Karnataka Polls: 8 ಸಾವಿರಕ್ಕೂ ಹೆಚ್ಚು ಬೆಂಗಳೂರಿನ ನಿವಾಸಿಗಳ ಮನೆ ಬಾಗಿಲಿಗೆ ಬರಲಿದೆ ಮತಯಂತ್ರ- ಯಾರಿಗಾಗಿ ಈ ಸೌಲಭ್ಯ?

ಬೆಂಗಳೂರು, ಏಪ್ರಿಲ್‌ 19: 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಂಗವಿಕಲರಿಗಾಗಿ ಚುನಾವಣಾ ಆಯೋಗವು ಹೊಸ ಸೌಲಭ್ಯವನ್ನು ನೀಡುತ್ತಿದೆ. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ 8,730 ಜನರು ಮನೆಯಿಂದ ಮತ ಚಲಾಯಿಸಲು ಬಯಸಿದ್ದಾರೆ. ಅವರಿಗಾಗಿ ಚುನಾವಣೆ ಆಯೋಗವು ಸೌಲಭ್ಯವನ್ನು ಕಲ್ಪಿಸಿದೆ.

ನಗರ ಕೇಂದ್ರಗಳಲ್ಲಿನ ಮತದಾರರ ನಿರಾಸಕ್ತಿಯ ಬಗ್ಗೆ ಎಚ್ಚರಗೊಂಡಿರುವ ಚುನಾವಣಾ ಆಯೋಗ, ನಾಗರಿಕರನ್ನು ತಮ್ಮ ಹಕ್ಕು ಚಲಾಯಿಸುವಂತೆ ಒತ್ತಾಯಿಸಿದೆ. ಇದಕ್ಕೆ ಬೇಕಾದ ಪ್ರತಿಯೊಂದು ಅವಕಾಶ ಹಾಗೂ ಆಯ್ಕೆಯನ್ನು ಚುನಾವಣಾ ಆಯೋಗ ನೀಡುತ್ತಿದೆ.

Karnataka Elections: Ballot arrives at doorstep for over 8K Bengaluru residents

ಉಪಕ್ರಮದ ಅಡಿಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರತಿನಿಧಿಗಳು, ಸಮಸ್ಯೆಗಳಿಂದ ಬಳಲುತ್ತಿರುವ ಮತದಾರರ ನಿವಾಸಗಳಲ್ಲಿ ತಾತ್ಕಾಲಿಕ ಮತಗಟ್ಟೆಯನ್ನು ರಚಿಸಲಿದ್ದಾರೆ.

ಇದಕ್ಕಿಂತ ಹೆಚ್ಚಾಗಿ, ಈ ಮತದಾರರು ಮೇ 10 ರ ಮತದಾನದ ದಿನಾಂಕಕ್ಕಿಂತ ಕನಿಷ್ಠ ನಾಲ್ಕು ಅಥವಾ ಐದು ದಿನಗಳ ಮೊದಲು ತಮ್ಮ ಮತವನ್ನು ಚಲಾಯಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟು ಅಂಕಿ ಅಂಶಗಳ ಪ್ರಕಾರ, ಸುಮಾರು 8,611 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 119 ಮಂದಿ ವಿಕಲಚೇತನರು ಮತದಾನವನ್ನು ಮಾಡಲಿದ್ದಾರೆ. ಡೇಟಾವನ್ನು ಸಲ್ಲಿಸಲು ಇನ್ನೂ ನಾಲ್ಕು ದಿನಗಳು ಇರುವುದರಿಂದ ಅಂತಿಮ ಸಂಖ್ಯೆಯು ಬದಲಾಗಬಹುದು ಎಂದು ರಿಟರ್ನಿಂಗ್ ಅಧಿಕಾರಿಗಳು ( RO ) ತಿಳಿಸಿದ್ದಾರೆ. ಆದರೆ ವೋಟ್-ಫ್ಹೋಮ್ ಆಯ್ಕೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನಾಂಕ ಆಗಿತ್ತು. ಈ ದಿನಾಂಕವನ್ನು ವಿಸ್ತರಿಸಲಾಗಿದೆ.

ಮನೆಯಿಂದ ಮತ ಹಾಕುವ ಮತದಾರರನ್ನು ಗುರುತಿಸುವ ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ಭೌತಿಕ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಈ ಆಯ್ಕೆಯನ್ನು ಆರಿಸಿಕೊಂಡಿಲ್ಲ. ಅದೇ ರೀತಿ ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿರುವವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹೇಗಿರಲಿದೆ ಪ್ರಕ್ರಿಯೆ?

ಮತದಾನದ ದಿನದಂದು, ಆಯ್ಕೆಯಾದ ಮತದಾರರ ಮನೆಯಲ್ಲಿಯೇ ಮತದಾನ ಕೇಂದ್ರದ ಮಾದರಿಯನ್ನು ಪುನರಾವರ್ತಿಸಲು ಬಿಬಿಎಂಪಿ ಯೋಜಿಸಿದೆ. ಸಭಾಧ್ಯಕ್ಷರು, ಪ್ರಥಮ ಚುನಾವಣಾಧಿಕಾರಿ, ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಹಿಡಿದು ಪೊಲೀಸ್, ವಿಡಿಯೋಗ್ರಾಫರ್ ಅವರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಪ್ರತಿ ಬೂತ್‌ನಲ್ಲಿ ಅಂತಹ ಒಂದು ಡಜನ್‌ಗಿಂತ ಕಡಿಮೆ ಮತದಾರರು ಇರಬಹುದು ಎಂಬ ಮಾಹಿತಿ ಲಭ್ಯವಾಗಿದೆ.

80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರನ್ನು ಪರಿಶೀಲಿಸಲು ಬಿಬಿಎಂಪಿ ಕಸರತ್ತು ನಡೆಸಿದೆ. ಅದು ಮನೆಗಳು ಮತ್ತು ಅನಾಥಾಶ್ರಮಗಳನ್ನು ಒಳಗೊಂಡಿದೆ.

ಬಿಬಿಎಂಪಿ ಅಧಿಕಾರಿಗಳು ಕಂಡುಕೊಂಡ ಅಂಶವೆಂದರೆ ಸುಮಾರು ಅರ್ಧದಷ್ಟು ಮತದಾರರು ತಮ್ಮ ಮನೆಗಳನ್ನು ಬದಲಾಯಿಸಿದ್ದಾರೆ ಅಥವಾ ಅಸುನಿಗಿದ್ದಾರೆ ಅಥವಾ ಗೈರುಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 2.36 ಲಕ್ಷ ಜನರು ಈ ವರ್ಗಕ್ಕೆ ಸೇರಿದ್ದಾರೆ ಮತ್ತು ರಾಜ್ಯಾದ್ಯಂತ ಈ ಸಂಖ್ಯೆ 12 ಲಕ್ಷ ಮೀರಿದೆ.

ಬಸವನಗುಡಿಯ ನಿವಾಸಿ ರಮಾದೇವಿ (93) ಅವರು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆ ಜೊತೆ ಈ ವಿಚಾರವಾಗಿ ಮಾತನಾಡಿದ್ದಾರೆ. ಅವರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. 'ಕಳೆದ ಚುನಾವಣೆಯಲ್ಲಿ ನಾನು ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದೆ. ನನ್ನ ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ನನಗೆ ನೀಡಿರುವುದು ನನಗೆ ತುಂಬಾ ಸಂತೋಷವಾಗಿದೆ' ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+