Get Updates
Get notified of breaking news, exclusive insights, and must-see stories!

ಯಡಿಯೂರಪ್ಪ ಸರಕಾರದಿಂದ ಹೊರಬಿದ್ದ ಮೊದಲ ಆದೇಶ

Recommended Video

      ಬಿ ಎಸ್ ಯಡಿಯೂರಪ್ಪ ಸರ್ಕಾರದಿಂದ ಹೊರಬಿದ್ದ ಮೊದಲ ಆದೇಶ | Oneindia Kannada

      ಬೆಂಗಳೂರು, ಜುಲೈ 28: ಅಧಿಕಾರ ಸ್ವೀಕರಿಸಿದ ಎರಡನೇ ದಿನದಲ್ಲಿ ಯಡಿಯೂರಪ್ಪ ಸರಕಾರದ ಮೊದಲ ಆದೇಶ ಹೊರಬಿದ್ದಿದೆ.

      ಹಿರಿಯ ವಕೀಲ ಪ್ರಭುಲಿಂಗ ಕೆ ನಾವಡಗಿ ಅವರನ್ನು ನೂತನ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಿಸಿ, ರಾಜ್ಯಪಾಲ ವಜುಭಾಯಿ ವಾಲ ಶನಿವಾರ (ಜುಲೈ 27) ಸಂಜೆ ಆದೇಶ ಹೊರಡಿಸಿದ್ದಾರೆ.

      ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಈ ಹುದ್ದೆಯಲ್ಲಿದ್ದ ಉದಯ್ ಹೊಳ್ಳ ರಾಜೀನಾಮೆ ನೀಡಿದ ನಂತರ, ರಾಜ್ಯಪಾಲರು ನಾವಡಗಿ ಅವರನ್ನು ಈ ಆಯಕಟ್ಟಿನ ಹುದ್ದೆಗೆ ನೇಮಿಸಿದ್ದಾರೆ.

      Karnataka Governor Appointed Prabhuling K Navadagi As New Advocate General

      ನಾವಡಗಿ ಅವರು 2015 ರಿಂದ ಭಾರತ ಸರ್ಕಾರಕ್ಕೆ (ಕರ್ನಾಟಕದ ಹೈಕೋರ್ಟ್) ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕೆಲಸ ನಿರ್ವಹಿಸಿದ್ದರು. ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಕೆ ಬಿ ನಾವಡಗಿ ಅವರ ಪುತ್ರರಾಗಿರುವ ಪ್ರಭುಲಿಂಗ ನಾವಡಗಿ, 2011ರಲ್ಲಿ ಕರ್ನಾಟಕದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.

      ಕಳೆದ ವರ್ಷ ಮೂರು ದಿನಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯೂ, ನಾವಡಗಿ ಅವರನ್ನು ಆ ಹುದ್ದೆಗೆ ನೇಮಿಸಲಾಗಿತ್ತು. ಆದರೆ, ಬಿಎಸ್ವೈ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾದ ನಂತರ ನಾವಡಗಿ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು.

      ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಆ ಸರ್ಕಾರದ ಅವಧಿಯಲ್ಲಿ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿದ್ದ ಉದಯ್ ಹೊಳ್ಳ ಅವರು ಶುಕ್ರವಾರ (ಜುಲೈ 26) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+