• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ ಲಾಕ್ ಮೂಡ್ ನಲ್ಲಿದ್ದ ರಾಜ್ಯಕ್ಕೆ ಶಾಕ್: 3 ಷರತ್ತು ಹಾಕಿದ ಕೇಂದ್ರ?

|
Google Oneindia Kannada News

ಜೂನ್ ಏಳರ ನಂತರ ಲಾಕ್ ಡೌನ್ ಅನ್ನು ಹಂತಹಂತವಾಗಿ ಸಡಿಲಗೊಳಿಸಲಾಗುತ್ತದೆ ಎನ್ನುವ ಸುದ್ದಿಯ ನಡುವೆ, ಇಂದು (ಜೂನ್ 2) ಮುಖ್ಯಮಂತ್ರಿಗಳು ವಿಶೇಷ ಸಭೆಯನ್ನು ಕರೆದಿದ್ದಾರೆ.

ಲಾಕ್ ಡೌನ್ ಮುಂದುವರಿಸುವ ವಿಚಾರದಲ್ಲಿ ಸಚಿವರಲ್ಲೇ ಗೊಂದಲಗಳು ಇದ್ದು, ಒಬ್ಬೊಬ್ಬರು ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಇನ್ನು, ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಕೂಡಾ ಲಾಕ್ ಡೌನ್ ಮುಂದುವರಿಸುವುದೇ ಸೂಕ್ತ ಎಂದು ಹೇಳಿದ್ದಾರೆ.

ಕೊರೊನಾ, 'ನಿಟ್ಟುಸಿರು': 18,341 ರಿಂದ 61,766ರ ವರೆಗೆ, ದಾಖಲೆ!ಕೊರೊನಾ, 'ನಿಟ್ಟುಸಿರು': 18,341 ರಿಂದ 61,766ರ ವರೆಗೆ, ದಾಖಲೆ!

ಇದರ ನಡುವೆ, ಅನ್ ಲಾಕ್ ಮೂಡ್ ನಲ್ಲಿದ್ದ ರಾಜ್ಯಕ್ಕೆ ಕೇಂದ್ರ ಮೂರು ಷರತ್ತುಗಳನ್ನು ವಿಧಿಸಿದೆ ಎಂದು ಹೇಳಲಾಗುತ್ತಿದೆ. ಕೇಂದ್ರದ ಆ ಷರತ್ತುಗಳನ್ನು ಕಂಪ್ಲೀಟ್ ಮಾಡಲು ರಾಜ್ಯಕ್ಕೆ ಸದ್ಯಕ್ಕಂತೂ ಸಾಧ್ಯವಾಗುವುದು ಕಷ್ಟ.

 2ಸಾವಿರಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 7 ಜಿಲ್ಲೆಗಳು 2ಸಾವಿರಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 7 ಜಿಲ್ಲೆಗಳು

ಇಂದಿನ ಸಭೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಷರತ್ತುಗಳು ಪ್ರಸ್ತಾವನೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರಕಾರ ಯಾವ ರೀತಿ ಕೇಂದ್ರದ ಷರತ್ತುಗಳಿಗೆ ಮಣೆಹಾಕಲಿದೆ ಎನ್ನುವುದು ಸಭೆಯ ನಂತರ ಗೊತ್ತಾಗಲಿದೆ. ಕೇಂದ್ರದ ಮೂರು ಷರತ್ತುಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

 ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಸಕ್ರಿಯ ಪ್ರಕರಣ

ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಸಕ್ರಿಯ ಪ್ರಕರಣ

ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಸಕ್ರಿಯ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಮ್ಮಿಯಾಗಿದೆ. 4,09,924 ಕೇಸ್ ನಿಂದ ಜೂನ್ ಒಂದಕ್ಕೆ 2,98,299 ಇಳಿಕೆಯಾಗಿದೆ. ಇನ್ನು ದೈನಂದಿನ ಕೇಸುಗಳು 26,811 ರಿಂದ 14,304ಕ್ಕೆ ಇಳಿದಿದೆ. ಹಾಗಾಗಿ, ಜನರು ಕೂಡಾ ಅನ್ ಲಾಕ್ ಮೂಡ್ ನಲ್ಲಿ ಇದ್ದರು.

 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಅನ್ ಲಾಕ್ ವಿಚಾರದಲ್ಲಿ ಆರೋಗ್ಯ ಸಚಿವರಿಗೆ ವರದಿ

ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಅನ್ ಲಾಕ್ ವಿಚಾರದಲ್ಲಿ ಆರೋಗ್ಯ ಸಚಿವರಿಗೆ ವರದಿ

ಈಗಾಗಲೇ ತಜ್ಞರು, ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಅನ್ ಲಾಕ್ ವಿಚಾರದಲ್ಲಿ ಆರೋಗ್ಯ ಸಚಿವರಿಗೆ ವರದಿಯನ್ನು ನೀಡಿದ್ದಾರೆ. ಇವರಿಂದ ಸಂಜೆಯ ಸಭೆಯಲ್ಲಿ ಮಾಹಿತಿ ಪಡೆಯಲಿರುವ ಸಿಎಂಗೆ, ಕೇಂದ್ರದಿಂದಲೂ ಸೂಚನೆ ಬಂದಿದೆ ಎಂದು ಹೇಳಲಾಗುತ್ತಿದೆ.

 ಈಗಿರುವ ಪಾಸಿಟಿವಿಟ್ ರೇಟ್ ಶೇ. 12ರಿಂದ ಶೇ. 5ಕ್ಕೆ ಇಳಿದರೆ ಮಾತ್ರ ಅನ್ ಲಾಕ್

ಈಗಿರುವ ಪಾಸಿಟಿವಿಟ್ ರೇಟ್ ಶೇ. 12ರಿಂದ ಶೇ. 5ಕ್ಕೆ ಇಳಿದರೆ ಮಾತ್ರ ಅನ್ ಲಾಕ್

ಈಗಿರುವ ಪಾಸಿಟಿವಿಟ್ ರೇಟ್ ಶೇ. 12ರಿಂದ ಶೇ. 5ಕ್ಕೆ ಇಳಿದರೆ ಮಾತ್ರ ಅನ್ ಲಾಕ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ಶೇ. ಐದರಷ್ಟು ಪಾಸಿಟಿವಿಟಿ ರೇಟ್ ಬರೀ ಒಂದು ದಿನ ವರದಿಯಾದರೆ ಸಾಲುವುದಿಲ್ಲ, ಸತತವಾಗಿ ಒಂದು ವಾರ ಇದೇ ರೀತಿ ವರದಿಯಾದರೆ ಮಾತ್ರ ಅನ್ ಲಾಕ್ ವಿಚಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಿ ಎಂದು ಆರೋಗ್ಯ ಇಲಾಖೆ, ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

Recommended Video

  ಇಂಥವ್ರು NSUI( ವಿದ್ಯಾರ್ಥಿ ಕಾಂಗ್ರೆಸ್)ನ ನಾಯಕರಾಗಬೇಕು !! | Oneindia Kannada
   ಎಪ್ಪತ್ತು ವರ್ಷ ಮೇಲ್ಪಟ್ಟವರ (ಕಾಯಿಲೆ ಉಳ್ಳವರು) ವ್ಯಾಕ್ಸಿನೇಶನ್

  ಎಪ್ಪತ್ತು ವರ್ಷ ಮೇಲ್ಪಟ್ಟವರ (ಕಾಯಿಲೆ ಉಳ್ಳವರು) ವ್ಯಾಕ್ಸಿನೇಶನ್

  ಇನ್ನು, ಎಪ್ಪತ್ತು ವರ್ಷ ಮೇಲ್ಪಟ್ಟವರ (ಕಾಯಿಲೆ ಉಳ್ಳವರು) ವ್ಯಾಕ್ಸಿನೇಶನ್, ಎರಡೂ ಡೋಸ್ ಸೇರಿ ಶೇ. 70ರಷ್ಟಾದರೂ ಮುಗಿದಿರಬೇಕು. 45-60ವರ್ಷದವರಿಗೂ ವ್ಯಾಕ್ಸಿನ್ ಬಹುತೇಕ ನೀಡಿರಬೇಕು. ಜೊತೆಗೆ, ಸಮದಾಯಕ್ಕೆ ವೈರಸ್ ಪಸರಿಸದಂತೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ಮಾತ್ರ ಅನ್ ಲಾಕ್ ಬಗ್ಗೆ ನಿರ್ಧರಿಸಿ ಎನ್ನುವ ಸೂಚನೆ ಕೇಂದ್ರ ಸಚಿವಾಲಯದಿಂದ ಬಂದಿದೆ ಎಂದು ಹೇಳಲಾಗುತ್ತಿದೆ.

  English summary
  Karnataka Planning to Unlock After June 7: Central Govt Puts 3 Condition to Unlock.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X