Karnataka New Cabinet: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಈ ತಿಂಗಳಾಂತ್ಯಕ್ಕೆ? 20 ಹೊಸ ಸಚಿವ ವಿವರ, ಹೊಸ ಡಿಸಿಎಂ ವಿವರ
Karnataka New Cabinet: ಕರ್ನಾಟಕದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ, ಅಂತಿಮವಾಗಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬೇಕಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಾಗೂ ಕಾಂಗ್ರೆಸ್‌ನಿಂದ ರಾಜ್ಯಪಾಲರಿಗೂ ಪತ್ರ ಬರೆಯಲಾಗಿತ್ತು. ಆದರೆ, ದೆಹಲಿಯಲ್ಲಿ ನಡೆಯುತ್ತಿರುವ ಯುವಕರ ಪ್ರತಿಭಟನೆಯ ಕಾವು ಇದರಲ್ಲಿ ಕಾಂಗ್ರೆಸ್ ಸಹ ಭಾಗಿಯಾಗಿರುವುದರಿಂದ ಸಚಿವರ ಪಟ್ಟಿ ಅಂತಿಮವಾಗುವುದು ತಡವಾಗಿದೆ ಎಂದು ಹೇಳಲಾಗಿದೆ. ಈ ತಿಂಗಳಾಂತ್ಯದ ಒಳಗೆ 20 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಇದರೊಂದಿಗೆ ಹಲವು ಪ್ರಮುಖ ಚರ್ಚೆಗಳು ನಡೆದಿವೆ. ಹೊಸ ಖಾತೆ ರಚನೆ ಹಾಗೂ ಸಂಭಾವ್ಯ ಸಚಿವರ ಹೆಸರು ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಆರತಿ ಕೃಷ್ಣಗೆ ಸಚಿವ ಸ್ಥಾನ ನೀಡುವುದಕ್ಕೆ ಸರ್ಕಸ್
ಇನ್ನು ವಿಧಾನಪರಿಷತ್ ಸದಸ್ಯೆ ಆಗಿರುವ ಆರತಿ ಕೃಷ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದ ಒಕ್ಕಲಿಗ ಕೋಟಾದಿಂದ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಆಗ್ರಹವು ಹೆಚ್ಚಾಗಿದೆ. ಇನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಸೇರಿದಂತೆ ಒಟ್ಟು ಐದು ಜನ ಶಾಸಕರಿಗೆ ಅವಕಾಶವಿದೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೃಷ್ಣಬೈರೇಗೌಡ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ಕೊಡಲಾಗಿದೆ. ಹೀಗಾಗಿ ಬಾಕಿ ಉಳಿದಿರುವ ಮೂರು ಸಚಿವ ಸ್ಥಾನಕ್ಕೆ ಒಕ್ಕಲಿಗರಲ್ಲಿ ಭಾರೀ ಪೈಪೋಟಿ ಶುರುವಾಗಿದೆ.
ಮೂವರು ಉಪ ಮುಖ್ಯಮಂತ್ರಿ
ಇನ್ನು ಕರ್ನಾಟಕದಲ್ಲಿ ಈಗಾಗಲೇ ಡಾ.ಜಿ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಇನ್ನಿಬ್ಬರು ಹೊಸದಾಗಿ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಉಪ ಮುಖ್ಯಮಂತ್ರಿಯಾಗಿ ಸಚಿವ ಎಂ.ಬಿ ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಸಚಿವ ಸಂಪುಟ ರಚನೆ ಮಾಡಲಾಗುತ್ತಿದೆ. ಅಂತಿಮ ಹಂತದಲ್ಲಿ ಹೊಸ ಅಥವಾ ಅಚ್ಚರಿಯ ಹೆಸರು ಸೇರ್ಪಡೆಯಾಗುವ ಸಾಧ್ಯತೆಯೂ ಇದೇ ಎಂದೂ ಹೇಳಲಾಗಿದೆ.
ಸಂಭಾವ್ಯ ಸಚಿವರ ಪಟ್ಟಿ ವಿವರ ಇಲ್ಲಿದೆ
ಎಂ.ಕೃಷ್ಣಪ್ಪ, ಪುಟ್ಟರಂಗಶೆಟ್ಟಿ, ಸಲೀಂ ಅಹ್ಮದ್, ಲಕ್ಷ್ಮಣ ಸವದಿ, ಚೆಲುವರಾಯಸ್ವಾಮಿ, ರಘು ಮೂರ್ತಿ, ರುದ್ರಪ್ಪ ಲಮಾಣಿ, ಎಸ್.ಎಸ್. ಮಲ್ಲಿಕಾರ್ಜುನ್, ಮಧು ಬಂಗಾರಪ್ಪ, ಅಜಯ್ ಸಿಂಗ್, ಅಪ್ಪಾಜಿ ಗೌಡ / ಯಶವಂತ ರಾಯಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ / ಶಿವರಾಜ ತಂಗಡಿ, ಶ್ರೀನಿವಾಸ ಮಾನೆ / ಸಂತೋಷ ಲಾಡ್, ಜಮೀರ್ ಅಹಮ್ಮದ್ / ತನ್ವೀರ್ ಸೇಠ್ / ರಿಜ್ವಾನ್ ಅಷರ್ದ್, ತರಿಕೇರಿ ಶ್ರೀನಿವಾಸ್ / ಆರತಿ ಕೃಷ್ಣ, ಆನೇಕಲ್ ಶಿವಣ್ಣ / ನರೇಂದ್ರ ಸ್ವಾಮಿ / ಎಚ್.ಪಿ ಮಹದೇವಪ್ಪ, ಅನ್ನಪೂರ್ಣ ತುಕಾರಾಂ / ಬಿ. ನಾಗೇಂದ್ರ, ಗುಬ್ಬಿ ವಾಸು / ಶಿವಲಿಂಗೇಗೌಡ / ಟಿ.ಬಿ ಜಯಚಂದ್ರ / ಶರತ್ ಬಚ್ಚೇಗೌಡ ಹಾಗೂ ದಿನೇಶ್ ಗುಂಡೂರಾವ್ / ಎಚ್.ಕೆ ಪಾಟೀಲ್ ಅವರು ಸಚಿವರಾಗಲಿದ್ದಾರೆ ಎಂದು ಹೇಳಲಾಗಿದೆ.


Click it and Unblock the Notifications
