• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

17 ಶಾಸಕರು ಅನರ್ಹ, ಸದನದ ಬಲಾಬಲ, ಬಿಎಸ್ವೈಗೆ ಶ್ರೀರಕ್ಷೆ!

|
   17 ಶಾಸಕರು ಅನರ್ಹ, ಸದನದ ಬಲಾಬಲ ? | Oneindia Kannada

   ಬೆಂಗಳೂರು, ಜುಲೈ, 28: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಜ್ಯಾಧ್ಯಕ್ಷ, ಶಿಕಾರಿಪುರದ ಶಾಸಕ ಬಿ.ಎಸ್ ಯಡಿಯೂರಪ್ಪ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, 15ನೇ ವಿಧಾನಸಭೆಯಲ್ಲಿ ಸೋಮವಾರ(ಜುಲೈ 29)ದಂದು ವಿಶ್ವಾಸಮತ ಯಾಚಿಸಲಿದ್ದಾರೆ. ಈ ನಡುವೆ ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆಯೇ? ಸದನದ ಸಂಖ್ಯಾಬಲವೆಷ್ಟಿದೆ? ಇಲ್ಲಿದೆ ವಿವರ...

   ಎಚ್. ಡಿ ಕುಮಾರಸ್ವಾಮಿ ನೇತೃತ್ವದ 14ತಿಂಗಳ ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತ ಕಳೆದುಕೊಂಡ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಸಂಖ್ಯಾಬಲವನ್ನು ವಿಧಾನಸಭೆಯಲ್ಲಿ ಹೊಂದಿದೆಯೇ? ಎಂಬ ಪ್ರಶ್ನೆ ಎದ್ದಿತ್ತು.

   ಸ್ಪೀಕರ್ ರಮೇಶ್ ಕುಮಾರ್ ಪತ್ರಿಕಾಗೋಷ್ಠಿ : 14 ಶಾಸಕರು ಅನರ್ಹಸ್ಪೀಕರ್ ರಮೇಶ್ ಕುಮಾರ್ ಪತ್ರಿಕಾಗೋಷ್ಠಿ : 14 ಶಾಸಕರು ಅನರ್ಹ

   ಗುರುವಾರ(ಜುಲೈ25)ದಂದು ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ ಬಳಿಕ, ಸದನದ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗಿತ್ತು. ಹೀಗಾಗಿ, ರಾಜ್ಯ ರಾಜಕೀಯದಲ್ಲಿ ಅತೃಪ್ತ ಶಾಸಕರು, ಯಡಿಯೂರಪ್ಪ ಹಾಗೂ ಸ್ಪೀಕರ್ ಮುಂದಿನ ನಡೆ ಕುತೂಹಲಕಾರಿಯಾಗಿತ್ತು.

   15ನೇ ವಿಧಾನಸಭೆಯಿಂದ 17 ಶಾಸಕರು ಅನರ್ಹ, ಮುಂದೇನು? 15ನೇ ವಿಧಾನಸಭೆಯಿಂದ 17 ಶಾಸಕರು ಅನರ್ಹ, ಮುಂದೇನು?

   ಶಾಸಕರ ಬಲಾಬಲದ ಬಗ್ಗೆ ಲೆಕ್ಕಾಚಾರ ನಡೆಯುವ ಹೊತ್ತಿನಲ್ಲೇ ರಾಜ್ಯಪಾಲರಿಂದ ಅನುಮತಿ ಪಡೆದು ಶುಕ್ರವಾರ ಸಂಜೆ ವೇಳೆಗೆ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಸೋಮವಾರ(ಜುಲೈ 29)ದಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಹೇಳಿದರು. ಇದಕ್ಕೂ ಮುನ್ನವೇ ಜುಲೈ 28ರಂದು 14ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಒಟ್ಟು 17 ಮಂದಿ ಶಾಸಕರು ಅನರ್ಹಗೊಂಡ ಬಳಿಕ ಸದನದ ಸಂಖ್ಯಾಬಲ ಏನಾಗಿದೆ? ಮುಂದೆ ಓದಿ...

   ಜುಲೈ 25ರಂದು 3 ಶಾಸಕರ ಅನರ್ಹತೆ

   ಜುಲೈ 25ರಂದು 3 ಶಾಸಕರ ಅನರ್ಹತೆ

   10 ಕಾಂಗ್ರೆಸ್, 3 ಜೆಡಿಎಸ್ ಹಾಗೂ 2 ಪಕ್ಷೇತರ ಶಾಸಕರ ರಾಜೀನಾಮೆಯಿಂದ 225 ಸಂಖ್ಯಾಬಲದ 15ನೇ ವಿಧಾನಸಭೆಯ ಸಂಖ್ಯಾಬಲವು ಕುಸಿದಿತ್ತು. ಜುಲೈ 25ರಂದು ರಾತ್ರಿ ಸ್ಪೀಕರ್ ರಮೇಶ್ ಕುಮಾರ್ ಅವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್ ಶಂಕರ್ ಅವರನ್ನು 15ನೇ ವಿಧಾನಸಭೆ ಅವಧಿ(2023) ಮುಗಿಯುವ ತನಕ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು.

   ಒಟ್ಟು 17 ಶಾಸಕರು ಉಪಚುನಾವಣೆ ಎದುರಿಸುವಂತಿಲ್ಲ

   ಒಟ್ಟು 17 ಶಾಸಕರು ಉಪಚುನಾವಣೆ ಎದುರಿಸುವಂತಿಲ್ಲ

   ಭಾನುವಾರದಂದು 11 ಕಾಂಗ್ರೆಸ್ ಹಾಗೂ 3 ಜೆಡಿಎಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ 2023ರ ತನಕ ಅನರ್ಹಗೊಳಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು 17 ಶಾಸಕರು ಉಪಚುನಾವಣೆ ಎದುರಿಸುವಂತಿಲ್ಲ, ವಿಧಾನಸಭೆ ಸದನಕ್ಕೆ ಹಾಜರಾಗುವಂತಿಲ್ಲ. ಮಂತ್ರಿಗಿರಿಯನ್ನು ಹೊಂದುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಆದೇಶ ಹಾಗೂ ಆದೇಶದಲ್ಲಿ ಉಲ್ಲೇಖಿಸಿರುವ ಹಳೆ ಪ್ರಕರಣ ಹಾಗೂ ನೀಡಿರುವ ಕಾರಣಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅತೃಪ್ತರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

   ಜುಲೈ 28ರಂದು 17 ಮಂದಿ ಶಾಸಕರು ಅನರ್ಹಗೊಂಡ ಬಳಿಕ

   ಜುಲೈ 28ರಂದು 17 ಮಂದಿ ಶಾಸಕರು ಅನರ್ಹಗೊಂಡ ಬಳಿಕ

   ಜುಲೈ 28ರಂದು 17 ಮಂದಿ ಶಾಸಕರು ಅನರ್ಹಗೊಂಡ ಬಳಿಕ:
   15ನೇ ವಿಧಾನಸಭೆಯಿಂದ ಒಟ್ಟು 17 ಶಾಸಕರು ಅನರ್ಹ ಎಂದು ಸ್ಪೀಕರ್ ರಮೇಶ್ ಕುಮಾರ್ ಘೋಷಣೆ.

   ವಿಧಾನಸಭೆ ಬಲಾಬಲ: 224-17=207
   ಮ್ಯಾಜಿಕ್ ನಂಬರ್: 104
   ಬಿಜೆಪಿ : 105+1 (ಎಚ್ ನಾಗೇಶ್ ಬೆಂಬಲ)
   ಬಿಎಸ್ಪಿ : 1 ತಟಸ್ಥ
   ಕಾಂಗ್ರೆಸ್: 76-11=65
   ಜೆಡಿಎಸ್ : 37-3=34
   ಮೈತ್ರಿ : 99
   ಅನರ್ಹ : 3+14=17
   ***

   ಯಡಿಯೂರಪ್ಪ ಬಲ ತಂದ ಸ್ಪೀಕರ್ ನಿರ್ಣಯ

   ಯಡಿಯೂರಪ್ಪ ಬಲ ತಂದ ಸ್ಪೀಕರ್ ನಿರ್ಣಯ

   ಜುಲೈ 28ಕ್ಕೂ ಮುನ್ನ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 5 ಶಾಸಕರ ಕೊರತೆ ಎದುರಾಗಿತ್ತು. ಆದರೆ, ಈಗ ಬಿಜೆಪಿಗೆ 105+1 ಬಲವಿದ್ದು, ಸುಲಭವಾಗಿ ಮ್ಯಾಜಿಕ್ ನಂಬರ್ ದಾಟಿ ವಿಶ್ವಾಸಮತ ಉಳಿಸಿಕೊಳ್ಳಲಿದೆ.

   ಒಂದು ವೇಳೆ ಇಂದು ಸ್ಪೀಕರ್ ಆದೇಶ ನೀಡದಿದ್ದರೆ, ಬಿಜೆಪಿಗೆ ಇದ್ದ ಆಯ್ಕೆಯೇನು?
   ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಿದ ದಿನದಂದು 20 ಮಂದಿ ಶಾಸಕರು ಗೈರಾಗಿದ್ದರು. ರಾಜೀನಾಮೆ ನೀಡಿರುವ 14 ಮಂದಿ ಶಾಸಕರನ್ನು ಮುಂಬೈನಲ್ಲೇ ಉಳಿಯುವಂತೆ ನೋಡಿಕೊಂಡರೂ, ಯಡಿಯೂರಪ್ಪಗೆ ವಿಶ್ವಾಸಮತ ಗೆಲ್ಲಲು ಸಾಧ್ಯವಾಗಲಿದೆ ಎಂಬ ಎಣಿಕೆಯಿತ್ತು.
   English summary
   What is the Karnataka Legislative Assembly strength: After 17 MLAS disqualified as B S Yeddyurappa set to seek trust vote on Monday (July 29).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X