ಫಲಿತಾಂಶದ ಕುರಿತು ಯಾರ್ಯಾರು ಏನೇನು ಹೇಳಿದ್ದಾರೆ ಇಲ್ಲಿ ತಿಳಿಯಿರಿ
ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಫಲಿತಾಂಶಕ್ಕೆ ಕೆಲವೇ ಗಂಟೆಗಳಷ್ಟೆ ಬಾಕಿ ಇದೆ. ಇಡೀ ರಾಷ್ಟ್ರವೇ ಕರ್ನಾಟಕದ ಫಲಿತಾಂಶದತ್ತ ಚಿತ್ತ ನೆಟ್ಟಿದೆ. ಕಾಂಗ್ರೆಸ್, ಬಿಜೆಪಿ ಹಗೂ ಜೆಡಿಎಸ್ ಮೂರೂ ಪಕ್ಷಕ್ಕೆ ಈ ಫಲಿತಾಂಶ ಅತ್ಯಂತ ಮಹತ್ವದ್ದು ಎನಿಸಿದೆ.
ಫಲಿತಾಂಶ ಇನ್ನು ಒಂದು ದಿನವಿದ್ದಂತೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಕೇವಲ ರಾಜ್ಯ ನಾಯಕರು ಮಾತ್ರವಲ್ಲ ರಾಷ್ಟ್ರ ಮಟ್ಟದ ನಾಯಕರೂ ಸಹಿತ ಕರ್ನಾಟಕ ಚುನಾವಣೆ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹರಿಯಬಿಡುತಿದ್ದಾರೆ.
ಬಾಬಾ ರಾಮ್‌ದೇವ್, ಗುಲಾಬ್ ನಬಿ ಆಜಾದ್, ಯಡಿಯೂರಪ್ಪ, ಸಿದ್ದರಾಮಯ್ಯ, ದೇವೇಗೌಡ ಎಲ್ಲರೂ ಸಹ ತಮ್ಮ-ತಮ್ಮ ರಾಜಕೀಯ ಅನುಭವ, ದೂರದೃಷ್ಠಿ, ರಾಜಕೀಯ ಒಳ ಲೆಕ್ಕಾಚಾರಗಳ ಪ್ರಕಾರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಅವರೆಲ್ಲರ ಅಭಿಪ್ರಾಯಗಳ ಸಂಗ್ರಹ ಇಲ್ಲಿ ನಿಮಗಾಗಿ ನೀಡಿದೆ ಓದಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ.
|
ಇಲ್ಲಿ ಗೆದ್ದವರೇ 2019ರಲ್ಲಿ ಗೆಲ್ಲುತ್ತಾರೆ
'ಕರ್ನಾಟಕ ರಾಜ್ಯ ಚುನಾವಣಾ ಫಲಿತಾಂಶ ದೇಶದ ರಾಜಕೀಯಕ್ಕೆ ಹೊಸ ತಿರುವು ನೀಡುತ್ತದೆ, ಕರ್ನಾಟಕ ಚುನಾವಣೆಯಲ್ಲಿ ಯಾರು ವಿಜಯ ಸಾಧಿಸುತ್ತಾರೊ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸುತ್ತಾರೆ' ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.
| Array |
ಸಿದ್ದರಾಮಯ್ಯಗೆ ಸೋಲಿನ ವಾಸನೆ ಸಿಕ್ಕಿದೆ
ಮಾಧ್ಯಮಗಳೊಂದಿಗೆ ಮಾತನಾಡಿರುವ ಯಡಿಯೂರಪ್ಪ ಅವರು, 'ಸಿದ್ದರಾಮಯ್ಯ ಅವರು ದಲಿತ ಮುಖ್ಯಮಂತ್ರಿಗೆ ಸೀಟು ಬಿಡುತ್ತೇನೆ ಎಂದು 10 ದಿನಗಳ ಹಿಂದೆ ಏಕೆ ಹೇಳಿಲ್ಲ ಈಗ ಏಕೆ ಹೇಳುತ್ತಿದ್ದಾರೆ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ ಅಲ್ಲದೆ ಈ ಬಾರಿ ನಾವೇ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಎಲ್ಲದಕ್ಕೂ ನಾಳೆ ಉತ್ತರ ಸಿಗುತ್ತೆ: ದೇವೇಗೌಡ
ಮತದಾನ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಮುನ್ಸೂಚನೆ ಕೊಟ್ಟ ಕಾರಣ ಎಲ್ಲರ ಕಣ್ಣುಗಳು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕಡೆಗೆ ತಿರುಗಿವೆ. ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ದೇವೇಗೌಡ ಅವರು, ಮೈತ್ರಿಯ ಮಾತೇ ಇಲ್ಲ ನಾವೇ ಸರ್ಕಾರ ರಚಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
|
'ಅಮಿತ್ ಶಾ ಅಷ್ಟು ಪಕ್ಕಾ ಲೆಕ್ಕ ಹೇಗೆ ಹೇಳ್ತಾರೆ'
ಬೆಂಗಳೂರಿನಲ್ಲಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಗುಲಾಬ್ ನಬಿ ಆಜಾದ್ ಅವರು, ಬಿಜೆಪಿಯು ಚುನಾವಣಾ ಅಕ್ರಮ ಎಸಗಿದ್ದಾರೆ ಎಂಬ ಅನುಮಾನ ಹೊರಹಾಕಿದ್ದಾರೆ. 'ಅಮಿತ್ ಶಾ ಅವರು ಅಷ್ಟು ನಿಖರವಾಗಿ ಇಷ್ಟೆ ಸೀಟುಗಳು ಬರುತ್ತವೆ ಎಂದು ಹೇಗೆ ಹೇಳುತ್ತಾರೆ, ಏನೋ ಅಕ್ರಮ ಮಾಡಿದ್ದರಷ್ಟೆ ಅಷ್ಟು ನಿಖರವಾಗಿ ಹೇಳಲು ಸಾಧ್ಯ' ಎಂದಿದ್ದಾರೆ ಅವರು.

ಕೂಸು ಹುಟ್ಟುವ ಮುಂಚೆ ಕುಲಾಯಿ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರಂತೂ ಚುನಾವಣಾ ಫಲಿತಾಂಶದ ಬಗ್ಗೆ ಅತಿಯಾದ ಆತ್ಮವಿಶ್ವಾಸದಿಂದಿದ್ದಾರೆ. ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, 'ದೆಹಲಿಗೆ ತೆರಳುತ್ತಿದ್ದೇವೆ, ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಪ್ರಮಾಣವಚನ ದಿನದ ದಿನಾಂಕ ಸ್ಪಷ್ಟ ಮಾಡಿಕೊಂಡು ಬರುತ್ತೇನೆ' ಎಂದಿದ್ದಾರೆ. ಫಲಿತಾಂಶ ಬರುವ ಮುಂಚೆಯೇ ಯಡಿಯೂರಪ್ಪ ಅವರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಇದು ಅತಿಯಾದ ಆತ್ಮವಿಶ್ವಾಸವೇ ನಾಳೆ ನೋಡಬೇಕಿದೆ.












Click it and Unblock the Notifications