ಭಾಸ್ಕರರಾವ್ ರಾಜೀನಾಮೆ ನೀಡಲು ಕಾರಣವೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 09 : ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ರಾಜೀನಾಮೆ ನೀಡಿರುವ ಸಮಯದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸುದೀರ್ಘ ರಜೆ ಪಡೆದಿದ್ದ ಲೋಕಾಯುಕ್ತರು ಇದ್ದಕ್ಕಿದಂತೆ ರಾಜೀನಾಮೆ ನೀಡಿರುವುದು ಏಕೆ? ಎಂಬುದು ಸದ್ಯದ ಪ್ರಶ್ನೆ.

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಪುತ್ರ ಅಶ್ವಿನ್ ರಾವ್ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಭಾಸ್ಕರರಾವ್ ಸುದೀರ್ಘ ರಜೆ ಪಡೆದಿದ್ದರು. ತಮ್ಮ ಕೆಲಸಗಳನ್ನು ಯಾರಿಗೂ ಹಸ್ತಾಂತರ ಮಾಡದೇ ಅವುಗಳು ಬಾಕಿ ಉಳಿಯುವಂತೆ ಮಾಡಿದರು. [ಭಾಸ್ಕರರಾವ್ ರಾಜೀನಾಮೆ : ಯಾರು, ಏನು ಹೇಳಿದರು?]

lokayukta

ಸುಮಾರು ಮೂರು ತಿಂಗಳಿನಿಂದ ರಜೆಯಲ್ಲಿದ್ದ ಭಾಸ್ಕರರಾವ್ ಅವರು ಇದ್ದಕ್ಕಿಂದತೆ ರಾಜೀನಾಮೆ ಸಲ್ಲಿಸಿದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ಕೆಲಸವನ್ನು ಹಿಂದೆಯೇ ಅವರು ಮಾಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಲಾಗುತ್ತಿದೆ. ['ಭಾಸ್ಕರರಾವ್ ರಾಜೀನಾಮೆ ಅಂಗೀಕರಿಸಬಾರದಿತ್ತು']

ಘನತೆ ಉಳಿಯುತ್ತಿತ್ತು : 'ನ್ಯಾ.ಭಾಸ್ಕರರಾವ್ ಅವರು ಆರೋಪಗಳು ಕೇಳಿಬಂದ ತಕ್ಷಣ ರಾಜೀನಾಮೆ ನೀಡಿದ್ದರೆ ಲೋಕಾಯುಕ್ತ ಸಂಸ್ಥೆಯ ಘನತೆಯೂ ಉಳಿಯುತ್ತಿತ್ತು' ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. [ಲೋಕಾಯುಕ್ತ ಹುದ್ದೆಗೆ ಕೇಳಿಬರಲಿವೆ ಕನಿಷ್ಠ 5 ಹೆಸರು]

ಈಗೇಕೆ ರಾಜೀನಾಮೆ ಕೊಟ್ಟರು? : ಸುಮಾರು ಮೂರು ತಿಂಗಳಿನಿಂದ ರಜೆ ಮೇಲೆ ತೆರಳಿದ್ದ ಭಾಸ್ಕರರಾವ್ ರಾಜೀನಾಮೆ ನೀಡಲು ಕಾರಣವೇನು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಧಾನಸಭೆಯಲ್ಲಿ ಲೋಕಾಯುಕ್ತ ಪದಚ್ಯುತಿ ನಿರ್ಣಯ ಮಂಡನೆಯಾಗಿ, ಒಪ್ಪಿಗೆ ಸಿಕ್ಕ ಬಳಿಕ ರಾಜೀನಾಮೆ ನೀಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

'ಭಾಸ್ಕರರಾವ್ ಅವರು ರಾಜೀನಾಮೆ ನೀಡಿದ್ದರಿಂದ ಅವರ ವಿರುದ್ಧದ ಪದಚ್ಯುತಿ ನಿರ್ಣಯವನ್ನು ಕೈಬಿಡಲಾಗುತ್ತದೆಯೇ? ಎಂದು ಸಂತೋಷ್ ಹೆಗ್ಡೆ ಅವರು ಪ್ರಶ್ನಿಸಿದ್ದಾರೆ. ಪದಚ್ಯುತಿ ನಿರ್ಣಯ ಮಂಡಿಸುವಾಗ ಮಾಡಿದ ಆರೋಪಗಳ ಬಗ್ಗೆ ತನಿಖೆಯ ನಡೆಯಲಿದೆಯೇ ಎಂದು ಅವರು ಕೇಳಿದ್ದಾರೆ.

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಅಶ್ವಿನ್ ರಾವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಸಾಬೀತಾಗಿ, ಭಾಸ್ಕರರಾವ್ ಅವರು ಸಹಾಯ ಮಾಡಿದ್ದಾರೆ ಎನ್ನುವುದು ಸಾಬೀತಾದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಂತೋಷ್ ಹೆಗ್ಡೆ ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The resignation letter tendered by Justice Y Bhaskar Rao to the post of Karnataka Lokayukta ended a long drawn ordeal. After several months, Justice Rao finally tendered his resignation and this brings us to the question, why did he not do it earlier?.
Please Wait while comments are loading...