Monsoon: ಕರ್ನಾಟಕದಲ್ಲಿ ಮುಂಗಾರು ಆರಂಭಕ್ಕೆ ಕ್ಷಣಗಣನೆ, ಮೇ ತಿಂಗಳಲ್ಲಿ ಅತ್ಯಧಿಕ ಮಳೆ ದಾಖಲು

ಬೆಂಗಳೂರು,ಜೂನ್‌ 02: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆಯ ಆಗಮನ ನಿರೀಕ್ಷೆಯಿಂದ ಮತ್ತು ಈಗಾಗಲೇ ಬಿದ್ದ ಮಳೆಯ ಕಾರಣಕ್ಕೆ ಕೃಷಿ ಚಟುವಟಿಕೆಗಳು ಗರಿ ಗೆದರಿವೆ. ಮುಂಗಾರು ಆರಂಭವಾಗುವ ಮೂಲಕ ಬೇಸಿಗೆ ಅಂತ್ಯಗೊಳ್ಳಲಿದೆ. ಕೇರಳ ಮೂಲಕ ರಾಜ್ಯದಲ್ಲಿ ಮುಂಗಾರು ಪ್ರವೇಶಕ್ಕೆ ದಿನಗಣನೆ ಆರಂಭವಾಗಿದೆ.

ಮುನ್ಸೂಚನೆಯಂತೆ ಕೇರಳವನ್ನು ಮುಂಗಾರು ಮಳೆ ಸುರಿಸುವ ಮಾರುತಗಳು ಇನ್ನೆರಡು ದಿನದಲ್ಲಿ ಪ್ರವೇಶಿಸಲಿವೆ. ಅಂದುಕೊಂಡಂತೆ ಆದರೆ ಜೂನ್ ಎರಡನೇ ವಾರ ಕರ್ನಾಟಕದಲ್ಲಿ ಮುಂಗಾರು ಮಳೆ ಶುರುವಾಗಿದೆ. ಇದೆಲ್ಲವು ಖಚಿತವಾಗುತ್ತಿದ್ದಂತೆ ಭಾರತೀಯ ಹವಾಮಾನ ಇಲಾಖೆ ಅಧಿಕೃತ ಮಾಹಿತಿ ಪ್ರಕಟಿಸಲಿದೆ.

Karnataka May See Monsoon June 2nd Week

ಹವಾಮಾನದಲ್ಲಿ ಪುನಃ ವೈಪರಿತ್ಯಗಳು ಉಂಟಾದರೆ ಮತ್ತೆ ಕೆಲವು ದಿನ ವಿಳಂಬವು ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರತಿಭಾರಿಯು ವಾಡಿಕೆಯಂತೆ ನೈಋತ್ಯ ಮುಂಗಾರು ಮಾರುತುಗಳು ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ. ಅದರೊಂದಿಗೆ ಕೆಲವು ದಿನಗಳಲ್ಲಿ ಕರ್ನಾಟಕ ಪ್ರವೇಶಿಸುತ್ತವೇ. ಈ ಬಾರಿ ನಾಲ್ಕು ದಿನ ವಿಳಂಬ ಎನ್ನಲಾಗಿತ್ತು. ಸದ್ಯ ಮತ್ತೆ ಕೆಲವು ದಿನ ತಡವಾದರೂ ಆಗಬಹುದು ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ 2022ರಲ್ಲಿ ಮೇ 29ರಂದು ಮುಂಗಾರು ಆರಂಭವಾಗಿತ್ತು. ಕಳೆದ 18 ವರ್ಷಗಳಲ್ಲಿ ಕೇರಳದ ಮೇಲೆ ನೈಋತ್ಯ ಮುಂಗಾರು ಆರಂಭವಾಗುವ ದಿನಾಂಕದ ಕಾರ್ಯಾಚರಣೆಯ ಮುನ್ಸೂಚನೆಗಳು 2015 ಅನ್ನು ಹೊರತುಪಡಿಸಿ ಸರಿಯಾಗಿವೆ ಎಂದು ಭಾರತ ಹವಾಮಾನ ಇಲಾಖೆ ಹೇಳಿದೆ.

Karnataka May See Monsoon June 2nd Week

ಮೇ ನಲ್ಲಿ ದಾಖಲೆ ಮಟ್ಟದಲ್ಲಿ ಮಳೆ

ಕಳೆದ ಏಪ್ರಿಲ್ ತಿಂಗಳ ಅಂತ್ಯಕ್ಕೆ ಹವಾಮಾನದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರಿಂದ ಮೇ ತಿಂಗಳಲ್ಲಿ ಇದುವರೆಗೂ ಸುರಿಯದಷ್ಟು ಭಾರೀ ಮಳೆ ಸುರಿದು ದಾಖಲೆ ನಿರ್ಮಿಸಿದೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ವಾಡಿಕೆ 13ರಷ್ಟು ಮಳೆ ಆಗಬೇಕು. ಆದರೆ ವಾಡಿಕೆ ಗಿಂತ ಶೇ. 2.39 ರಷ್ಟು ಮಳೆ ಅಂದರೆ ಒಟ್ಟು 31ರಷ್ಟು ಮಳೆ ದಾಖಲಾಗಿದ್ದು, ಇದು ಕಳೆದ ಕೆಲವು ದಶಕಗಳಲ್ಲೇ ಕಂಡು ಅತ್ಯಧಿಕ ಸಾರ್ವಕಾಲಿಕ ದಾಖಲೆ ಮಳೆ ಎನ್ನಲಾಗಿದೆ.

ಹಾವೇರಿ ಜಿಲ್ಲೆ, ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ 5 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಇದರೊಂದಿಗೆ ಉತ್ತರ ಕನ್ನಡ ದಕ್ಷಿಣ ಕನ್ನಡ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾರ್ಭಟ ಮುಂದುವರಿದಿದೆ. ಇದು ಮುಂದಿನ ಜೂನ್ 4ರವರೆಗೆ ಗುಡುಗು ಸಹಿತ ಜೋರು ಮಳೆಯಾಗುವ ಲಕ್ಷಣಗಳು ಇವೆ. ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಗುರುವಾರ ಸಂಜೆ ಬೆಂಗಳೂರಿನಲ್ಲಿ ಕೆ.ಆರ್‌.ಪುರದಲ್ಲಿ 64 ಮಿಲಿ ಮೀಟರ್‌ ಮಳೆ ಬಿದ್ದಿದೆ. ಉಳಿದಂತೆ ದೊಡ್ಡಾನೆಕ್ಕುಂದಿ 44 ಮಿ.ಮೀ, ಬಸವನಪುರ 30 ಮಿ.ಮೀ, ಗರುಡಾಚಾರಪಾಳ್ಯ 26ಮಿ.ಮೀ, ಎಚ್‌ಎಎಲ್ ಏರ್‌ಪೋರ್ಟ್‌ 22 ಮಿ.ಮೀ ಮಳೆ ದಾಖಲಾಗಿದೆ. ಈ ಮುಂಗಾರು ಅವಧಿಯಲ್ಲೂ ಸಹ ರಾಜ್ಯ ರಾಜಧಾನಿ ಬೆಂಗಳೂರು ಭಾರಿ ಮಳೆ ಹೆಚ್ಚು ಮಳೆ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+