Govt Employee: ಕರ್ನಾಟಕದ ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್: ಈ ದಿನಗಳಲ್ಲಿ ಖಾದಿ ಉಡುಪು ಏನಿದು ಚರ್ಚೆ
Karnataka Govt Employee Dress Code: ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್‌ಗೆ ಸಂಬಂಧಿಸಿದಂತೆ ಮಹತ್ವದ ಆದೇಶಕ್ಕೆ ಮುಂದಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ ಶುರುವಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಡ್ರಸ್ ಕೋಡ್‌ಗೆ ಸಂಬಂಧಿಸಿದಂತೆ ಮಾಡಲಾಗಿರುವ ಆದೇಶದ ವಿವರ ಇಲ್ಲಿದೆ.
ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಖಾದಿ ಉಡುಪನ್ನು ಧರಿಸುವುದು ಮತ್ತು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸೇರಿದಂತೆ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಧಿಕಾರಿಗಳು / ಸಿಬ್ಬಂದಿ ಎಲ್ಲರೂ ಖಾದಿ ಉಡುಪನ್ನು ಧರಿಸುವ ಕುರಿತಂತೆ ಚರ್ಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ 29.01.2026ರ ಮಧ್ಯಾಹ್ನ 12ಕ್ಕೆ ಕೊಠಡಿ ಸಂಖ್ಯೆ:320 ವಿಧಾನಸೌಧ ಇಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ. ಈ ಸಭೆಗೆ ತಾವು ಹಾಜರಾಗಬೇಕೆಂದು ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಹಿರಿಯ ಆಪ್ತ ಕಾರ್ಯದರ್ಶಿ ಬಿ. ಸದಾನಂದ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಇನ್ನು ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ಖಾದಿ ಉಡುಪನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಚರ್ಚೆ ನಡೆಸುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ ಶುರುವಾಗಿದೆ.
Karnataka Govt Employee Dress Code: ಸೋಷಿಯಲ್ ಮೀಡಿಯಾದಲ್ಲಿ ವಿರೋಧ
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಸಮುದ್ಯತಾ ಕಂಜರ್ಪಣೆ ಎನ್ನುವವರು ಒಂದೊಂದಲ್ಲ ಇವ್ರದ್ದು..
ಮೂಲಭೂತ ಸೌಕರ್ಯಗಳನ್ನ ನೆಟ್ಟಗ್ ಮಾಡ್ರಪ್ಪಾ ಅಂದ್ರೆ ಬರೀ ಇಂಥವೇ ಮಾಡ್ಕೊಂಡಿರೋದು. ಖಾದಿ ಏನ್ ಕಮ್ಮಿಗ್ ಬರಲ್ಲ. ಸಕತ್ ಕಾಸ್ಲಿನೇ ಇರೋದು. ಜೊತೆಗೆ ವರ್ಷಾನುಗಟ್ಟಲೆನೂ ಬರಲ್ಲ. ಬಣ್ಣ ಬಿಡತ್ತೆ, ಫೇಡ್ ಆಗತ್ತೆ. ನಂಗಂತೂ ಸಾಕಪ್ಪಾ ಅನ್ನುವಷ್ಟು ಅನುಭವ ಆಗಿದೆ.
ಒಳ್ಳೆ ಕ್ವಾಲಿಟಿ ಅಂದ್ರೆ ಜಾಸ್ತಿನೇ ಇರತ್ತೆ. ಕೊನೆಗೆ ಅದನ್ನ ಎಲ್ಲೆಲ್ಲೋ ತೊಗೊಳದ್ ಬೇಡ ಅಂತ ಅದಕ್ಕೂ ಟೆಂಡರ್ ಕರೆದು ಒಂದಕ್ಕೆ ನಾಲಕ್ಕು ಬಿಲ್ ಮಾಡಿ ಖಜಾನೆ ತುಂಬಿಸ್ಕೊಳಿ. ಕರ್ನಾಟಕದಲ್ಲಿ ಸಮಸ್ಯೆನೇ ಇಲ್ವಾ ಬೇರೆ ? ಸರ್ಕಾರಿ ಶಾಲೆ ಮಕ್ಳಿಗೆ ಟೈಂ ಟು ಟೈಂ ಯೂನಿಫಾರ್ಮ್, ಶೂಸ್ ಎಲ್ಲ ಕೊಡಿ ಮೊದ್ಲು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬೇಕಾಗಿರೋ ವ್ಯವಸ್ಥೆ ಇದ್ಯಾ ನೋಡಿ. ಉತ್ತರ ಕನ್ನಡ, ಕಾರವಾರದಂತ ಕಡೆ ಒಳ್ಳೆ ಆಸ್ಪತ್ರೆ ಕಟ್ಟಿಸಿ. ಚಾಮರಾಜನಗರ ಕಡೆ ಗ್ರಾಮೀಣ ರಸ್ತೆ ಅಭಿವೃದ್ಧಿ ಮಾಡಿ. ಬೆಂಗಳೂರಲ್ಲಿ ರಸ್ತೆಗುಂಡಿ ಮುಚ್ಚಿ. ಆ್ಯಂಬುಲೆನ್ಸ್‌ಗಳ ಸರ್ವಿಸ್ ಮಾಡಿಸಿ. ತಾಲೂಕಿಗೆ ಎರಡು ಸರಿಯಾದ ಆ್ಯಂಬುಲೆನ್ಸ್ ಇದೆಯಾ ನೋಡಿ. ಆಮೇಲೆ ಈ ಖಾದಿ, ರೇಷ್ಮೆ ಇನ್ನೊಂದು ಎಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications