Karnataka Monsoon: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಇಲ್ಲಿದೆ ವಿವರ
ಕರ್ನಾಟಕ, ಜುಲೈ, 06: ರಾಜ್ಯದ ಹಲವೆಡೆ ಈಗಷ್ಟೇ ಮುಂಗಾರು ಚುರುಕು ಪಡೆದಿದ್ದು, ಇದರಿಂದ ಜಲಾಶಯಗಳಿಗಳಿಗೆ ಜೀವಬಂದಂತಾಗಿದೆ. ಹಾಗಾದರೆ ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ (ಜುಲೈ 06) ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಇದರಿಂದ ಜನರ ಮುಖದಲ್ಲಿ ಸಂತಸ ಮೂಡಿದಂತಾಗಿದೆ. ಹಾಗೆಯೇ ಗುರುವಾರವೂ ಕೂಡ ಬೆಂಗಳೂರು, ಬಿಜಾಪುರ, ದಕ್ಷಿಣ ಕನ್ನಡ, ಕೊಡಗು, ಕೋಲಾರ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಲ್ಲದೆ ಚಾಮರಾಜನಗರ, ಚಿಕ್ಕಮಗಳೂರು, ಗುಲ್ಬರ್ಗ, ಮೈಸೂರು, ರಾಯಚೂರು, ರಾಮನಗರ, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲೂ ಸಹ ಮಳೆರಾಯ ಆರ್ಭಟಿಸುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಹಾಗಾದರೆ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ | ಒಟ್ಟು ಸಾಮರ್ಥ್ಯ | ಇಂದಿನ ನೀರಿನ ಮಟ್ಟ | ಕಳೆದ ವರ್ಷದ ನೀರಿನ ಮಟ್ಟ | ಒಳಹರಿವು |
| ಕೆಆರ್ಎಸ್ ಜಲಾಶಯ | 38.04 ಮೀ. | 49.45 ಟಿಎಂಸಿ | 10.17 ಟಿಎಂಸಿ | 34.06 ಟಿಎಂಸಿ | 1249 ಕ್ಯೂಸೆಕ್ |
| ಆಲಮಟ್ಟಿ ಜಲಾಶಯ | 519.6 ಮೀ. | 123.08 ಟಿಎಂಸಿ | 19.24 ಟಿಎಂಸಿ | 50.04 ಟಿಎಂಸಿ | 0 ಕ್ಯೂಸೆಕ್ |
| ತುಂಗಭದ್ರಾ ಜಲಾಶಯ | 497.71 ಮೀ. | 105.79 ಟಿಎಂಸಿ | 3.07 ಟಿಎಂಸಿ | 50.07 ಟಿಎಂಸಿ | 259 ಕ್ಯೂಸೆಕ್ |
| ಮಲಪ್ರಭಾ ಜಲಾಶಯ | 633.8 ಮೀ. | 37.73 ಟಿಎಂಸಿ | 6.92 ಟಿಎಂಸಿ | 11.72 ಟಿಎಂಸಿ | 0 ಕ್ಯೂಸೆಕ್ |
| ಲಿಂಗನಮಕ್ಕಿ ಜಲಾಶಯ | 554.44 ಮೀ. | 151.75 ಟಿಎಂಸಿ | 12.7 ಟಿಎಂಸಿ | 30 ಟಿಎಂಸಿ | 9237 ಕ್ಯೂಸೆಕ್ |
| ಕಬಿನಿ ಜಲಾಶಯ | 696.13 ಮೀ. | 19.52 ಟಿಎಂಸಿ | 5.22 ಟಿಎಂಸಿ | 12.54 ಟಿಎಂಸಿ | 3431 ಕ್ಯೂಸೆಕ್ |
| ಭದ್ರಾ ಜಲಾಶಯ | 657.73 ಮೀ. | 71.54 ಟಿಎಂಸಿ | 25 ಟಿಎಂಸಿ | 41.54 ಟಿಎಂಸಿ | 2397 ಕ್ಯೂಸೆಕ್ |
| ಘಟಪ್ರಭಾ ಜಲಾಶಯ | 662.91 ಮೀ. | 51 ಟಿಎಂಸಿ | 4.04 ಟಿಎಂಸಿ | 6.7 ಟಿಎಂಸಿ | 154 ಕ್ಯೂಸೆಕ್ |
| ಹೇಮಾವತಿ ಜಲಾಶಯ | 890.58 ಮೀ. | 37.1 ಟಿಎಂಸಿ | 13.83 ಟಿಎಂಸಿ | 27.09 ಟಿಎಂಸಿ | 453 ಕ್ಯೂಸೆಕ್ |
| ವರಾಹಿ ಜಲಾಶಯ | 594.36 ಮೀ. | 31.1 ಟಿಎಂಸಿ | 2.75 ಟಿಎಂಸಿ | 4 ಟಿಎಂಸಿ | 0 ಕ್ಯೂಸೆಕ್ |
| ಹಾರಂಗಿ ಜಲಾಶಯ | 871.38 ಮೀ. | 8.5 ಟಿಎಂಸಿ | 3.03 ಟಿಎಂಸಿ | 6.93 ಟಿಎಂಸಿ | 1518 ಕ್ಯೂಸೆಕ್ |
ರಾಜ್ಯದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಬಹಳ ಕಡಿಮೆಯಾಗಿದೆ. ಅದರಲ್ಲೂ ಜಲಾಶಯಗಳಲ್ಲಿ ನೀರಿನ ಮಟ್ಟ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇತ್ತು. ಅಷ್ಟರಲ್ಲಿ ಮುಂಗಾರು ಮಳೆ ನಿಧಾನವಾಗಿ ಪ್ರವೇಶ ಮಾಡಿ ಜಲಾಶಯಗಳಿಗೆ ಮರುಜೀವ ತುಂಬಿದೆ.












Click it and Unblock the Notifications