ಕೊರೊನಾ ಬಗ್ಗೆ ಏನಾದರೂ ಡೌಟ್ ಇದ್ದರೆ ಈ ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ
ಬೆಂಗಳೂರು, ಮಾರ್ಚ್ 14: ಕೊರೊನಾ ವೈರಸ್ ಬಗ್ಗೆ ನಿಮಗೆ ಏನಾದರೂ ಪ್ರಶ್ನೆಗಳಿವೆಯಾ.? ಸೋಂಕಿನ ಬಗ್ಗೆ ಗೊಂದಲ ಕಾಡುತ್ತಿದೆಯಾ.? ಕೊರೊನಾ ಬಗ್ಗೆ ಯಾರಿಗೆ ಕೇಳೋದು, ಯಾರು ಸರಿಯಾದ ಮಾಹಿತಿ ಕೊಡಬಹುದು ಅಂತ ಯೋಚಿಸುತ್ತಿದ್ದೀರಾ.? ಹಾಗಿದ್ದರೆ, 'ಕೋವಿಡ್-19 ಕರ್ನಾಟಕ ಟೀಮ್' ಎಂಬ ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ. ನಿಮ್ಮ ಎಲ್ಲಾ ಡೌಟ್ ಗಳಿಗೂ ಅಲ್ಲಿ ಉತ್ತರ ಸಿಗುವುದು ಖಚಿತ.
ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಿಂದ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಲೆಂದೇ ತ್ವರಿತ ಸಂದೇಶ ಕಳುಹಿಸುವ ವೇದಿಕೆಯಾದ ಟೆಲಿಗ್ರಾಮ್ ನಲ್ಲಿ 'ಕೋವಿಡ್-19 ಕರ್ನಾಟಕ ಟೀಮ್' ಎಂಬ ಗ್ರೂಪ್ ನ ಕರ್ನಾಟಕ ಸರ್ಕಾರ ಆರಂಭಿಸಿದೆ.
''ಸರ್ಕಾರಿ ಇಲಾಖೆಗಳಿಗೆ ಕೋವಿಡ್-19' ಬಗ್ಗೆ ಏನಾದರೂ ಪ್ರಶ್ನೆ ಕೇಳಬೇಕು ಅಂತಿದ್ರೆ ಅಥವಾ 104 ಬಿಜಿ ಬರ್ತಿದ್ರೆ, ಈ ಟೆಲೆಗ್ರಾಮ್ ಗ್ರೂಪ್ ನ ಸೇರಿಕೊಳ್ಳಿ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವ ಕೆಲಸ ನಾವು ಮಾಡ್ತೀವಿ. ಕೋವಿಡ್-19 ಕುರಿತಾದ ಎಕ್ಸ್ ಪರ್ಟ್ಸ್ ಕೂಡ ಈ ಗ್ರೂಪ್ ಗೆ ಸೇರಲಿದ್ದಾರೆ'' ಎಂದು ಕರ್ನಾಟಕ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಟ್ವೀಟ್ ಮಾಡಿದ್ದಾರೆ.

Covid-19: Karnataka:
— Captain Manivannan (@mani1972ias) March 13, 2020
Do you have a question to ask the govt depts about Covid-19 and don't know whom to ask or 104 is busy? Please join this informal Telegram group: https://t.co/ppAchJGahp. We will try to get answers for you.
Experts on 'Covid19' are also invited to join.
ಇಂದು (ಶನಿವಾರ) ಬೆಳಗ್ಗೆ 11.30 ರ ಸುಮಾರಿಗೆ ಈ ಟೆಲಿಗ್ರಾಮ್ ಗ್ರೂಪ್ ಗೆ 597 ಮಂದಿ ಸೇರಿಕೊಂಡಿದ್ದಾರೆ. ಗ್ರೂಪ್ ನ ಸದಸ್ಯರಿಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡುತ್ತಿದೆ.
ಇಲ್ಲಿಯವರೆಗೂ ಕರ್ನಾಟಕದಲ್ಲಿ ಆರು ಮಂದಿಗೆ ಕೋವಿಡ್-19 ಪಾಸಿಟಿವ್ ಪತ್ತೆ ಆಗಿದೆ. ಕಲಬುರಗಿಯಲ್ಲಿ 76 ವರ್ಷದ ವ್ಯಕ್ತಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ವೈರಸ್ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.












Click it and Unblock the Notifications