Get Updates
Get notified of breaking news, exclusive insights, and must-see stories!

Diploma Internship: ಶೀಘ್ರದಲ್ಲೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯ ನಿಯಮ ಜಾರಿ

ಬೆಂಗಳೂರು, ಫೆಬ್ರವರಿ 14: ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ತೆರಳು ಮುನ್ನ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ಮುಂದಿನ ಉದ್ಯೋಗದಲ್ಲಿ ಒಂದಿಷ್ಟು ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಆರಂಭವಾದ ಇಂಟರ್ನ್‌ಶಿಪ್‌ ಎನ್ನುವ ವಿಚಾರ ಇಂದು ಅನೇಕರಿಗೆ ಸುಲಭವಾಗಿ ಉದ್ಯೋಗ ಗಳಿಸಲು ಹಾಗೂ ಉದ್ಯೋಗದಲ್ಲಿ ಯಶಸ್ವಿಯಾಗಲು ಸಹಕಾರಿಯಾಗಿದೆ.

ಈಗಾಗಲೇ ಅನೇಕ ಕೋರ್ಸ್‌ಗಳಿಗೆ ಇಂಟರ್ನ್‌ಶಿಪ್‌ ಕಡ್ಡಾಯವಾಗಿದ್ದು, ಒಬ್ಬ ವಿದ್ಯಾರ್ಥಿ ಕಾಲೇಜು ಅಭ್ಯಾಸವನ್ನು ಮುಗಿಸುವುದರ ಜೊತೆಗೆ ಇಂಟರ್ನ್‌ಶಿಪ್‌ಅನ್ನು ಯಶಸ್ವಿಯಾಗಿ ಮುಗಿಸಿದರೆ ಮಾತ್ರ ಆ ಕೋರ್ಸ್ ಪೂರ್ಣಗೊಂಡತಾಗುತ್ತದೆ. ಬಳಿಕವಷ್ಟೇ ತಮ್ಮ ಆಯ್ಕೆ ವಿಷಯ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.

Karnataka Government Implements Mandatory Internship Rule for Diploma Students

ಇದೀಗ ಕರ್ನಾಟಕ ಸರ್ಕಾರ ರಾಜ್ಯದ ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿಚಾರದಲ್ಲಿಯೂ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮುಂದಿನ ವರ್ಷದಿಂದ ಇಂಟರ್ನ್ಶಿಪ್ ಮಾಡುವುದು ಕಡ್ಡಾಯವಾಗಿದೆ. ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕಾರ್ಯರೂಪಕ್ಕೆ ತರುವಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.

ಪ್ರಸಕ್ತ ಶೈಕ್ಷಣಿಕ ವರ್ಷ ಅಂದರೆ 2025-26ರ ಶೈಕ್ಷಣಿಕ ವರ್ಷದಲ್ಲಿ ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್‌ನ 6ನೇ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸದ್ಯ ಈ ವಿಚಾರವಾಗಿ ಕರಡು ಪ್ರತಿ ಸಿದ್ಧಪಡಿಸಲು ಸರ್ಕಾರ, ಉದ್ಯಮ ವಲಯದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದೆ.

Karnataka Government Implements Mandatory Internship Rule for Diploma Students

ಸದ್ಯದ ಮಾಹಿತಿ ಪ್ರಕಾರ 2025-26ರ ಶೈಕ್ಷಣಿಕ ವರ್ಷದ ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಸಿ-25 ಪಠ್ಯಕ್ರಮದಲ್ಲಿ 6ನೇ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗೆ ಸಂಬಂಧಿಸಿದ ಯಾವುದಾದರೂ ಒಂದು ಉದ್ಯಮದಲ್ಲಿ 13 ವಾರಗಳ ಇಂಟರ್ನ್‌ಶಿಪ್ ಮಾಡಬೇಕು ಅಥವಾ ಯಾವುದಾದರೂ ಉದ್ಯಮದಲ್ಲಿ ಪ್ರಾಜೆಕ್ಟ್ ಒಂದನ್ನು ಪೂರೈಸುವುದು ಕಡ್ಡಾಯ ಮಾಡಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಉದ್ಯಮ ವಲಯದ ಪ್ರತಿಕ್ರಿಯೆ ಬಂದ ಬಳಿಕ ಕರ್ನಾಟಕ ಸರ್ಕಾರ ಅಧೀಕೃತ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+