಗೆ ಅನುಮೋದನೆ ದೊರೆತು ಉತ್ಪಾದನಾ ಘಟಕಗಳಿಗೆ ರಿಯಾಯಿತಿ, ಪ್ರೋತ್ಸಾಹ ಹಾಗೂ ಮೂಲಸೌಕರ್ಯ ಒದಗಿಸಿದರೆ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಬಹುದು ಎಂದು ಹೇಳಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಡಿ.ಕೆ. ಶಿವಕುಮಾರ್, ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಎಲ್ಲಾ ಹಂತದಲ್ಲೂ ಸಹಕಾರ ನೀಡಲಿದೆ. ನೂತನ ಜೈವಿಕ ಇಂಧನ ನೀತಿ ಅನುಮೋದನೆಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್.ಈ.ಸುಧೀಂದ್ರ ಅವರೊಂದಿಗೆ ಮಂಡಳಿಯ ಐದು ವರ್ಷದ ಕಾರ್ಯಾವಧಿ ಕುರಿತು ವಿಧಾನಸೌಧಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು. ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಯೋಜನೆಗಳು ಹಾಗೂ ಉದ್ದೇಶಿತ ನೂತನ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ಕುರಿತು ಚರ್ಚೆ ನಡೆಸಲಾಯಿತು. pic.twitter.com/haGfCzSr5Y
— DK Shivakumar (@DKShivakumar) July 4, 2025
ಜೈವಿಕ ಇಂಧನದಲ್ಲಿ ಭಾರತ ಗುರಿ ಏನಿದೆ?
ಭಾರತ ಮುಂದಿನ ಒಂದು ವರ್ಷದೊಳಗೆ (2026) ಪೆಟ್ರೋಲ್‌ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣದ ಗುರಿ ಹೊಂದಿದೆ. ಆ ಪೈಕಿ ಈಗಾಗಲ ದೇಶವಿ ಶೇಕಡಾ 19.6ರಷ್ಟು ಗುರಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ನಿಗದಿತ ಮತ್ತಷ್ಟು ಗುರಿ ಈಡೇರಲಿದೆ. ಭಾರತವು ಶೇಕಡಾ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವ ಉದ್ದೇಶ ಹೊಂದಿದೆ. ಪೆಟ್ರೋಲ್ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುವುದರತ್ತ ಭಾರತ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ಇದೀಗ ಕರ್ನಾಟಕದಲ್ಲೂ ಜೈವಿಕ ಇಂಧನ ನೀತಿ ಜಾರಿಯಾದರೆ, ಹೂಡಿಕೆ ಹೆಚ್ಚಾಗಿ, ಇಂಧನ ಉತ್ಪಾದನೆಗೆ ಉತ್ತೇಜನ ಸಿಕ್ಕಂತಾಗುತ್ತದೆ.












Click it and Unblock the Notifications