Get Updates
Get notified of breaking news, exclusive insights, and must-see stories!

Karnataka Exit Polls 2018: ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು? ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಎಷ್ಟು ಸ್ಥಾನ?

ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಬುಧವಾರ ಸಂಜೆ ಪ್ರಕಟವಾಗಲಿದೆ. 2018ರ ವಿಧಾನಸಭೆ ಚುನಾವಣೆ ಫಲಿತಾಂಶ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿರಲಿಲ್ಲ. ಫಲಿತಾಂಶದ ನಂತರ, 104 ಶಾಸಕರನ್ನು ಹೊಂದಿದ ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಸರ್ಕಾರ ರಚಿಸಲು ಕರೆ ನೀಡಲಾಯಿತು. ಆದರೆ, ಕಾಂಗ್ರೆಸ್ ಮತ್ತು ಜೆಡಿ (ಎಸ್) ತ್ವರಿತವಾಗಿ ಒಗ್ಗೂಡಿ 116 ಸ್ಥಾನಗಳ ಸರ್ಕಾರವನ್ನು ಘೋಷಿಸಲಾಯಿತು. ಅದರಲ್ಲಿ ಕಾಂಗ್ರೆಸ್‌ನಿಂದ 76 ಸದಸ್ಯರು ಆಯ್ಕೆಯಾಗಿದ್ದರು. ಜೆಡಿಎಸ್‌ನಿಂದ 37 ಮತ್ತು ಮೂವರು ಸ್ವತಂತ್ರರು ಆರಿಸಿ ಬಂದಿದ್ದರು.

ಸರ್ಕಾರ ರಚನೆಯಾದ ಒಂದು ವರ್ಷದೊಳಗೆ, ಕಾಂಗ್ರೆಸ್-ಜೆಡಿಎಸ್ ತಮ್ಮ 17 ಶಾಸಕರನ್ನು ಕಳೆದುಕೊಂಡಿದ್ದರಿಂದ, ಕರ್ನಾಟಕ ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಆದರೆ ಜುಲೈ 26, 2021 ರಂದು ಅವರು ರಾಜೀನಾಮೆ ನೀಡಿದರು. ಅವರ ಸ್ಥಾನವನ್ನು ಬಸವರಾಜ ಬೊಮ್ಮಾಯಿ ಅಲಂಕರಿಸಿದರು. ಅವರು ಸಹ ಯಡಿಯೂರಪ್ಪ ಅವರಂತೆ ಲಿಂಗಾಯತ ಸಮುದಾಯದಿಂದ ಬಂದವರು.

Karnataka Election Exit Poll Results 2018

2018 ರ ಎಕ್ಸಿಟ್ ಪೋಲ್ ಫಲಿತಾಂಶ

ಆರು ರಾಷ್ಟ್ರೀಯ ಟೆಲಿವಿಷನ್ ಚಾನೆಲ್‌ಗಳು ಮತ್ತು ಒಂದು ಪ್ರಾದೇಶಿಕ ಚಾನೆಲ್ ಪ್ರಸಾರ ಮಾಡಿದ ಎಂಟು ಪ್ರಮುಖ ಎಕ್ಸಿಟ್ ಪೋಲ್‌ಗಳಲ್ಲಿ ಆರು ಹೊಸ ಅಸೆಂಬ್ಲಿಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಬಿಜೆಪಿ ಅಥವಾ ಕಾಂಗ್ರೆಸ್ 112 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾದವು. ಈ ಎಲ್ಲಾ ಸಮೀಕ್ಷೆಗಳು ಜೆಡಿಎಸ್ ಕಿಂಗ್‌ಮೇಕರ್ ಆಗಲಿದೆ ಎಂದು ಸೂಚಿಸಿದ್ದು, ಪಕ್ಷವು 20 ರಿಂದ 40 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದವು.

ಎಬಿಪಿ-ಸಿ ವೋಟರ್, ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್, ರಿಪಬ್ಲಿಕ್-ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಎಕ್ಸಿಟ್ ಪೋಲ್‌ಗಳು ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಪ್ರಾದೇಶಿಕ ಮಾಧ್ಯಮ ದಿಗ್ವಿಜಯ-ವಿಜಯವಾಣಿ ಸಮೀಕ್ಷೆಯೂ ಇದೇ ರೀತಿಯ ಭವಿಷ್ಯ ನುಡಿದಿತ್ತು.

ಟೈಮ್ಸ್ ನೌ ಎರಡು ಎಕ್ಸಿಟ್ ಪೋಲ್‌ಗಳನ್ನು ಪ್ರಸಾರ ಮಾಡಿತ್ತು. ಒಂದು, ಟೈಮ್ಸ್ ನೌ-ವಿಎಂಆರ್, ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ ನೀಡಿತ್ತು. ಇನ್ನೊಂದು, ಟೈಮ್ಸ್ ನೌ-ಟುಡೇಸ್ ಚಾಣಕ್ಯ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿತ್ತು. ಇಂಡಿಯಾ ಟುಡೆ-ಆಕ್ಸಿಸ್ ಎಕ್ಸಿಟ್ ಪೋಲ್ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಲಿದೆ ಎಂದು ಹೇಳಿತ್ತು.

ಎಬಿಪಿ-ಸಿ ವೋಟರ್ ಸಮೀಕ್ಷೆಯು ಬಿಜೆಪಿಗೆ 104-116 ಸ್ಥಾನಗಳನ್ನು ಭವಿಷ್ಯ ನುಡಿದಿತ್ತು. ನಂತರ ಕಾಂಗ್ರೆಸ್‌ಗೆ 83-94 ಮತ್ತು ಜೆಡಿಎಸ್‌ಗೆ 20-29 ಸ್ಥಾನಗಳು ಬರಲಿವೆ ಎಂದು ಹೇಳಿದ್ದವು. ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್ ಬಿಜೆಪಿಗೆ 102-110, ಕಾಂಗ್ರೆಸ್‌ಗೆ 72-78, ಜೆಡಿಎಸ್‌ಗೆ 35-39 ಮತ್ತು ಇತರರಿಗೆ 3-5 ಸ್ಥಾನಗಳ ಬರಬಹುದು ಎಂದು ಭವಿಷ್ಯ ನುಡಿದಿದ್ದವು. ರಿಪಬ್ಲಿಕ್-ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37 ಮತ್ತು ಇತರೆ 3 ಸ್ಥಾನ ಪಡೆಯಲಿದೆ ಎಂದು ಅಭಿಪ್ರಾಯಪಟ್ಟಿತ್ತು.

ಟೈಮ್ಸ್ ನೌ-ಚಾಣಕ್ಯ ಸಮೀಕ್ಷೆಯಲ್ಲಿ ಬಿಜೆಪಿ 120 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಇದು ಯಾವುದೇ ಪಕ್ಷಕ್ಕೆ ಬಹುಮತದ ಮುನ್ಸೂಚನೆ ನೀಡಿದ ಏಕೈಕ ಸಮೀಕ್ಷೆಯಾಗಿದೆ. ಟೈಮ್ಸ್ ನೌ-ಚಾಣಕ್ಯ ಕಾಂಗ್ರೆಸ್‌ಗೆ 73 ಸ್ಥಾನಗಳು ಸಿಗಲಿವೆ ಎಂದು ಹೇಳಿತ್ತು. ಜೆಡಿಎಸ್ 26 ಮತ್ತು ಇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಟೈಮ್ಸ್ ನೌ-ವಿಎಂಆರ್, ಕಾಂಗ್ರೆಸ್ 97 ಸ್ಥಾನಗಳನ್ನು ಮತ್ತು ಬಿಜೆಪಿ 94 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿತ್ತು. ಜೆಡಿಎಸ್ (ಎಸ್) 28 ಮತ್ತು ಇತರರು 3 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು.

ನ್ಯೂಸ್ ನೇಷನ್ ಸಮೀಕ್ಷೆಯು ಬಿಜೆಪಿಗೆ 99-108, ಕಾಂಗ್ರೆಸ್‌ಗೆ 75-84, ಜೆಡಿಎಸ್‌ಗೆ 31-40 ಮತ್ತು ಇತರರಿಗೆ 3-7 ಎಂದು ಭವಿಷ್ಯ ನುಡಿದಿದ್ದವು. ಕರ್ನಾಟಕ ಮೂಲದ ದಿಗ್ವಿಜಯ-ವಿಜಯವಾಣಿ ಬಿಜೆಪಿಗೆ 103-107, ಕಾಂಗ್ರೆಸ್‌ಗೆ 76-80, ಜೆಡಿಎಸ್‌ಗೆ 31-35 ಮತ್ತು ಇತರರಿಗೆ 4-8 ಸ್ಥಾನಗಳನ್ನು ನೀಡಿತ್ತು.

ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆಯು ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡಿತ್ತು. ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌ 106 ರಿಂದ 118 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಹೇಳಿತ್ತು. ಬಿಜೆಪಿ 79-92, ಜೆಡಿ (ಎಸ್) 22-30 ಮತ್ತು ಇತರರು 1-4 ಗಳಿಸುತ್ತಾರೆ ಎಂದು ತಿಳಿಸಿತ್ತು.

2013ರಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಮತ್ತು ಜೆಡಿಎಸ್ ತಲಾ 40 ಸ್ಥಾನಗಳನ್ನು ಪಡೆದಿದ್ದವು. ಯಡಿಯೂರಪ್ಪ ಅವರ ಅಂದಿನ ಕರ್ನಾಟಕ ಜನತಾ ಪಕ್ಷ 6 ಸ್ಥಾನಗಳನ್ನು ಮತ್ತು ಬಿ ಶ್ರೀರಾಮುಲು ಅವರ ಬಡವರ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ 4 ಸ್ಥಾನಗಳನ್ನು ಪಡೆದುಕೊಂಡಿದ್ದವು.

ಈ ಬಾರಿ, ಚುನಾವಣಾ ಕಣದಲ್ಲಿರುವ ಎಲ್ಲಾ ಮೂರು ಪ್ರಮುಖ ಪಕ್ಷಗಳು ಮತದಾನದ ದಿನದಂದು ಉತ್ಸಾಹಭರಿತ ಪ್ರಚಾರವನ್ನು ಮಾಡಿದ್ದು, ಪ್ರಚಾರದ ಅಂತ್ಯದ ವೇಳೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ಯುದ್ದ ಭುಗಿಲೆದ್ದಿತ್ತು. ಬಿಜೆಪಿಯು ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಪಕ್ಷದ ಪ್ರಮುಖ ಲಿಂಗಾಯತ ಸಮುದಾಯದಿಂದ ಕೆಲವು ನಾಯಕರ ನಿರ್ಗಮನದ ಒತ್ತಡವನ್ನು ಎದುರಿಸುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಪ್ರಚಾರಾಂದೋಲನದ ಅಂತಿಮ ಹಂತದಲ್ಲಿ ಅಭಿವೃದ್ಧಿ ಸಂದೇಶ, ಕಾಂಗ್ರೆಸ್‌ನ ಹುಸಿ ಮಾತುಗಳು ಮತ್ತು ಹಿಂದುತ್ವ ಕಾರ್ಡ್ ಅನ್ನು ಬಳಸಿಕೊಂಡು ಪ್ರಬಲ ಪ್ರಚಾರವನ್ನು ನಡೆಸಲಾಯಿತು.

ಏತನ್ಮಧ್ಯೆ, ಅಡುಗೆ ಅನಿಲ ಮತ್ತು ಇಂಧನದ ಬೆಲೆ ಸೇರಿದಂತೆ ಹೆಚ್ಚುತ್ತಿರುವ ಜೀವನ ವೆಚ್ಚದ ಮೇಲೆ ವ್ಯಾಪಕವಾದ ಕೋಪವನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನಿಸಿದೆ. ಐದು ಖಾತರಿಗಳನ್ನು ಕಾಂಗ್ರೆಸ್ ಅನಾವರಣಗೊಳಿಸಿದೆ.

ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಸವಾಲಾಗಿರುವ ಜೆಡಿಎಸ್‌, ರಾಜ್ಯದ ಇತರ ಭಾಗಗಳಲ್ಲಿ ವಿರಳ ಅಸ್ತಿತ್ವವನ್ನು ಹೊಂದಿದ್ದು, ವರ್ಷಕ್ಕೆ ಐದು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಮತ್ತು ಸಾಲ ಮನ್ನಾ ಸೇರಿದಂತೆ ಮುಂತಾದ ತನ್ನದೇ ಆದ ಭರವಸೆಗಳನ್ನು ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+