ಪುತ್ರನ ತಪ್ಪಿಗೆ ತಂದೆಯ ತಲೆದಂಡ? ಹ್ಯಾರಿಸ್ ಕೈತಪ್ಪಿತೇ ಟಿಕೇಟ್?

Posted By:
Subscribe to Oneindia Kannada
   Karnataka Elections 2018 : ಮಗನ ತಪ್ಪಿನಿಂದ ತಂದೆ ಎನ್ ಎ ಹ್ಯಾರಿಸ್, ಕೈತಪ್ಪುತ್ತಾ ಟಿಕೆಟ್?| Oneindia Kannada

   ಬೆಂಗಳೂರು, ಏಪ್ರಿಲ್ 16: ಈ ವರ್ಷದ ಫೆಬ್ರವರಿ ತಿಂಗಳು ಅತ್ಯಂತ ಹೆಚ್ಚು ಸುದ್ದಿಯಾಗಿದ್ದು ವಿದ್ವತ್ ಮೇಲಿನ ಹಲ್ಲೆ ಪ್ರಕರಣದಿಂದಾಗಿ! ಈ ಪ್ರಕರಣದ ಮುಖ್ಯ ಆರೋಪಿ ಮೊಹ್ಮದ್ ನಲಪಾಡ್, ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಮಗ ಎಂಬುದು ಮತ್ತಷ್ಟು ವಿವಾದ ಸೃಷ್ಟಿಸಿದ ಸಂಗತಿ. ಆ ಘಟನೆಯ ನಂತರ ಪುತ್ರನಿಗೆ ಜಾಮೀನು ಕೊಡಿಸುವ ಯತ್ನದಲ್ಲಿ ನಿರಂತರವಾಗಿ ಸೋಲುಂಡ ಶಾಸಕ ಹ್ಯಾರಿಸ್ ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ!

   ಕಾಂಗ್ರೆಸ್ ಪಟ್ಟಿ: ಒಂದೇ ಕ್ಷೇತ್ರ ಸಿಕ್ಕರೇನು, ಸಿದ್ದುವೇ ಬಿಗ್ ಬಾಸ್!

   ನಿನ್ನೆ(ಏ.15) ಬಿಡುಗಡೆಯಾದ ಕಾಂಗ್ರೆಸ್ ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರಿಲ್ಲ! ಶಾಂತಿನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಕಾಯ್ದಿರಿಸಿರುವ ಹೈಕಮಾಂಡ್ ನಡೆ ಹ್ಯಾರಿಸ್ ಅವರಲ್ಲಿ ಆತಂಕ ಸೃಷ್ಟಿಸಿದಂತಿದೆ. ಸಮೀಕ್ಷೆಯೊಂದರ ಪ್ರಕಾರ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಅಭಿವೃದ್ಧಿ ಹೊಂದಿದ ಕ್ಷೇತ್ರ ಎಂದರೆ ಶಾಂತಿನಗರ.

   ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಎರಡು ಬಾರಿ(2008 ಮತ್ತು 2013) ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರೂ ಪುತ್ರ ಮಾಡಿದ ಯಡವಟ್ಟಿನಿಂದಾಗಿ ತಂದೆ ಟಿಕೇಟ್ ನಿಂದ ವಂಚಿತರಾಗುತ್ತಾರಾ ಎಂಬ ಅನುಮಾನ ದಟ್ಟವಾಗಿದೆ! ಶಾಂತಿನಗರ ಟಿಕೇಟ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲುವ ಅಧಿಕಾರವನ್ನು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೇ ನೀಡಿರುವುದರಿಂದ ಸದ್ಯಕ್ಕೆ ಹ್ಯಾರಿಸ್ ರಾಜಕೀಯ ಭವಿಷ್ಯ ಸಿದ್ದರಾಮಯ್ಯ ಅವರ ಕೈಯಲ್ಲಿದೆ!

   ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?

   ಬಿ ಪ್ಯಾಕ್ ಸರ್ವೆಯಲ್ಲಿ ಅತ್ಯುತ್ತಮ ಶಾಸಕ ಹ್ಯಾರಿಸ್!

   ಬಿ ಪ್ಯಾಕ್ ಸರ್ವೆಯಲ್ಲಿ ಅತ್ಯುತ್ತಮ ಶಾಸಕ ಹ್ಯಾರಿಸ್!

   ಬಿ ಪ್ಯಾಕ್(B. PAC) ಎಂಬ ಎನ್ ಜಿಒ ನಡೆಸಿದ್ದ ಸರ್ವೆಯೊಂದರ ಪ್ರಕಾರ ಎನ್ ಎ ಹ್ಯಾರಿಸ್ ಬೆಂಗಳೂರಿನ ಅತ್ಯುತ್ತಮ ಶಾಸಕ ಎಂದು ಖ್ಯಾತಿ ಪಡೆದಿದ್ದವರಲ್ಲಿ ಹ್ಯಾರಿಸ್ ಸಹ ಒಬ್ಬರು. 100 ಕ್ಕೆ 84 ಅಂಕ ಗಳಿಸಿದ್ದ ಅವರು ತಮ್ಮ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. 2.18 ಲಕ್ಷ ಮತದಾರರನ್ನು ಪಡೆದ ಈ ಕ್ಷೇತ್ರದಲ್ಲಿ 70,000 ಕ್ಕೂ ಹೆಚ್ಚು ತಮಿಳಿಗರಿದ್ದಾರೆ. ಎಂಜಿ ಬೆಂಗಳೂರಿನ ದುಬಾರಿ ಪ್ರದೇಶಗಳಾದ ಎಂ.ಜಿ.ರಸ್ತೆ, ರಿಚ್ಮಂಡ್ ರಸ್ತೆ, ಬ್ರಿಗೆಡ್ ರಸ್ತೆ, ವಿಠ್ಠಲ್ ಮಲ್ಯ ರಸ್ತೆ ಇವೆಲ್ಲವೂ ಶಾಂತಿನಗರದಲ್ಲೇ ಬರುತ್ತವೆ. ಆದ್ದರಿಂದ ರಾಜಧಾನಿಯ ಬಹುಮುಖ್ಯ ಕ್ಷೇತ್ರಗಳಲ್ಲಿ ಶಾಂತಿನಗರವೂ ಒಂದು. ಹಲವು ಅಭಿವರದ್ಧಿ ಕಾರ್ಯಗಳನ್ನು ಮಾಡಿದ್ದರೂ ಶಾಂತಿನಗರ ಟಿಕೇಟ್ ಅನ್ನು ಕಾಯ್ದಿರಿಸಿರುವ ಕಾಂಗ್ರೆಸ್ ನಡೆಯಿಂದ ಹ್ಯಾರಿಸ್ ಅವರಿಗೆ ಇರಿಸುಮುರಿಸಾಗಿರುವುದು ಖಂಡಿತ!

   ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

   ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ...!

   ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ...!

   ಪುತ್ರ ಮಾಡಿದ ತಪ್ಪಿಗೆ ತಂದೆಗೆ ಶಿಕ್ಷೆ ನೀಡುವುದು ಸರಿಯೇ ಎಂಬುದು ಹ್ಯಾರಿಸ್ ಅವರ ಅಭಿಮಾನಿಗಳ ಪ್ರಶ್ನೆ! ಆದರೆ ಮಗ ಮೊಹ್ಮದ್ ಮೇಲೆ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪ ಇರುವುದರಿಂದ ಈಗಾಗಲೇ ಹ್ಯಾರಿಸ್ ಅವರು ತಮ್ಮ ಕ್ಷೇತ್ರದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಈ ಪ್ರಕರಣವನ್ನು ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂಬಂತೆ ಬಿಂಬಿಸುವ ಪ್ರಯತ್ನದಲ್ಲಿ ಬಹುಪಾಲು ಯಶಸ್ವಿಯಾಗಿತ್ತು. ಹೀಗಿರುವಾಗ ಹ್ಯಾರಿಸ್ ಗೆ ಟಿಕೇಟ್ ನೀಡಿದಲ್ಲಿ ಚುನಾವಣೆ ಹೊತ್ತಲ್ಲಿ ಮತ್ತೆ ಈ ಪ್ರಕರಣವನ್ನು ಕೆದಕುವ ಅವಕಾಶವನ್ನು ಸ್ವತಃ ಕಾಂಗ್ರೆಸ್ಸೇ ಮಾಡಿಕೊಟ್ಟಂತಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಿದ್ದಿರಬಹುದು. ಅಲ್ಲದೆ ಹ್ಯಾರಿಸ್ ಪುತ್ರರ ಮೇಲಿರುವ ಅಪರಾಧ ಪ್ರಕರಣಗಳು ಶಂತಿನಗರದಲ್ಲಿ

   ವಿದ್ವತ್ ಮೇಲಿನ ಹಲ್ಲೆ ಪ್ರಕರಣ

   ವಿದ್ವತ್ ಮೇಲಿನ ಹಲ್ಲೆ ಪ್ರಕರಣ

   ಫೆ.17ರಂದು ಬೆಂಗಳೂರಿನ ಯು.ಬಿ.ಸಿಟಿಯಲ್ಲಿನ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ನಂತರ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ವತ್ ಪ್ರಾನಾಪಾಯದಿಂದ ಪಾರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹ್ಮದ್ ನಲಪಾಡ್ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿತ್ತು. ಪುತ್ರನಿಗೆ ಜಾಮೀನು ಕೊಡಿಸುವ ಹಲವು ಪ್ರಯತ್ನಗಳಲ್ಲೂ ಹ್ಯಾರಿಸ್ ವಿಫಲರಾದರು. ಇದರಿಂದಾಗಿ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗಿರುವುದು ಖಂಡಿತ.

   ರಿಜ್ವಾನ್ ಅರ್ಷದ್ ಗೆ ಟಿಕೇಟ್?

   ರಿಜ್ವಾನ್ ಅರ್ಷದ್ ಗೆ ಟಿಕೇಟ್?

   ಕೆಲವು ಮೂಲಗಳ ಪ್ರಕಾರ, ಕೇಂದ್ರ ಕಾಂಗ್ರೆಸ್ ನಾಯಕರೊಂದಿಗೆ ಹ್ಯಾರಿಸ್ ಉತ್ತಮ ಬಾಂಧವ್ಯ ಹೊಂದಿದ್ದರೂ, ರಾಜ್ಯ ನಾಯಕರೊಂದಿಗೆ ಅವರಿಗೆ ಉತ್ತಮ ಸಂಬಂಧವೇನೂ ಇಲ್ಲ. ಆದ್ದರಿಂದ ಅವರಿಗೆ ಟಿಕೇಟ್ ನೀಡಬಾರದೆಂದು ಕಾಂಗ್ರೆಸ್ಸಿನೊಳಗೇ ಕೆಲವರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಅದೂ ಅಲ್ಲದೆ ಇನ್ನೋರ್ವ ಯುವ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಸಹ ಈ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿರುವುದರಿಂದ ಟಿಕೇಟ್ ಅವರಿಗೆ ಸಿಕ್ಕರೂ ಅಚ್ಚರಿಯಿಲ್ಲ. ಸದ್ಯಕ್ಕೆ ಟಿಕೇಟ್ ಯಾರಿಗೆ ನೀಡಬೇಕು ಎಂಬ ಕುರಿತು ಸಿದ್ದರಾಮಯ್ಯ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ನಿನ್ನೆ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಹ್ಯಾರಿಸ್ ಸಿದ್ದರಾಮಯ್ಯ ಅವರನ್ನು ತರಾತುರಿಯಲ್ಲಿ ಭೇಟಿ ಮಾಡಿದ ಬಗ್ಗೆಯೂ ವರದಿಯಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲ ಕೆರಳಿಸಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka assembly elections 2018: First list of Congress candidates announce on April 15th. Shanthinagar sitting MLA N A Haris name was put on hold as the Congress did not announce a candidate from the Shanthinagar constituency. His(Mohmad Nalapad) son it may be recalled was involved in a brawl recently. There is speculation that the seat may go to Rizwan Arshad.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ