ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ₹2 ಲಕ್ಷ ಕೃಷಿ ಸಾಲ ಮನ್ನಾ ಮಾಡಿ; ವಿಜಯೇಂದ್ರ ಆಗ್ರಹ

ಮಹಾರಾಷ್ಟ್ರದಲ್ಲಿ ರೈತರಿಗೆ ₹2 ಲಕ್ಷದವರೆಗೆ ಕೃಷಿ ಸಾಲ ಮನ್ನಾ ಮಾಡಿರುವ ಮಾದರಿಯಲ್ಲೇ ಕರ್ನಾಟಕದಲ್ಲೂ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಆತ್ಮಸ್ಥೈರ್ಯ ತುಂಬಬೇಕು ಎಂದು ಒತ್ತಾಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆಗೆ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ತೀವ್ರ ಬರದಿಂದ ತತ್ತರಿಸಿರುವ ರಾಜ್ಯದ ರೈತರ ನೆರವಿಗೆ ಬಾರದ ಸರ್ಕಾರ ಕೇವಲ ರಿಯಲ್ ಎಸ್ಟೇಟ್, ಟೌನ್‍ಶಿಪ್ ಮಾಡುವುದರಲ್ಲೇ ಮುಳುಗಿದೆ. ಸರ್ಕಾರ ದಿವಾಳಿಯಾಗಿದ್ದು, ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

Karnataka farmers BY Vijayendra Demands 2 Lakh farmers Loan Waiver in Karnataka on Maharashtra Model

ಎರಡೂವರೆ ಲಕ್ಷ ಹುದ್ದೆ ಖಾಲಿ

ರಾಜ್ಯದ ಹಣಕಾಸಿನ ಸ್ಥಿತಿ ಅಧೋಗತಿಗೆ ಹೋಗಿದೆ. ಅನ್ನದಾತರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುಕಾಲು ವರ್ಷವಾಗಿದೆ. ಆದರೆ ಅವರು ಹೇಳಿಕೊಳ್ಳುವಂತೆ ನುಡಿದಂತೆ ನಡೆಯದೆ ಕೇವಲ ಜಾಹೀರಾತು ನೀಡಿ ಪ್ರಚಾರದಲ್ಲಿ ತೊಡಗಿದೆ. ಒಂದೇ ಒಂದು ಹೊಸ ಯೋಜನೆ ಜಾರಿ ಮಾಡಲಿಲ್ಲ. ಶಾಸಕರ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಲಿಲ್ಲ. ಎರಡೂವರೆ ಲಕ್ಷ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಲಿಲ್ಲ. ಉದ್ಯೋಗಾವಕಾಶ ಸಿಗದೆ ಯುವ ಜನತೆ ಧಂಗೆ ಏಳುವ ಸ್ಥಿತಿಗೆ ಬಂದಿದ್ದಾರೆ.

Karnataka farmers: ರೈತ ವಿರೋಧಿ ನೀತಿಗಳಿಂದ ಸಂಕಷ್ಟ

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಪೀಡಿತ ರೈತರಿಗೆ ಪ್ರತಿ ಹೆಕ್ಟೇರ್‍ಗೆ 50 ಸಾವಿರ ಪರಿಹಾರ, 5 ಲಕ್ಷದವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ವಿಶೇಷ ಅಧಿವೇಶನದಲ್ಲಿ ಆಗ್ರಹ ಮಾಡಿದ್ದೇವು. ಆದರೆ ಸರ್ಕಾರ ಕೇವಲ ಎರಡೂವರೆ ಸಾವಿರ ಕೊಡುವ ಘೋಷಣೆ ಮಾಡಿಕೊಂಡು ಸುಮ್ಮನೆ ಕುಳಿತಿದೆ ಎಂದರು.

ಪ್ರತಿ ದಿನ ತ್ರಿ ಫೇಸ್ ಎಂಟು ಗಂಟೆ ವಿದ್ಯುತ್ ರೈತರಿಗೆ ಬೇಕಾಗಿದೆ. ಅದನ್ನೂ ಸರ್ಕಾರ ಕೊಡಲಿಲ್ಲ. ಸರ್ಕಾರದ ಇಂತಹ ಧೋರಣೆಯಿಂದ ಜನರು ಬೇಸತ್ತು. ಆತ್ಮಸ್ಥೈರ್ಯ ಕಳೆದುಕೊಂಡ ರೈತ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ತಿಳಿಸಿದರು.

ಟೌನ್‍ಶಿಪ್, ರಿಯಲ್ ಎಸ್ಟೇಟ್ ಕಡೆಗೆ ಮಾತ್ರ ಕಾಳಜಿ

ಮುಖ್ಯಮಂತ್ರಿಗಳಿಗೆ ಟೌನ್‍ಶಿಪ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಕಡೆಗೆ ಮಾತ್ರವೇ ಆಸಕ್ತಿ. ರೈತರ ಬಗ್ಗೆ ಕಿಂಚಿತೂ ಕಾಳಜಿ ಇಲ್ಲದಿರಿವುದು ದುರ್ದೈವ. ನಾನು ಪ್ರಜಾಸೇವಕ ಎಂದು ಸಿಎಂ ಹೇಳಿಕೊಂಡರೆ ಸಾಲದು. ಜನರ ಬಗ್ಗೆ ಕಾಳಜಿಯೂ ಇರಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಜನ ಬರದಿಂದ ಇಷ್ಟೊಂದು ಕಷ್ಟದಲ್ಲಿದ್ದರೆ ಮುಖ್ಯಮಂತ್ರಿ ಮಾತ್ರ ಯಾವುದೇ ಚಿಂತೆ ಇಲ್ಲದೆ ಇದ್ದಾರೆ. ರೈತರ ಸಮಸ್ಯೆ ಅರ್ಥಮಾಡಿಕೊಳ್ಳಿ ಎಂದು ನಾವು ಕೇಳಿದರೆ ಸಿಎಂ ಹೆಲಿಕಾಪ್ಟರ್‍ನಲ್ಲಿ ಬಂದು ಬರ ವೀಕ್ಷಣೆ ಮಾಡಿದರು ಎಂದು ಬಿ ವೈ ವಿಜಯೇಂದ್ರ ಅವರು ಆರೋಪಿಸಿದರು.

ತೆಲಂಗಾಣಕ್ಕೆ ನೀರು ಅಕ್ಷಮ್ಯ ಅಪರಾಧ

ವಯನಾಡಿನಲ್ಲಿ ರಾಹುಲ್ ಗಾಂಧಿ ಖುಷಿಪಡಿಸಲು ರಾಜ್ಯದ ತೆರಿಗೆ ಹಣವನ್ನು ನೀಡಿದ್ದ ಮುಖ್ಯಮಂತ್ರಿಗಳು ಈಗ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ಎರಡು ಟಿಎಂಸಿ ನೀರು ಬಿಡಲು ಮೌಖಿಕ ಆದೇಶ ನೀಡಿದ್ದಾರೆ. ಏಕೆಂದರೆ ಸಿಎಂ ಪರಮಾಪ್ತ ತೆಲಂಗಾಣದಲ್ಲಿ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿಗಳ ವ್ಯವಹಾರದ ಆಸಕ್ತಿಯೂ ಸಹ ತೆಲಂಗಾಣದಲ್ಲಿ ಇದೆ. ಅದಕ್ಕೆ ನೀರು ಬಿಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ನಮ್ಮ ರಾಜ್ಯದಲ್ಲೇ ನೀರಿಗೆ ಹಾಹಾಕಾರ ಇದೆ. ಆದರೆ ತಮ್ಮ ಸ್ನೇಹಿತನನ್ನು ಖುಷಿಪಡಿಸಲು ನೀರು ಬಿಡುವುದು ಅಕ್ಷಮ್ಯ ಅಪರಾಧ ಎಂದು ವಿಶ್ಲೇಷಿಸಿದರು.

ಗೊಡ್ಡು ಬೆದರಿಕೆಗೆ ಹೆದರಲ್ಲ

ಎಸ್‍ಐಆರ್ ವಿಚಾರದಲ್ಲೂ ರಾಹುಲ್ ಗಾಂಧಿ ಖುಷಿ ಪಡಿಸಲು ಫಾರಂ 7 ನೆಪ ಮಾಡಿಕೊಂಡು ಮುಖ್ಯಮಂತ್ರಿಗಳು ರಾಜ್ಯ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿದರು. ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡ್ತಾ ಇದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದರು.

ಸರ್ಕಾರ ಕೆಡವುವ ಅವಶ್ಯಕತೆ ಇಲ್ಲ

ತಮ್ಮ ಕುರ್ಚಿಯನ್ನು ತಮ್ಮದೇ ಶಾಸಕರು ಅಲ್ಲಾಡಿಸುತ್ತಿದ್ದಾರೆ ಎಂಬ ಆತಂಕ ಸಿಎಂಗೆ ಕಾಡುತ್ತಿದೆ. ಅದಕ್ಕೆ ನಮ್ಮ ಮೇಲೆ ಆರೋಪ ಮಾಡ್ತಾ ಇದ್ದಾರೆ. ನಿಮ್ಮ ಸರ್ಕಾರ ಬೀಳಿಸುವ ಅವಶ್ಯಕತೆ ಇಲ್ಲ. ಸರ್ಕಾರವನ್ನು ಜನರೇ ಮನೆಗೆ ಕಳಿಸುತ್ತಾರೆ. ಬಿಪಿಎಲ್ ಕಾರ್ಡ್ ಗೆ ತಡೆ ನೀಡಿದ್ದಾರೆ. ಮಾಸಾಶನ ನಿಲ್ಲಿಸಿದ್ದಾರೆ. ಮನೆ ನೀಡಿಲ್ಲ. ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ಕೋಟಿ ಕೋಟಿ ಘೋಷಣೆ ಮಾಡ್ತಾ ಇದ್ದಾರೆ.

ವೇತನಕ್ಕೂ ಸರ್ಕಾರದಲ್ಲಿ ಹಣ ಇಲ್ಲ. ಸಾರಿಗೆ ನಿಗಮದಲ್ಲಿ ಹಣ ಇಲ್ಲದೆ ಬಸ್‍ಗಳು ಡಿಪೋದಲ್ಲೇ ನಿಂತಿವೆ. ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ. ಒಟ್ಟಾರೆ ಸರ್ಕಾರ ದಿವಾಳಿಯಾಗಿ ಆರ್ಥಿಕ ತುರ್ತುಸ್ಥಿತಿ ಎದುರಿಸುತ್ತಿದೆ ಎಂದು ಹೇಳಿದರು. ಸರ್ಕಾರ ಇಷ್ಟೊಂದು ವೈಫಲ್ಯಗಳನ್ನು ಎದುರಿಸುತ್ತಿದ್ದರೂ ಮರೆಮಾಚಲು ಸಾಂವಿಧಾನಿಕ ಸಂಸ್ಥೆಗಳ ಮೇಲೆ, ಬಿಜೆಪಿ ಮೇಲೆ ಸಿಎಂ ಆರೋಪ ಮಾಡ್ತಾ ಇದ್ದಾರೆ. ಈ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+