ಕರ್ನಾಟಕ ಹೈಕೋರ್ಟ್‌ಗೆ ಸೌರಶಕ್ತಿಯ ಬಲ

ಬೆಂಗಳೂರು, ನವೆಂಬರ್ 04 : ಕರ್ನಾಟಕ ಹೈಕೋರ್ಟ್ ದೇಶದ ಇತರ ಹೈಕೋರ್ಟ್‌ಗಳಿಗೆ ಮಾದರಿಯಾಗಿದೆ. ಕೋರ್ಟ್‌ನ ಮೇಲ್ಛಾವಣಿಯಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಲಾಗಿದ್ದು, ಪ್ರತಿದಿನ 200 ಕಿಲೋವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಕರ್ನಾಟಕ ಸರ್ಕಾರದ ನೂತನ ಸೋಲಾರ್ ನೀತಿಯ ಅನ್ವಯ ಕರ್ನಾಟಕ ಹೈಕೋರ್ಟ್ ಮೇಲ್ಛಾವಣಿಯಲ್ಲಿ ಸೋಲಾರ್ ಫಲಕ ಅಳವಡಿಸಲಾಗಿದೆ. ನ್ಯಾಯಾಲಯಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಬಳಸಿ ಉಳಿದಿದ್ದನ್ನು ಬೆಸ್ಕಾಂಗೆ ಪ್ರತಿ ಯೂನಿಟ್‌ಗೆ 9.56 ರೂ.ನಂತೆ ಮಾರಾಟ ಮಾಡಲಾಗುತ್ತದೆ. [ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಶಕ್ತಿ ಮೇಲ್ಛಾವಣಿ ಬಲ]

karnataka high court

ಹೈಕೋರ್ಟ್‌ನಲ್ಲಿ ಒಟ್ಟು 896 ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗಿದೆ. ಇವುಗಳು ಪ್ರತಿದಿನ 200 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತವೆ. ಹೈಕೋರ್ಟ್‌ ದಿನಪೂರ್ತಿ ಕೆಲಸ ಮಾಡಲು 500 ಕಿಲೋ ವ್ಯಾಟ್ ವಿದ್ಯುತ್ ಅಗತ್ಯವಿದೆ. [ಪಾವಗಡಕ್ಕೆ ಬಂತು ಸೋಲಾರ್ ಪಾರ್ಕ್]

ಸರ್ಕಾರಿ ರಜೆಗಳು ಮತ್ತು ಹೈಕೋರ್ಟ್‌ಗೆ ರಜೆ ಇದ್ದಾಗ ಪ್ರತಿದಿನ 200 ಕಿಲೋವ್ಯಾಟ್ ವಿದ್ಯುತ್ ಸಾಕಾಗುತ್ತದೆ. ವಿದ್ಯುತ್ ಉಳಿತಾಯವಾದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸೋಲಾರ್ ನೀತಿಯ ಅನ್ವಯ ಬೆಸ್ಕಾಂ ಅದನ್ನು ಖರೀದಿ ಮಾಡುತ್ತದೆ.

solar energy

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಸೌರಶಕ್ತಿ ರೂಫ್ ಟಾಪ್ ಅವಳಡಿಸಲಾಗಿದೆ. ಸ್ಟೇಡಿಯಂಗೆ ಬೇಕಾದ ಇಂಧನ ಶಕ್ತಿಯ ಶೇ 40ರಷ್ಟು ಈ ರೂಫ್ ಟಾಪ್ ನಿಂದಲೇ ದೊರೆಯುತ್ತದೆ. ರೂಫ್ ಟಾಪ್ ನಲ್ಲಿ 400 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗಿದೆ. [ಮಾಹಿತಿ : ಕರ್ನಾಟಕ ಸರ್ಕಾರ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+