ಸಿದ್ದು-ಡಿಕೆ ಆಪ್ತ ಸಮಾಲೋಚನೆ ವಿಡಿಯೊ ವೈರಲ್: ಇದು ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್ ಎಂದ ಟ್ವೀಟಿಗರು- ಏನಿದೆ ತಿಳಿಯಿರಿ
ಬೆಂಗಳೂರು, ಮೇ 07: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೂರು ದಿನಗಳು ಬಾಕಿ ಇದೆ. ಈ ಮಹತ್ವದ ಸಮಯದಲ್ಲಿ ಹರಿದಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊ ತುಣುಕಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಪ್ತ ಸಮಾಲೋಚನೆ ನಡೆಸುತ್ತಿರುವುದು ಕಂಡುಬಂದಿದೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಆರೋಗ್ಯವನ್ನು ವಿಚಾರಿಸುತ್ತಿರುವುದು ಇಲ್ಲಿ ಕಾಣಬಹುದಾಗಿದೆ.
ಉಭಯ ನಾಯಕರು ಹಲವಾರ ವಿಚಾರಗಳ ಇಲ್ಲಿ ಮಾತನಾಡಿದ್ದಾರೆ. ಸಿದ್ದರಾಮಯ್ಯನವರ ಕೈ ಊದಿಕೊಂಡಿರುವ ವಿಚಾರ, ಡಿಕೆಶಿ ಹೆಲಿಕಾಪ್ಟರ್ ಅಪಘಾತದ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಇಂದಿರಾ ಕ್ಯಾಂಟಿನ್ ಮತ್ತೆ ತೆರೆಯುವ ಬಗ್ಗೆ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಕಣ್ಣೀರು ಹಾಕಿಸಿದ ಬಿಜೆಪಿ ಬಗ್ಗೆಯೂ ಉಭಯ ನಾಯಕರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ, ಹಳೇ ಮೈಸೂರು ಭಾಗವನ್ನು ಫುಲ್ ಕವರ್ ಮಾಡಿದ್ದೇನೆ ಎಂದು ಡಿಕೆಶಿ ಹೇಳಿಕೊಂಡಿದ್ದಾರೆ. ಜನರು ನಮ್ಮ ಮೇಲೆ ನಂಬಿಕೆ ಇರಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಪ್ರಚಾರದ ಭರಾಟೆಯ ಮಧ್ಯೆ ಶ್ರೀ ಸಿದ್ದರಾಮಯ್ಯ ಹಾಗೂ ಶ್ರೀ ಡಿಕೆ ಶಿವಕುಮಾರ್ ನಡುವೆ ನಡೆದ ವಿಚಾರ ವಿನಿಮಯದ ತುಣುಕು ಇಲ್ಲಿದೆ.
— Karnataka Congress (@INCKarnataka) May 7, 2023
ರಾಜ್ಯದ ಆಗುಹೋಗುಗಳು, ಭವಿಷ್ಯದ ಯೋಜನೆಗಳ ಕುರಿತ ಚರ್ಚೆಯ ಸಂಪೂರ್ಣ ವಿಡಿಯೋ ಸದ್ಯದಲ್ಲಿಯೇ ಬರಲಿದೆ.
ನಿರೀಕ್ಷಿಸಿ.. pic.twitter.com/hOYwVsj4qn
ಇದನ್ನು ಕರ್ನಾಟಕ ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 'ಪ್ರಚಾರದ ಭರಾಟೆಯ ಮಧ್ಯೆ ಶ್ರೀ ಸಿದ್ದರಾಮಯ್ಯ ಹಾಗೂ ಶ್ರೀ ಡಿಕೆ ಶಿವಕುಮಾರ್ ನಡುವೆ ನಡೆದ ವಿಚಾರ ವಿನಿಮಯದ ತುಣುಕು ಇಲ್ಲಿದೆ. ರಾಜ್ಯದ ಆಗುಹೋಗುಗಳು, ಭವಿಷ್ಯದ ಯೋಜನೆಗಳ ಕುರಿತ ಚರ್ಚೆಯ ಸಂಪೂರ್ಣ ವಿಡಿಯೋ ಸದ್ಯದಲ್ಲಿಯೇ ಬರಲಿದೆ. ನಿರೀಕ್ಷಿಸಿ' ಎಂದು ಕಾಂಗ್ರೆಸ್ ತಿಳಿಸಿದೆ.
This video seems like a master stroke by the Congress. Wish we see one like this with Yediyurappa & BL Santosh. And one with Kumaraswamy & Revanna. https://t.co/B1B4ymmuI8
— Ganesh Chetan (@ganeshchetan) May 7, 2023
ಇದನ್ನು ರೀಟ್ವೀಟ್ ಮಾಡಿಕೊಂಡಿರುವ ಟ್ವಿಟರ್ ಬಳಕೆದಾರರಾದ ಗಣೇಶ್ ಚೇತನ್ ಎಂಬುವವರು, 'ಈ ವಿಡಿಯೋ ಕಾಂಗ್ರೆಸ್‌ನ ಮಾಸ್ಟರ್ ಸ್ಟ್ರೋಕ್‌ನಂತೆ ಕಾಣುತ್ತಿದೆ. ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ಅವರೊಂದಿಗೆ ನಾವು ಅಂತಹದನ್ನು ನೋಡಲು ಬಯಸುತ್ತೇವೆ. ಕುಮಾರಸ್ವಾಮಿ ಮತ್ತು ರೇವಣ್ಣ ಸಹ ಹೀಗೆ ಮಾತನಾಡಬೇಕೆಂದು ಬಯಸುತ್ತೇವೆ' ಎಂಬುದಾಗಿ ತಿಳಿಸಿದ್ದಾರೆ.
Watch this interesting conversation between KPCC President @DKShivakumar Ji and CLP Leader @siddaramaiah Ji, where both leaders discuss the nuances of state politics, the implementation of Congress guarantees & the people's faith in the Congress. pic.twitter.com/FpDXH2tVmH
— Congress (@INCIndia) May 7, 2023
'ಅಧಿಕಾರಕ್ಕೆ ಬಂದ ನಂತರ ಕರ್ನಾಟಕದ ಕಾಂಗ್ರೆಸ್ ನಾಯಕರಿಂದ ಈಗ ಬೇಕಾಗಿರುವುದು ಮತ್ತು ನಿರೀಕ್ಷಿಸುತ್ತಿರುವ ಏಕೈಕ ವಿಷಯವೆಂದರೆ ಅವರು ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುವುದು, ಪಕ್ಷದ ಒಳಗೆ ಮತ್ತು ಹೊರಗಿನ ಭ್ರಷ್ಟರ ವಿರುದ್ಧ ಬಲಶಾಲಿಯಾಗುವುದು, ಅಭಿವೃದ್ಧಿ ಮತ್ತು ಪ್ರಯೋಜನವು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು. ಇವುಗಳು ಗ್ರಾಮ ಹಾಗೂ ನಗರಗಳಿಗೆ ತಲುಪುವಂತೆ ಮಾಡುವುದು' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications