Karnataka Dam water Level: ಜುಲೈ 24ರಂದು ಕೆಆರ್‌ಎಸ್ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
Karnataka Dam water Level: ರಾಜ್ಯದ ಹಲವು ಜಿಲ್ಲೆಗಲ್ಲಿ ಮಳೆರಾಯನ ರೌದ್ರಾವತಾರ ಮುಂದುವರೆದ ಪರಿಣಾಮ ಅನೇಕ ಜಲಮೂಲಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳು ಸಹ ತುಂಬುವ ಹಂತವನ್ನು ತಲುಪಿದ್ದು, ಈ ಹಿನ್ನೆಲೆ ಜಲಾಶಯಗಳಿಂದ ನೀರನ್ನು ನದಿಗಳಿಗೆ ಹರಿಸಲಾಗುತ್ತಿದೆ. ಹಾಗಾದರೆ ಇಂದು (ಜುಲೈ 24) ಕೆಆರ್‌ಎಸ್ (ಕೃಷ್ಣರಾಜ ಸಾಗರ), ಕಬಿನಿ, ಆಲಮಟ್ಟಿ ಸೇರಿ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ಗಮನಿಸಿ.
2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಲಾಶಯಗಳು ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ ಇದೀಗ 2024ರ ಜೂನ್ ಆರಂಭವಾಗುತ್ತಿದ್ದಂತೆ ಮುಂಗಾರು ಚುರುಕುಪಡೆದಿದ್ದು, ಇಲ್ಲಿಯವರೆಗೂ ಕೂಡ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ಜಲಮೂಲಗಳು ಬಹುತೇಕ ಭರ್ತಿಯಾಗಿವೆ. ಹಾಗಾದರೆ ಇಂದು ಕೆಆರ್‌ಎಸ್ (ಕೃಷ್ಣರಾಜ ಸಾಗರ), ಕಬಿನಿ, ಆಲಮಟ್ಟಿ ಹಾರಂಗಿ, ಹೇಮಾವತಿ, ಭದ್ರಾ, ತುಂಗಭದ್ರಾ, ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 123.25 ಅಡಿ
* ಒಳಹರಿವು - 33,241 ಕ್ಯೂಸೆಕ್
* ಹೊರಹರಿವು - 11,852 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 517.58 ಮೀಟರ್
* ಒಳಹರಿವು- 1,50,000 ಕ್ಯೂಸೆಕ್
* ಹೊರಹರಿವು - 1,70,000 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,629.84 ಅಡಿ
* ಒಳಹರಿವು - 85,148 ಕ್ಯೂಸೆಕ್
* ಹೊರಹರಿವು - 15,159 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಇಂದಿನ ನೀರಿನ ಮಟ್ಟ - 2,064.50 ಅಡಿ
* ಒಳಹರಿವು - 11,675 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1799 ಅಡಿ
* ಒಳಹರಿವು - 42,269 ಕ್ಯೂಸೆಕ್
* ಹೊರಹರಿವು - 2,400.4 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,283.82 ಅಡಿ
* ಒಳಹರಿವು - 17,877 ಕ್ಯೂಸೆಕ್
* ಹೊರಹರಿವು - 25,000 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 168.2 ಅಡಿ
* ಒಳಹರಿವು - 20,045 ಕ್ಯೂಸೆಕ್
* ಹೊರಹರಿವು - 196 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,161.63 ಅಡಿ
* ಒಳಹರಿವು - 27,754 ಕ್ಯೂಸೆಕ್
* ಹೊರಹರಿವು - 2,534 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,920.95 ಅಡಿ
* ಒಳಹರಿವು - 25,521 ಕ್ಯೂಸೆಕ್
* ಹೊರಹರಿವು - 15,965 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,856.64 ಅಡಿ
* ಒಳಹರಿವು - 16,340 ಕ್ಯೂಸೆಕ್
* ಹೊರಹರಿವು - 8,700 ಕ್ಯೂಸೆಕ್












Click it and Unblock the Notifications