ಭವ್ಯ ಭಾರತದ ಮಹಾ ಪ್ರಜೆಗಳೆ: ವೋಟಿಂಗ್ ಮಾಡದೇ ಇರುವವರಿಗೆ ನಾಚಿಕೆ ಆಗಬೇಕು!

2024 ಲೋಕಸಭೆ ಚುನಾವಣೆಗೆ ಇಂದು ಕರ್ನಾಟಕದಲ್ಲಿ ಮೊದಲನೇ ಹಂತದಲ್ಲಿ ಮತದಾನ ಆರಂಭವಾಗಿದೆ. ಹೀಗಾಗಿ ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಗಳು ಬೆಳಗ್ಗೆಯೇ ಹೋಗಿ ತಮ್ಮ ಹಕ್ಕು ಚಲಾಯಿಸಿ ಬಂದಿದ್ದಾರೆ. ಆದರೆ ಮತದಾನ ಮಾಡುವ ಹಕ್ಕು ಇದ್ದರೂ, ಈ ಸಮಯದಲ್ಲಿ ಅದೆಷ್ಟೋ ಜನರು ವೋಟಿಂಗ್ ಮಾಡದೆ ಟೂರ್ & ಟ್ರಿಪ್ ಅಂತಾ ಓಡಾಟ ನಡೆಸಿದ್ದಾರೆ. ಈ ಮೂಲಕ ಅವರಿಗೆಲ್ಲಾ ನಾಚಿಕೆ ಆಗಬೇಕು ಅಂತಿದ್ದಾರೆ ನೆಟ್ಟಿಗರು.

ಯೆಸ್, ಭಾರತದ ಭವಿಷ್ಯ ನಿರ್ಧಾರ ಮಾಡಲು ಕೋಟಿ ಕೋಟಿ ಭಾರತೀಯರು ಮತದಾನ ಮಾಡುತ್ತಿದ್ದಾರೆ. ಭಾರತದ 544 ಲೋಕಸಭೆ ಕ್ಷೇತ್ರಕ್ಕೂ 7 ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು 2ನೇ ಹಂತದಲ್ಲಿ ವೋಟಿಂಗ್ ಆರಂಭವಾಗಿದೆ. ಹೀಗಿದ್ದಾಗ ಕರ್ನಾಟಕದಲ್ಲಿ ವೋಟ್ ಹಾಕಲು ಸಾವಿರಾರು ಕಂಪನಿಗಳು ತಮ್ಮ ತಮ್ಮ ನೌಕರರಿಗೆ ರಜೆ ಕೊಟ್ಟಿವೆ. ಅದರಲ್ಲಿಯೂ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ಇಂದು ರಜೆ ನೀಡಲಾಗಿದೆ. ಆದ್ರೆ ಹೀಗೆ ರಜೆ ಪಡೆದ ಟೆಕ್ಕಿಗಳಲ್ಲಿ ಬಹುತೇಕರು ಏನ್ ಮಾಡ್ತಿದ್ದಾರೆ ಗೊತ್ತಾ?

Karnataka Has Recorded 38 23 Percentage Of Voting Till 1 PM

ಮತದಾನ ಮಾಡದೆ ಮಜಾ...

ಹೀಗೆ ಶುಕ್ರವಾರ ರಜೆ ಪಡೆದ ಟೆಕ್ಕಿಗಳಿಗೆ, ಸಾಮಾನ್ಯವಾಗಿ ಶನಿವಾರ & ಭಾನುವಾರ ಕೂಡ ರಜೆ ಸಿಗಲಿದೆ. ಆದ್ರೆ ಶುಕ್ರವಾರ ಹೋಗಿ ಮತ ಹಾಕಬೇಕಾದ ಇವರಲ್ಲಿ ಬಹುತೇಕರು ವೋಟ್ ಮಾಡದೆ ಊರು ಸುತ್ತುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಮಧ್ಯಾಹ್ನದ ತನಕ ಕೇವಲ ಶೇಕಡಾ 38.23 ರಷ್ಟು ಮತದಾನ ಆಗಿದೆ ಅಷ್ಟೇ. ಇದು ಭಾರಿ ನಿರಾಸೆ ಉಂಟು ಮಾಡುತ್ತಿದೆ. ಮತ್ತೊಂದು ಕಡೆ ಹಲವರು ಟೂರ್ ಮತ್ತು ಟ್ರಿಪ್ ಮಾಡಿ, ವೋಟ್ ಹಾಕದೆ ಮಜಾ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಡವರೇ ಈ ವಿಚಾರದಲ್ಲಿ ಬೆಸ್ಟ್!

ಹೌದು ಇದೀಗ ಬಹುತೇಕ ಭಾರತೀಯ ಪ್ರಜೆಗಳು ವೋಟಿಂಗ್ ಮಾಡಿದ್ದಾರೆ. ಅದರಲ್ಲಿಯೂ ಉನ್ನತ ಶಿಕ್ಷಣ ಪಡೆಯದ, ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುವ ಮಧ್ಯಮ ವರ್ಗ ಕುಟುಂಬದ ಮತದಾರರು ಬೆಳಗ್ಗೆಯೇ ಹೋಗಿ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಮೂಲಕ ಅವರೆಲ್ಲಾ ಭವ್ಯ ಭಾರತದ ಉತ್ತಮ ಪ್ರಜೆಗಳು ಎಂಬುದನ್ನು ಪ್ರೂವ್ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಾರೆ. ಹಾಗೇ ಅನೇಕ ಟೆಕ್ಕಿಗಳು ಕೂಡ ಭಾರತದ ಪ್ರಜೆಗಳಾಗಿ ಇಂದು ತಮ್ಮ ಮತ ಚಲಾಯಿಸಿದ್ದಾರೆ. ಆದರೆ ಇನ್ನೂ ಅನೇಕ ಟೆಕ್ಕಿಗಳು ಮತ ಹಾಕದೆ, ಊರೂರು ಸುತ್ತಿ ಮಜಾ ಮಾಡುತ್ತಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಮೊಳಗಿದೆ.

Karnataka Has Recorded 38 23 Percentage Of Voting Till 1 PM

ಮತದಾನದ ಪ್ರಮಾಣ ಹೆಚ್ಚಾಗಬೇಕು

ಭಾರತದಲ್ಲಿ ಸಂವಿಧಾನ ಎಲ್ಲಾ ವಯಸ್ಕರಿಗೂ ಮತದಾನದ ಹಕ್ಕು ನೀಡಿದೆ. ಮತದಾನದ ಹಕ್ಕು ದೊಡ್ಡ ಶಕ್ತಿಯಾಗಿದ್ದು ಒಂದು ದೇಶದ ಭವಿಷ್ಯ ಕಟ್ಟುವ ಶಕ್ತಿ ಹೊಂದಿದೆ. ಹೀಗಾಗಿ ಮತದಾನ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಪ್ರಜೆ ಕೂಡ ಮತದಾನ ಮಾಡಲು ಅರ್ಹನಾಗಿರುತ್ತಾನೆ. ಆದರೆ ಎಷ್ಟೋ ಜನ ಮತ ಹಾಕದೆ, ತಮ್ಮ ಹಕ್ಕನ್ನು ಕೂಡ ಕಳೆದುಕೊಳ್ಳುತ್ತಾರೆ. ಅಲ್ಲದೆ ಭವಿಷ್ಯದ ಭಾರತಕ್ಕು ಇದು ಮಾರಕ. ಹೀಗಾಗಿ ಈಗಲಾದರೂ ಹೋಗಿ ಮತ ಹಾಕಿ, ಯಾಕಂದ್ರೆ ಕರ್ನಾಟಕದಲ್ಲಿ ಮಧ್ಯಾಹ್ನದ ತನಕ ಕೇವಲ ಶೇಕಡಾ 38.23 ರಷ್ಟು ಮತದಾನ ಆಗಿದೆ ಅಷ್ಟೇ. ಇನ್ನೂ 2 ಗಂಟೆ ಬಾಕಿ ಇದ್ದು, ಸಂಜೆ 6 ಗಂಟೆಗೆ ಮತದಾನ ಮುಗಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+