Karnataka Opinion Poll: ಜನ್ ಕಿ ಬಾತ್ ಮಹಾ ಸಮೀಕ್ಷೆ, ಹಳೇ ಮೈಸೂರಿನಲ್ಲಿ ಯಾರಿಗೆ ಎಷ್ಟು ಸ್ಥಾನ?

ಬೆಂಗಳೂರು, ಏಪ್ರಿಲ್14: ವಿಧಾನಸಭಾ ಚುನಾವಣಾ ರಣಕಣ ಜೋರಾಗಿದೆ ಚುನಾವಣೇ ಭರ್ಜರಿ ತಯಾರಿ ನಡೆಸುತ್ತಿರುವ ರಾಜಕೀಯ ಪಕ್ಷಗಳು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿವೆ.

ಈ ಬಾರಿಯ 2023ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಹಲವು ಸಮೀಕ್ಷೆಗಳನ್ನ ನಡೆಸಿರುವ ರಾಜಕೀಯ ಪಕ್ಷಗಳಿಗೆ ಸರ್ವೆಯಿಂದ ಆಘಾತವಾಗಿದ್ದು, ಇನ್ನೂ ಚುನಾವಣಾ ತಯಾರಿಯನ್ನು ಚುರುಕುಗೊಳಿಸಿವೆ. ಇದೀಗ ಜನ್ ಕಿ ಬಾತ್ ಸುವರ್ಣ ನ್ಯೂಸ್‌ ಪ್ರಾಂತ್ಯಾವಾರು ಸಮೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.

Karnataka Elections Opinion Poll By Suvarna TV Region Wise

ಹಳೆ ಮೈಸೂರು ಭಾಗ ಅಂದ್ರೆ ಮೊದಲಿನಿಂದಲ್ಲೂ ಜೆಡಿಎಸ್‌ ಭದ್ರಕೋಟೆಯಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಈ ಬಾರಿಯೂ ಕಮಾಲ್‌ ಮಾಡುವ ಸಾಧ್ಯತೆಯಿದೆ. ಇನ್ನೂ 2023 ರ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ತಂತ್ರಗಾರಿಕೆಯನ್ನ ಬಿಜೆಪಿ ನಡೆಸಿದ್ದು, ಬಿಜೆಪಿ ಹೈಕಮಾಂಡ್‌ ನಾಯಕರನ್ನ ಹಳೇ ಮೈಸೂರು ಭಾಗಗಳಿಗೆ ಕರೆಸು ಮೂಲಕ ಮತಭೇಟೆಗೆ ಮುಂದಾಗಿದೆ.

ಇನ್ನೂ ಕಳೆದ ಬಾರಿಯಷ್ಟೇ ಈ ಬಾರಿಯೂ ಸ್ಥಾನ ಪಡೆಯಬಹುದು ಎಂದು ಜನ್ ಕಿ ಬಾತ್ ಮಹಾ ಸಮೀಕ್ಷೆಯ ಪ್ರಕಾರ ತಿಳಿಸಿದೆ. ಹಳೆ ಮೈಸೂರು ಭಾಗದ 57 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 23 ಸ್ಥಾನ ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಲಿದ್ದರೆ, ಜೆಡಿಎಸ್‌ 22 ಸ್ಥಾನದೊಂದಿಗೆ 2ನೇ ಸ್ಥಾನ ಹಾಗೂ ಬಿಜೆಪಿ 12 ಸ್ಥಾನದೊಂದಿಗೆ ಮೂರನೇ ಸ್ಥಾನ ಗಳಿಸಲಿದೆ ಎಂದು ಜನ್ ಕಿ ಬಾತ್ ಮಹಾ ಸಮೀಕ್ಷೆಯ ಮೂಲಕ ತಿಳಿದು ಬಂದಿದೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+