Priyanka Gandhi: ಬಿಜೆಪಿಗರಿಗೆ ಠಕ್ಕರ್‌ ಕೊಡಲು ರಾಹುಲ್‌ ಸಹೋದರಿ ಎಂಟ್ರಿ: ಟಿ.ನರಸಿಪುರದಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಮೈಸೂರು,ಏಪ್ರಿಲ್25:‌ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಎಲ್ಲೆಲ್ಲೂ ಪ್ರಚಾರದ ಭರಾಟೆ ಜೋರಿದೆ. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್‌ ನಾಯಕರು ಭರ್ಜರಿ ಪ್ರಚಾರ ಕಾರ್ಯವನ್ನ ನಡೆಸುತ್ತಿದ್ದು, ಇದೀಗ ಬಿಜೆಪಿ ಹೈಕಮಾಂಡ್‌ ನಾಯಕರಿಗೆ ಠಕ್ಕರ್‌ ಕೊಡಲು ಕಾಂಗ್ರೆಸ್‌ ಮುಂದಾಗಿದೆ.

ಚುನಾವಣಾ ಪ್ರಚಾರಕ್ಕಾಗಿ ರಾಹುಲ್‌ ಗಾಂಧಿ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೇ ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಟಿ ನರಸೀಪುರದಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಸರ್ಕಾರದ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Karnataka Polls: Priyanka Gandhi Fierce Attack Against BJP Government

ಮೋದಿ ಅವರ ಆತ್ಮೀಯ ಸ್ನೇಹಿತರಾದ ಅಧಾನಿ, ಅಂಬಾನಿ ಅವರು ಸಾವಿರಾರು ಕೋಟಿ ಹಣವನ್ನು ಸಂಪಾದಿಸುತ್ತಿದ್ದು, ಜಮೀನಿನಲ್ಲಿ ಬೆವರು ಸುರಿಸಿ ದುಡಿಯುವ ರೈತರಿಗೆ ಸೂಕ್ತವಾಗಿ ಹಣ ಸೀಗುತ್ತಿಲ್ಲ. ದೊಡ್ಡ ಉದ್ಯೋಗಪತಿಗಳಿಗೆ ಬ್ಯಾಂಕುಗಳಿಂದ ಸುಲಭ ಸಾಲ ಸಿಗುತ್ತವೆ. ಅವರಿಂದ ಜಿಎಸ್ ಟಿ ಕೂಡ ಸಂಗ್ರಹಿಸುವುದಿಲ್ಲ. ಆದರೆ ಜನಸಾಮಾನ್ಯರಿಂದ ಜಿಎಸ್ ಟಿ ಸುಲಿಗೆ ಮಾಡುತ್ತಾರೆ. ಅಡುಗೆ ಅನಿಲಕ್ಕೆ 1100 ರೂ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದ್ದಾರೆ.

ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ ಗಗನಕ್ಕೇರಿದೆ. ನಿಮ್ಮಿಂದ ಸುಲಿಗೆ ಮಾಡಿದ ಹಣವನ್ನು ತಮ್ಮ ಉದ್ಯಮಿ ಸ್ನೇಹಿತರಿಗೆ ನೀಡಲಾಗುತ್ತಿದೆ. ನಿಮ್ಮ ಸಹಾಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀವು ಬಡತನದಲ್ಲಿ ಸಿಲುಕಿದ್ದು, ನಿಮ್ಮನ್ನು ಬಡತನದಿಂದ ಮೇಲೆತ್ತಲು ಅವರಿಗೆ ಇಷ್ಟವಿಲ್ಲ. ನಿಮ್ಮನ್ನು ಬಡತನದಿಂದ ಮೇಲೆತ್ತಿದರೆ, ನೀವು ಅವರ ವಿರುದ್ಧ ನಿಂತು ಪ್ರಶ್ನಿಸುತ್ತೀರಿ ಎಂದು ಅವರು ನಿಮ್ಮನ್ನು ಮೇಲೆತ್ತಲು ಬಯಸುವುದಿಲ್ಲ. ಹೀಗಾಗಿ ನಿಮ್ಮನ್ನು ತುಳಿದು ಹಾಕುತ್ತಾರೆ ಎಂದರು.

Karnataka Polls: Priyanka Gandhi Fierce Attack Against BJP Government

ಬಿಜೆಪಿ ನಾಯಕರು ಇಲ್ಲಿಗೆ ಬಂದು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ, ಪ್ರಧಾನಿಗಳು ಬಂದು ವಿರೋಧ ಪಕ್ಷಗಳು ನನ್ನ ಸಮಾಧಿ ತೋಡಲು ಬಯಸುತ್ತಿವೆ ಎಂದು ಹೇಳಿದ್ದಾರೆ. ಇದು ಎಂತಹ ಮಾತುಗಳು. ಈ ದೇಶದಲ್ಲಿ ಯಾರೊಬ್ಬರೂ ಈ ರೀತಿ ಆಲೋಚನೆ ಮಾಡುವುದಿಲ್ಲ. ನಮ್ಮ ಪ್ರಧಾನಿಗಳ ಆರೋಗ್ಯ ಉತ್ತಮವಾಗಿರಲಿ ಎಂದು ನಾವು ಆಶೀಸುತ್ತೇವೆ. ಆದರೆ ಇದು ಚುನಾವಣೆಯ ವಿಚಾರವೇ? ಇಂತಹ ವಿಚಿತ್ರ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಬದಲು, ನಿರುದ್ಯೋಗ, ಬೆಲೆ ಏರಿಕೆಯಂತಹ ಪ್ರಮುಖ ವಿಚಾರಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಈ ಚುನಾವಣೆಯಲ್ಲಿ ನಿಮ್ಮ ಸಾಧನೆಗಳ ವಿಚಾರಗಳ ಮೇಲೆ ನೀವು ಹೆಚ್ಚು ಮಾತನಾಡಬೇಕು. ಇದು ನಿಮ್ಮ ಜವಾಬ್ದಾರಿ. ಈ ಚುನಾವಮೆ ಮೋದಿಯವರ ಬಗ್ಗೆ ಅಲ್ಲ, ಇದು ಯಾವುದೇ ರಾಜಕೀಯ ನಾಯಕರ ಬಗ್ಗೆ ಅಲ್ಲ. ಈ ಚುನಾವಣೆ ಕರ್ನಾಟಕ ರಾಜ್ಯದ ವಿಚಾರವಾಗಿದೆ. ಕನ್ನಡಿಗರ ಅಸ್ಮಿತೆ, ಭವಿಷ್ಯದ ಬಗ್ಗೆ ಈ ಚುನಾವಣೆ ನಡೆಯುತ್ತಿದೆ. ನಿಮಗೆ ಎಲ್ಲಾ ರೀತಿಯ ಸಹಾಯ ಮಾಡಬೇಕಿದ್ದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದರು.

ನೀವೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ವಿಶ್ವಾಸವಿದೆ. ಸರ್ಕಾರ ಯಂತ್ರಗಳು ದುರ್ಬಲವಾಯಿತು. ಬಹಳ ಬೇಸರದ ಸಂಗತಿ ಎಂದರೆ 40% ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡಿದೆ. ನಾಚಿಕೆ ಬಿಟ್ಟು ರಾಜ್ಯ ಲೂಟಿ ಮಾಡಿದೆ. ಗುತ್ತಿಗೆದಾರರು ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡರು. ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಸಂಘಗಳು ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನ, ಪರಿಹಾರ ಸಿಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+