ಜನನಾಯಕರ ನೈತಿಕ ಅಧಃಪತನಕ್ಕೆ ಸಾಕ್ಷಿಯಾದ ಹನಿಟ್ರ್ಯಾಪ್ ಚರ್ಚೆ

ಬೆಂಗಳೂರು, ಮಾರ್ಚ್ 21: ಕರ್ನಾಟಕದ ರಾಜಕಾರಣದಲ್ಲಿ ಅದರಲ್ಲೂ ಸದನದಲ್ಲಿ ಹನಿಟ್ರ್ಯಾಪ್ ಪ್ರಕರಣದ ಸದ್ದು ಮಾಡಿರುವುದು ನಿಜಕ್ಕೂ ನಮ್ಮ ಜನನಾಯಕರ ನೈತಿಕ ಮೌಲ್ಯದ ಅಧಃಪತನಕ್ಕೆ ಸಾಕ್ಷಿಯಾಗಿದೆ. ಸರ್ಕಾರ ತಮ್ಮದೇ ಇದ್ದರೂ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ದೂರು ನೀಡಿ, ಯಾರು ತಪ್ಪಿತಸ್ಥರಿದ್ದರೋ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದನ್ನು ಬಿಟ್ಟು ಸಚಿವರೊಬ್ಬರು ಅದರ ಬಗ್ಗೆ ಸದನದಲ್ಲಿ ಚರ್ಚೆ ಮಾಡುವ ಮೂಲಕ ಮತ್ಯಾರದ್ದೋ ಕಡೆಗೆ ಬೊಟ್ಟು ಮಾಡುವುದೆಷ್ಟು ಸರಿ? ಎಂಬುದು ಜನ ಕೇಳುತ್ತಿರುವ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ ನಂತಹ ಪ್ರಕರಣಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿವೆ. ಕೆಲವರು ಉದ್ಯಮಿಗಳು ಸೇರಿದಂತೆ ಹಲವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವುತ್ತಿರುವುದು ಹೊಸದೇನಲ್ಲ. ಈಗಾಗಲೇ ಇಂತಹ ಹತ್ತಾರು ಪ್ರಕರಣಗಳನ್ನು ಪೊಲೀಸರು ಬಯಲು ಮಾಡಿದ್ದಾರೆ. ಆದರೂ ಪ್ರತಿಯೊಬ್ಬರನ್ನೂ ಇವತ್ತಿನವರೆಗೆ ಕಾಡುತ್ತಿರುವ ಪ್ರಶ್ನೆ ಏನೆಂದರೆ ನೀವು ನೈತಿಕವಾಗಿದ್ದರೆ ನಿಮ್ಮನ್ನು ಹನಿಟ್ತ್ಯಾಪ್ ಎಂಬ ಖೆಡ್ಡಾಕ್ಕೆ ಕೆಡವಲು ಸಾಧ್ಯನಾ? ನಿಮ್ಮ ದೌರ್ಬಲ್ಯ ಗೊತ್ತಿದ್ದರೆ ಮಾತ್ರ ಇಂತಹದೊಂದು ಜಾಲದಲ್ಲಿ ಸಿಲುಕಿಸಲು ಸಾಧ್ಯ ತಾನೆ? ಹಾಗಾದರೆ ನಿಮ್ಮ ಬುದ್ದಿಗೇನಾಗಿತ್ತು?

Karnataka Political Leaders Face Ethical Decline Over Honeytrap Controversy

ಇವತ್ತು ಸದನದಲ್ಲಿ ನಿಂತು ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುವ ಬದಲಿಗೆ ಹನಿಟ್ರ್ಯಾಪ್ ವಿಚಾರವನ್ನು ಮಾತನಾಡುತ್ತಾರೆ. ಅದರ ಬಗ್ಗೆ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ ಎನ್ನುವುದಾದರೆ ನಮ್ಮ ರಾಜ್ಯದ, ನಮ್ಮ ನಾಯಕರು ಜನರ ಮುಂದೆ ಬೆತ್ತಲೆಯಾಗಿದ್ದಾರೆ ಎಂದರ್ಥ. ಇಷ್ಟಕ್ಕೂ ಇವತ್ತು ರಾಜಕೀಯ ನಾಯಕರು ಹನಿಟ್ರ್ಯಾಪ್ ಕುರಿತಂತೆ ಮಾತನಾಡುತ್ತಿರುವ ಮಾತುಗಳನ್ನು ಕೇಳಿದರೆ ನಮ್ಮವರೇ ಆದ ಪ್ರಭಾವಿ ರಾಜಕೀಯ ನಾಯಕರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಹೀಗಾಗಿ ಆ ನಾಯಕ ಯಾರು?

48 ನಾಯಕರು ಹನಿಟ್ರ್ಯಾಪ್ ಜಾಲದಲ್ಲಿ

ಇನ್ನು ಸುಮಾರು 48 ಜನ ನಾಯಕರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಅದರ ವೀಡಿಯೋಗಳನ್ನು ಮಾಡಿಟ್ಟಿದ್ದಾರೆ. ಅದರಲ್ಲಿ ಎಲ್ಲ ಪಕ್ಷಗಳ ನಾಯಕರಿದ್ದಾರೆ ಎನ್ನುವ ಮಾತಿದೆಯಲ್ಲ ಅದು ನಿಜಕ್ಕೂ ನಮ್ಮ ರಾಜ್ಯದ ಮಾನ ಹರಾಜು ಹಾಕುವ ವಿಚಾರವಾಗಿದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುವ ಮೂಲಕ ನಾಯಕರು ತಮ್ಮ ಮಾನವನ್ನು ತಾವೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾದರಾ? ಅಥವಾ ಮಾನ ಕಳೆದು ಕೊಂಡರಾ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಮೊದಲೇ ಈ ಬಗ್ಗೆ ಚರ್ಚೆ ಮಾಡುವ ಮೂಲಕ ನಾಳೆ ಒಂದು ವೇಳೆ ಅಂತಹ ದೃಶ್ಯಗಳು ಹರಿದಾಡಿದರೂ ಅದರಲ್ಲಿ ನಮ್ಮದೇನು ಪಾತ್ರವಿಲ್ಲ ನಾವು ಅಮಾಯಕರೆಂದು ಬಿಂಬಿಸುವ ಪ್ರಯತ್ನನಾ? ಅದು ಗೊತ್ತಿಲ್ಲ.

ಹಾಗೆನೋಡಿದರೆ ಕರ್ನಾಟಕದ ಹಲವು ರಾಜಕೀಯ ನಾಯಕರು ಈಗಾಗಲೇ ಮಣ್ಣು ತಿನ್ನುವ ಕೆಲಸ ಮಾಡಿದ್ದು ತಮ್ಮ ಬಗ್ಗೆ ಯಾವುದೇ ದೃಶ್ಯಗಳನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇನ್ನು ಕೆಲವರ ಬಗ್ಗೆ ಗುಸುಗುಸು ಸುದ್ದಿಗಳಷ್ಟೆ ಹರಿದಾಡುತ್ತಿವೆ. ಇದೆಲ್ಲವೂ ರಾಜಕೀಯ ದುರುದ್ದೇಶಕ್ಕಾಗಿ ಕೆಲವು ಪ್ರಭಾವಿ ನಾಯಕರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಅವರ ಖಾಸಗಿ ವೀಡಿಯೋಗಳನ್ನು ಸಂಗ್ರಹಿಸಿಡುವ ಜಾಲ ಕೆಲಸ ಮಾಡುತ್ತಿದೆ ಎಂಬಂತಹ ಮಾತುಗಳನ್ನು ಹಲವು ನಾಯಕರು ಹೇಳುತ್ತಲೇ ಬರುತ್ತಿದ್ದಾರೆ.

Karnataka Political Leaders Face Ethical Decline Over Honeytrap Controversy

ಹನಿಟ್ರ್ಯಾಪ್‌ನ ಹಿಂದಿನ ಸತ್ಯಾಸತ್ಯತೆ ಹೊರಬರಲಿ

ಇಂತಹ ವಿಚಾರಗಳಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಿ ಅದರಲ್ಲೂ ಆಡಳಿತ ಪಕ್ಷದ ಸಚಿವರುಗಳನ್ನೇ ಟಾರ್ಗೆಟ್ ಮಾಡಲಾಗಿದೆ ಎನ್ನುವುದಾದರೆ ಏಕೆ ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ಹೊರತರಬಾರದು? ವ್ಯವಸ್ಥಿತವಾಗಿ ಜಾಲ ನಡೆಸುತ್ತಿರುವ ಆ ಪ್ರಭಾವಿ ನಾಯಕ ಯಾರೆಂಬುದನ್ನು ಪತ್ತೆಹಚ್ಚಬಾರದು? ಆದರೆ ಇದ್ಯಾವುದನ್ನು ಮಾಡದೆ ತಮ್ಮ ಬುಡಕ್ಕೆ ಬಂದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಅನುಕಂಪ ಸೃಷ್ಟಿಸಿಕೊಳ್ಳುವ ಮತ್ತು ನುಣುಚಿಕೊಳ್ಳುವ ಪ್ರಯತ್ನ ಮಾಡುವುದೆಷ್ಟು ಸರಿ? ಇಲ್ಲಿ 48 ನಾಯಕರನ್ನು ಹನಿಟ್ರ್ಯಾಪ್ ಗೆ ಕೆಡವಲಾಗಿದೆ ಎನ್ನುವುದು ಗಂಭೀರ ವಿಚಾರವೇ.

ಈ ಮಾತನ್ನು ಬಹುಶಃ ಹಾದಿ, ಬೀದಿಯಲ್ಲಿ ನಿಂತು ಚರ್ಚೆ ಮಾಡಿದ್ದರೆ ಸುಲಭವಾಗಿ ತಳ್ಳಿಹಾಕಿಬಿಡಬಹುದಿತ್ತು. ಆದರೆ ನಮ್ಮ ನಾಯಕರು ಪಕ್ಷಬೇಧ ಮರೆತು ಚರ್ಚೆ ಮಾಡಿರುವುದು ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲ್ಪಡುವ ಸದನದಲ್ಲಿ. ಹೀಗಿರುವಾಗ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಈ ಪ್ರಕರಣಗಳಿಗೆ ತಾರ್ಕಿಕ ಅಂತ್ಯವನ್ನು ಕಾಣಿಸದೆ ಹೋದರೆ ಅದಕ್ಕಿಂತ ದುರಂತದ ಸಂಗತಿ ಮತ್ತೊಂದಿಲ್ಲ. ಇಲ್ಲಿ ನಿಜವಾಗಿಯೂ ಹನಿಟ್ರ್ಯಾಪ್ ನಡೆದಿಯಾ? ಹಾಗೊಂದು ವೇಳೆ ನಡೆದಿದ್ದರೆ ಮಾಡಿದವರು ಯಾರು? ಏಕೆ ಮಾಡಿಸಿದರು? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ತಾಯಿ ಭುವನೇಶ್ವರಿ ನಿಮ್ಮನ್ನು ಕ್ಷಮಿಸಲ್ಲ

ಇನ್ನು ಹನಿಟ್ರ್ಯಾಪ್ ಮಾಡಲಾಗಿದೆ. ನಾವು ಅಮಾಯಕರು ಎಂದು ಪೇಚಾಡುವವರ ನೈತಿಕತೆಯ ಪ್ರಶ್ನೆಯೂ ಉದ್ಭವಿಸದಿರದು. ಇಲ್ಲಿ ಎಲ್ಲ ನಾಯಕರು ಮಾತನಾಡುವ ರೀತಿ, ನೀತಿಗಳು ರಾಜಕೀಯವಾಗಿ ಮಾಡಲಾಗುತ್ತಿದೆ ಎಂಬುದನ್ನು ಹೇಳುತ್ತಿದೆ. ರಾಜಕೀಯದಾಚೆಗೆ ಯಾರೋ ಈ ಕೃತ್ಯಗಳನ್ನು ಮಾಡಿಲ್ಲ ನಮ್ಮಲ್ಲೇ ಸಿಡಿ ಫ್ಯಾಕ್ಟರಿ ಮಾಲೀಕರಿದ್ದಾರೆ ಎಂಬುದನ್ನು ನಮ್ಮ ನಾಯಕರೇ ಒಪ್ಪಿಕೊಳ್ಳುತ್ತಿರುವುದನ್ನು ನೋಡಿದರೆ ತಾಯಿ ಭುವನೇಶ್ವರಿ ಒಡಲಲ್ಲಿ ಎಂತಹ ಜನನಾಯಕರಿದ್ದಾರೆ ಎಂಬ ಬೇಸರ ಮೂಡದಿರದು. ತನಿಖೆ ಮಾಡದೆ ಇಲ್ಲಿಗೆ ಮುಚ್ಚಿ ಬಿಟ್ಟರೆ ರಾಜ್ಯದ ಜನತೆ ಖಂಡಿತಾ ಕ್ಷಮಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+