ಟ್ವಿಟ್ಟರ್ ನಲ್ಲಿ ಮತ್ತೆ ಸುದ್ದಿ ಮಾಡುತ್ತಿದೆ ಪ್ರಕಾಶ್ ರೈ ವಿಡಿಯೋ

ಬೆಂಗಳೂರು, ಮೇ 05: ಪ್ರಧಾನಿ ನರೇಂದ್ರ ಮೋದಿಯವರಿಗೆ ಮತಿಭ್ರಮಣೆಯಾಗಿದೆಯೇ ಎಂದು ಪ್ರಶ್ನಿಸಿ ಸುದ್ದಿಯಾಗದಿದ್ದ ಪ್ರಕಾಶ್ ರೈ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಗ್ಗಾಮುಗ್ಗಾ ಥಳಿಸಿದ ಈ ವಿಡಿಯೋವನ್ನು ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಷ್ಟೇ ಅಲ್ಲ, ಕರ್ನಾಟಕದ ಜನತೆ ಎಂಥ ಪಕ್ಷಕ್ಕೆ ಮತ ಹಾಕಬೇಕು ಎಂಬ ಬಗ್ಗೆ ಸಲಹೆ ನೀಡಿದ ಮತ್ತೊಂದು ವಿಡಿಯೋವನ್ನೂ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯೊಂದಿಗೆ ಸುದ್ದಿಯಲ್ಲಿರುವ ಪ್ರಕಾಶ್ ರೈ ಟೈಮ್ಸ್ ನೌ ಏರ್ಪಡಿಸಿದ್ದ ಕಾಂಕ್ಲೇವ್ ನಲ್ಲಿಯೂ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಂದ ಮುಖಾಮುಖಿ ಚರ್ಚೆ ನಡೆಸಿದ್ದರು.

Array

ಚರ್ಚಾ ಸ್ಪರ್ಧೆ ನಡೆಸುತ್ತಿದ್ದೀರಾ?

ಪ್ರಧಾನಿ ನರೇಂದ್ರ ಮೋದಿಯವರನ್ನು ಎಂದಿನಂತೆ ತರಾಟೆಗೆ ತೆಗೆದುಕೊಂಡಿರುವ ಪ್ರಕಾಶ್ ರೈ, ಈ ವಿಡಿಯೋದಲ್ಲಿ, 'ನಿಮಗೆ ಮತಿಭ್ರಮಣೆಯಾಗಿದೆಯೇ' ಎಂದು ಮೋದಿಯವರನ್ನು ಪ್ರಶ್ನಿಸಿದ್ದಾರೆ. 'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹದಿನೈದು ನಿಮಿಷ ಕಾಗದ ನೋಡದೆ ಮಾತನಾಡಲಿ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರೇನು ದೇಶ ನಡೆಸುತ್ತಿದ್ದಾರಾ ಇಲ್ಲಾ, ಚರ್ಚಾ ಸ್ಪರ್ಧೆ ನಡೆಸುತ್ತಿದ್ದಾರಾ' ಎಂದು ಪ್ರಶ್ನಿಸಿದ್ದಾರೆ.

ಐ ಲವ್ ಯು ದೇವೇಗೌಡ ಅಂತಾರೆ ಮೋದಿ!

ಐ ಲವ್ ಯು ದೇವೇಗೌಡ ಅಂತಾರೆ ಮೋದಿ!

"ಈ ಇಳಿ ವಯಸ್ಸಲ್ಲಿ ದೇವೇಗೌಡ್ರು ತಮ್ಮ ಮಗನ್ನ ಮನೆಯಿಂದ ಹೊರಗೆ ಹಾಕ್ತೀನಿ ಬಿಜೆಪಿ ಜೊತೆ ಸೇರಿದ್ರೆ ಅಂತಾರೆ. ಆ ಕಡೆಯಿಂದ ನರೇಂದ್ರ ಮೋದಿ ದೇವೇಗೌಡ್ರಿಗೆ ಐ ಲವ್ ಯು ಅಂತಾರೆ. ನಿಮಗೆ ದೇವೇಗೌಡರಿಗೆ ಗೌರವ ಕೊಡೋಕೆ ಬರೋಲ್ಲ ಅಂತಾರೆ. ನೀವ್ ಕೊಟ್ಟಿದ್ ಗೌರವ ಗೊತ್ತಿಲ್ವೇ ಮೋದಿಯವರೇ? 2014 ರಲ್ಲಿ ದೇವೇಗೌಡರನ್ನ ಆಶ್ರಮಕ್ಕೆ ಕಳಿಸ್ತೀನಿ ಅಂದಿದ್ದು ನೀವೇ ಅಲ್ವೇ? ಈಗ ನೀವೇನ್ ಡಬಲ್ ಗೇಮ್ ಆಡ್ತಿದೀರಾ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಪ್ರಕಾಶ್ ರೈ.

ಚುನಾವಣಾ ವಿಡಿಯೋಗಳು

ದೇವೇಗೌಡರ ಪತ್ರ ಓದಿಲ್ಲವೇ?

ದೇವೇಗೌಡರ ಪತ್ರ ಓದಿಲ್ಲವೇ?

"ದೇವೇಗೌಡರಿಗೆ ಇಷ್ಟೆಲ್ಲ ಗೌರವ ಕೊಡುವ ನೀವೇಕೆ ಅವರ ಪತ್ರ ಓದಲಿಲ್ಲ? ಈಗೊಂದು ಎರಡು ತಿಂಗಳ ಮೊದಲು, 'ನರೇಂದ್ರ ಮೋದಿಯವರಿಗೆ ಎಷ್ಟೆಲ್ಲ ಪತ್ರ ಬರೆದೆ. ಅವರು ಯಾವುದಕ್ಕೂ ಉತ್ತ ಬರೆಯಲಿಲ್ಲ. ಭೇಟಿ ಮಾಡಬೇಕೆಂದು ಹೇಳಿದರೂ ಸಮಯ ನೀಡಲಿಲ್ಲ' ಎಂದು ದೇವೇಗೌಡರೇ ಹೇಳಿರಲಿಲ್ಲವೇ? ಆ ಹಿರಿಜೀವಕ್ಕೆ ಗೌರವ ನೀಡುವುದು ನಿಮಗೆ ಆಗ ನೆನಪಾಗಲಿಲ್ಲವೇ?" ಎಂದು ಕೇಳಿದ್ದಾರೆ ಪ್ರಕಾಶ್ ರೈ.

Array

ಬಿಜೆಪಿಗೆ ಕೂಗಿ ಹೇಳಿ...

ನಾವು ಕರ್ನಾಟಕದ ಜನರು ಅತ್ಯಂತ ದೊಡ್ಡ ಜವಾಬ್ದಾರಿ ಹೊತ್ತಿದ್ದೇವೆ. ನಾವು ಬಿಜೆಪಿಗೆ ಕೂಗಿ ಹೇಳಬೇಕಿದೆ: 'ಉಳಿಸಿಕೊಳ್ಳದ ಮಾತು, ಸಿದ್ಧಾಂತಗಳನ್ನು ಹೇರುವುದು, ಜೊತೆಯಲ್ಲಿ ಬದುಕುವ ಜನರೊಂದಿಗೆ ದ್ವೇಷ ಬಿತ್ತುವುದು, ಸುಳ್ಳಿನಿಂದ ದೇಶವನ್ನು ತಪ್ಪು ದಾರಿಗೆ ಎಳೆಯುವುದು ಮತ್ತು ಜನರನ್ನು ಹೆದರಿಸುವುದು ಇವ್ಯಾವುದೂ ಕೆಲಸಕ್ಕೆ ಬರುವುದಿಲ್ಲ.' ಎಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ ದೇಶ, ರಾಜ್ಯ, ಸಮಾಜದ ಬಗ್ಗೆ ಯೋಚಿಸಿ ಓಟು ಹಾಕಿ ಎಂದು ಕರ್ನಾಟಕದ ಜನತೆಯಲ್ಲಿ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+