• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಚುನಾವಣೆ ರಾಮ ಮತ್ತು ರಾವಣರ ನಡುವಿನ ಹೋರಾಟ: ಪ್ರತಾಪ್ ಸಿಂಹ

By ವಿಕಾಸ್ ನಂಜಪ್ಪ
|

ಬೆಂಗಳೂರು, ಮಾರ್ಚ್ 9: ಕರ್ನಾಟಕ ವಿಧಾನಸಭಾ ಚುನಾವಣೆ ಈ ವರ್ಷದ ಕೇಂದ್ರ ಬಿಂದುಗಳಲ್ಲಿ ಒಂದು. ಇಡೀ ದೇಶವೇ ಈ ಚುನಾವಣೆಯನ್ನು ಎದುರು ನೋಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ನಿರೀಕ್ಷಿಸಬಹುದಾದ ಚುನಾವಣೆಯಲ್ಲಿ ಕೇಸರಿ ಪಕ್ಷ ಗೆಲುವಿನ ತವಕದಲ್ಲಿದೆ.

ಇದೀಗ ತ್ರಿಪುರಾದಲ್ಲಿ ಸರಕಾರ ರಚಿಸಿರುವುರು ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಹೊಸ ಉತ್ಸಾಹ ತಂದಿದೆ. ಇದೇ ಉತ್ಸಾಹವನ್ನು ಚುನಾವಣೆವರೆಗೆ ಕಾಯ್ದುಕೊಳ್ಳುವ ಆಲೋಚನೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷದ ವಕ್ತಾರರಿದ್ದಂತೆ. ಭಿನ್ನ ದಾರಿಯಲ್ಲಿ ಹೋಗಿ ಅವರು ತಮ್ಮ ನಾಯಕರಿಗೆ ಸಹಾಯ ಮಾಡಬೇಕು ಎಂದಿದ್ದಾರೆ ಪ್ರತಾಪ್ ಸಿಂಹ.

ಮೂರು ಕಾಸಿನ ಪ್ರಕಾಶ್ ರೈ, ವಾಚ್ ಕಿತ್ಕೊಂಡ ಸಿಎಂ : ಪ್ರತಾಪ್ ಸಿಂಹ

'ಒನ್ಇಂಡಿಯಾ' ಜತೆಗಿನ ಸಂದರ್ಶನದಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರತ್ಯೇಕ ಕರ್ನಾಟಕ ಧ್ವಜದಿಂದ ಹಿಡಿದು ಕೊಡಗಿಗೆ ರೈಲ್ವೇ ಸಂಪರ್ಕದವರೆಗೂ ಅವರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸಿದ್ದರಾಮಯ್ಯರನ್ನು ಎದುರಿಸುವ ನಾಯಕತ್ವ ಕೊರತೆ ನಿವಾರಣೆಯಾಗಿದೆಯಾ?

ಸಿದ್ದರಾಮಯ್ಯರನ್ನು ಎದುರಿಸುವ ನಾಯಕತ್ವ ಕೊರತೆ ನಿವಾರಣೆಯಾಗಿದೆಯಾ?

ರಾವಣನ್ನು ಎದುರಿಸಲು ರಾಮ ಬೇಕು. ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಂತೆ ಬಿಜೆಪಿಯ ಪ್ರಚಾರ ಕಾವು ಪಡೆದುಕೊಂಡಿದೆ. ಬೃಹತ್ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಪಕ್ಷ ಎದುರಿಸುತ್ತಿದೆ. ಈ ಆಡಳಿತ ವಿರೋಧಿ ಅಲೆ ದೊಡ್ಡ ಪ್ರಮಾಣ ಆಕ್ರೋಶವಾಗಿ ರೂಪುಗೊಳ್ಳಬೇಕಿದೆ.

ರಾಮ, ರಾವಣರ ಬಗ್ಗೆ ಇನ್ನಷ್ಟು ವಿವರಿಸಿ..

ಒಮ್ಮೆ ರಾವಣನನ್ನು ರಾಮ ಎದುರಿಸುತ್ತಾನೆ ಎಂದು ಗೊತ್ತಾದಾಗ ದೊಡ್ಡ ಸಂಖ್ಯೆಯಲ್ಲಿ ಬಂದು ಆತನ ಹಿಂದೆ ನಿಂತುಕೊಂಡರು. ಇಲ್ಲಿಯೂ ಅದೇ ನಡೆಯುತ್ತಿದೆ. ಇಲ್ಲಿ ಮೋದಿ ಮತ್ತು ಶಾ ಅವರ ಕಥೆಯಲ್ಲೂ ಇದೇ ರೀತಿ ಆಗಿದೆ. ಸಿದ್ದರಾಮಯ್ಯರನ್ನು ಅವರು ಎದುರಿಸಬಲ್ಲರು ಎಂದು ಎಲ್ಲರಿಗೂ ಗೊತ್ತಾಗಿದೆ. ಈಗ ಮೋದಿ ಮತ್ತು ಶಾ ಮುಗಿಬಿದ್ದ ನಂತರ ಹೇಗೆ ಸಿದ್ದರಾಮಯ್ಯ ನಡುಗುತ್ತಿದ್ದಾರೆ ನೋಡಿ. ತಳಮಟ್ಟದಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ.

ತ್ರಿಪುರಾ ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಬೀರಲಿದೆ?

ತ್ರಿಪುರಾ ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಬೀರಲಿದೆ?

ತ್ರಿಪುರಾ ದೊಡ್ಡ ಪರಿಣಾಮ ಬೀರಲಿದೆ. ಸೊನ್ನೆಯಿಂದ ಸರಕಾರ ರಚನೆ ಮಾಡುವಷ್ಟು ಸಂಪೂರ್ಣ ಬಹುಮತ ಪಡೆಯುವುದು ಬಿಜೆಪಿ ನಾಯಕರ ಪಾಲಿಗಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ತೆರೆದಿಟ್ಟಿದೆ. ನಮ್ಮ ಕಾರ್ಯಕರ್ತರ ಶಕ್ತಿ ಉತ್ತೇಜನಗೊಂಡಿದೆ. ನಮ್ಮ ನಾಯಕರನ್ನು ತಲೆ ತಗ್ಗಿಸಲು ಬಿಡಬಾರದು ಎಂದು ಕಾರ್ಯಕರ್ತರು ಶೇಕಡಾ 100 ಶ್ರಮವನ್ನು ವ್ಯಯಿಸಲಿದ್ದಾರೆ.

ನಿಮ್ಮ ಕಾರ್ಯಕರ್ತರು ಮತದಾರರನ್ನು ಹೇಗೆ ಮನವೊಲಿಸುತ್ತಾರೆ?

ನಾವು ಬುದ್ಧಿವಂತಿಕೆಯಿಂದ ಜನರನ್ನು ಮನವೊಲಿಸುತ್ತೇವೆ. ಮದ್ಯದ ಮೂಲಕ ಮತದಾರರನು ಮನವರಿಕೆ ಮಾಡುವ ಕಾಂಗ್ರೆಸ್ ಮಾರ್ಗವನ್ನು ನಾವು ತೆಗೆದುಕೊಳ್ಳಬಾರದೆಂದು ನಿರ್ಧರಿಸಿದ್ದೇವೆ.

ಕರ್ನಾಟಕ ಧ್ವಜದ ಬಗ್ಗೆ ಮಾತನಾಡುತ್ತೀರಾ? ಕಾಂಗ್ರೆಸ್ ಗೆ ಇದು ಮತ್ತಷ್ಟು ಬಲ ನೀಡಲಿದೆಯಾ?

ಕರ್ನಾಟಕ ಧ್ವಜದ ಬಗ್ಗೆ ಮಾತನಾಡುತ್ತೀರಾ? ಕಾಂಗ್ರೆಸ್ ಗೆ ಇದು ಮತ್ತಷ್ಟು ಬಲ ನೀಡಲಿದೆಯಾ?

ಕಾಂಗ್ರೆಸ್ ಗೆ ಇದು ಲಾಭವಾಗಲಿದೆ ಎಂದು ನನಗೆ ಅನಿಸುತ್ತಿಲ್ಲ. ಈಗಾಗಲೇ ಧ್ವಜ ಇದೆ. ಅದನ್ನು ಮರು ವಿನ್ಯಾಸ ಮಾಡುವ ಅಗತ್ಯವೇನು? ಸಿದ್ದರಾಮಯ್ಯನವರ ಕರ್ನಾಟಕ ಪ್ರೇಮ ಹೇಗಿದೆಯೆಂದರೆ ಅವರಿಗೆ ಇಂಥಹ ಗಿಮಿಕ್ ಗಳು ಬೇಕಾಗಿವೆ. ಇದನ್ನು ರಾಜ್ಯ ಸರಕಾರವೇ ಅಳವಡಿಕೆ ಮಾಡಿಕೊಳ್ಳಬೇಕು, ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವ ಅಗತ್ಯವೇನಿದೆ? ವಕೀಲರಾಗಿ ಸಿದ್ದರಾಮಯ್ಯನವರಿಗೆ ಇದು ಗೊತ್ತಿಲ್ವಾ? ಅವರಿಗ ಬೇರೆಯೇ ಉದ್ದೇಶಗಳಿವೆ.

ಹೊಸ ಕನ್ನಡ ಧ್ವಜ ರೆಡಿ, ಕೇಂದ್ರ ಒಪ್ಪುವುದಷ್ಟೆ ಬಾಕಿ

ಕೊಡಗಿನ ರೈಲ್ವೇ ಯೋಜನೆ ಪ್ರಸ್ತಾಪ ಏನಾಯಿತು?

ಕೊಡಗಿನ ರೈಲ್ವೇ ಯೋಜನೆ ಪ್ರಸ್ತಾಪ ಏನಾಯಿತು?

ಇದನ್ನು 2012-13ರಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಇದನ್ನು ಪ್ರಸ್ತಾಪ ಮಾಡಿದ್ದು ಪಕ್ಕದ ಕೇರಳ ರಾಜ್ಯ. ಇದು ಪೂರ್ಣಗೊಂಡಿತಾ ಎಂದಷ್ಟೇ ಕರ್ನಾಟಕ ಕೇಳಿತ್ತು. ಆದರೆ ಈ ಪ್ರಸ್ತಾಪ ಕೇಂದ್ರದ ಮುಂದೆ ಹೋಗಿರಲೇ ಇಲ್ಲ. ರೈಲ್ವೇ ಮಂಡಲಿಯವರೆಗೂ ಈ ಪ್ರಸ್ತಾಪ ಬಂದಿರಲಿಲ್ಲ. ಈ ಯೋಜನೆಯನ್ನು ಕೈ ಬಿಡಲಾಗಿದೆ ಎಮದು ನಾನು ವರದಿಗಳಲ್ಲಿ ಓದಿದ್ದೆ. ಮೊದಲ ಹಂತದಲ್ಲೇ ಈ ಯೋಜನೆಯನ್ನು ಒಪ್ಪಿಕೊಳ್ಳದಿದ್ದ ಮೇಲೆ ಇದನ್ನು ಕೈ ಬಿಡುವ ಪ್ರಶ್ನೆ ಉದ್ಭವಿಸುವುದೇ ಇಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Assembly Elections 2018 is probably one of the most important events of the year. In the backdrop of the impressive Tripura win, the BJP is seeking to translate that energy to Karnataka. Every Karyakarta is a spokesperson of the BJP and he would go out of his way to help his leader says BJP, MP, Prathap Simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more