Karnataka Government: ಹೊಸ ವರ್ಷಕ್ಕೆ ಐಎಎಸ್‌, ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ಭಾಗ್ಯ

ರಾಜ್ಯ ಸರ್ಕಾರವು ಹೊಸ ವರ್ಷದ ಹೊತ್ತಲ್ಲೇ ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದೆ. ಹೊಸ ವರ್ಷದ ಕೊಡುಗೆಯಾಗಿ 67 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜನವರಿ 1 ಇಂದಿನಿಂದಲೇ ಅನ್ವಯವಾಗುವಂತೆ ಐಎಎಸ್ ಅಧಿಕಾರಿಗಳಿಗೆ ವಿವಿಧ ಶ್ರೇಣಿಗೆ ಬಡ್ತಿ ನೀಡಿದೆ. ಅಲ್ಲದೆ ಐಪಿಎಸ್ ಅಧಿಕಾರಿಗಳಿಗೆ ಮತ್ತು 50 ಎಸ್ಪಿಗಳಿಗೆ ಎಸ್​ಪಿಪಿಯಾಗಿ ಬಡ್ತಿ ನೀಡಿದೆ.

ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಕೆಲ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಇದೀಗ ಹೊಸ ವರ್ಷದ ಆರಂಭದಲ್ಲೇ ಐಎಎಸ್‌, ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿಭಾಗ್ಯ ನೀಡಿದೆ. ಈ ಮೂಲಕ ರಾಜ್ಯದ ಆಡಳಿತ ಯಂತ್ರವನ್ನು ಚುರುಕುಗೊಳಿಸಿದೆ.

Karnataka Government Promotes IPS And IAS Officers During New Year

ಐಪಿಎಸ್ ಅಧಿಕಾರಿಗಳಾದ ರಮಣ ಗುಪ್ತಾ (ಹೆಚ್ಚುವರಿ ಪೊಲೀಸ್ ಆಯುಕ್ತ, ಗುಪ್ತಚರ ವಿಭಾಗ), ಚೇತನ್ ಸಿಂಗ್ ರಾಥೋಡ್ ಐಜಿಪಿ (ಈಶಾನ್ಯ ವಲಯ ಬೆಳಗಾವಿ), ವಿಕಾಸ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ), ಅಮಿತ್ ಸಿಂಗ್ (ಪಶ್ಚಿಮ ವಲಯ ಐಜಿಪಿ ಮಂಗಳೂರು), ವಂಶಿಕೃಷ್ಣ (ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ, ಬೆಂಗಳೂರು), ಕಾರ್ತಿಕ್ ರೆಡ್ಡಿ (ರಾಮನಗರ ಪೊಲೀಸ್ ವರಿಷ್ಠಾಧಿಕಾರಿ) ಕುಲದೀಪ್ ಕುಮಾರ್ ಜೈನ್ (ಡಿಐಜಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ), ಸಂತೋಷ್ ಬಾಬು ಅವರಿಗೆ ಗುಪ್ತಚರ ಇಲಾಖೆ ಡಿಐಜಿಯಾಗಿ ಬಡ್ತಿ ನೀಡಲಾಗಿದೆ.

ಗುಪ್ತಚರ ಇಲಾಖೆಯ ಡಿಐಜಿಯಾಗಿ ಇಶಾ ಪಂತ್ ಬಡ್ತಿ ಪಡೆದಿದ್ದಾರೆ. ಜಿ.ಸಂಗೀತಾ (ಸಿಐಡಿ ಅರಣ್ಯ ಘಟಕ, ಡಿಐಜಿ), ಮೈಸೂರು ಕಮಿಷನರ್ ಆಗಿ ಸೀಮಾ ಲಾಟ್ಕರ್ ಮುಂದುವರಿಕೆ ಜೊತೆಗೆ ಡಿಐಜಿ ಬಡ್ತಿ, ರೇಣುಕಾ ಕೆ.ಸುಕುಮಾರ್ (ಡಿಸಿಆರ್​ಇ, ಬೆಂಗಳೂರು ಡಿಐಜಿಯಾಗಿ ಬಡ್ತಿ), ಭೀಮಾಶಂಕರ ಗುಳೇದ್ (ಬೆಳಗಾವಿ ಎಸ್​ಪಿಯಾಗಿ ಮುಂದುವರಿಕೆ), ಎನ್.ಶಶಿ ಕುಮಾರ್ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಮಹಾನಿರೀಕ್ಷಕರಾಗಿ ಬಡ್ತಿ, ವೈ.ಎಸ್.ರವಿ ಕುಮಾರ್ (ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್​ ಆಗಿ ಬಡ್ತಿ ಇಂಟಲಿಜೆನ್ಸ್, ಬೆಂಗಳೂರು) ಸೇರಿದಂತೆ 50 ಎಸ್​ಪಿಗಳಿಗೆ ಎಸ್​ಪಿಪಿಯಾಗಿ ಬಡ್ತಿ ನೀಡಲಾಗಿದೆ.

Karnataka Government Promotes IPS And IAS Officers During New Year

ಕಳೆದ ಅಕ್ಟೋಬರ್‌ನಲ್ಲಿಯೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ನಡೆದಿತ್ತು. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ 7 ಡಿವೈಎಸ್‌ಪಿ ಹಾಗೂ 55 ಪೊಲೀಸ್ ಇನ್ಸ್​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ 7 ಮಂದಿ ಡಿವೈಎಸ್‌ಪಿ ಹಾಗೂ 55 ಇನ್ಸ್​ಪೆಕ್ಟರ್​​ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಆಗ ಡಿವೈಎಸ್‌ಪಿ ಕೆ.ಎಂ.ಸತೀಶ್ ಅವರನ್ನು ಎಲೆಕ್ಟ್ರಾನಿಕ್‌ಸಿಟಿ ಉಪ ವಿಭಾಗಕ್ಕೆ ವರ್ಗಾಯಿಸಿ, ಗೋಪಾಲ್ ನಾಯಕ್ ಅವರನ್ನು ಬೆಂಗಳೂರಿನ ಬಿಎಂಟಿಎಫ್‌ಗೆ ವರ್ಗಾಯಿಸಲಾಗಿತ್ತು. ಉಳಿದ ಡಿವೈಎಸ್‌ಪಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿತ್ತು. 55 ಮಂದಿ ಇನ್ಸ್​ಪೆಕ್ಟರ್​​ಗಳಲ್ಲಿ ರೇಣುಕಾ ಅವರನ್ನು ವೈಟ್‌ಫೀಲ್ಡ್​​ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಲಿಂಗರಾಜು ಅವರು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ಟ್ರಾನ್ಸ್‌ಫರ್‌ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+