ಎಫ್‌ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ಫಿನಾಲೆಗೆ ಕರ್ನಾಟಕದ 3 ಬೆಡಗಿಯರು
ಬೆಂಗಳೂರು, ಫೆಬ್ರವರಿ 11: ಎಫ್‌ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ 2019ರ ಫಿನಾಲೆಗೆ ಕರ್ನಾಟಕದ ಮೂರು ಮಂದಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಫಿಯೋನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಇತ್ತೀಚೆಗೆ ನಡೆದ ಎಫ್‌ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ 2019 ಸ್ಪರ್ಧೆಯಲ್ಲಿ ಮೂವರು ಆಯ್ಕೆಯಾಗಿದ್ದಾರೆ.ರಾಜ್ಯದ ವಿವಿಧೆಡೆಯಿಂದ ಒಟ್ಟು 100 ಮಂದಿ ಭಾಗವಹಿಸಿದ್ದರು.
2018ರ ಎಫ್‌ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾದ ವಿಜೇತೆ ಭಾವನಾ ದುರ್ಗಂ, 2015ರ ಮಿಸ್ಟರ್ ಇಂಡಿಯಾದ ಮೊದಲನೇ ರನ್ನರ್ ಅಪ್ ರಾಹುಲ್ ರಾಜಶೇಖರನ್ ನಾಯರ್ ಆಡಿಶನ್‌ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.

ಬೆಂಗಳೂರಿನ ದೀವಿತಾ ರೈ, ಕೇರಳ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಶಾಲಿನಿ ಮೆನನ್ , ಉತ್ತರಾಖಂಡ ಮೂಲದ ಆಶ್ನಾ ಭಿಷ್ಟ್ ಆಯ್ಕೆಯಾಗಿದ್ದಾರೆ.












Click it and Unblock the Notifications