DK Shivakumar: ಡಿಕೆ ಶಿವಕುಮಾರ್ ನಾಮಪತ್ರ ತಿರಸ್ಕೃತವಾದರೇ ಆಗುವ ಲಾಭ ನಷ್ಟಗಳ ಲೆಕ್ಕಾಚಾರ ಇಲ್ಲಿದೆ

ಬೆಂಗಳೂರು, ಏಪ್ರಿಲ್. 21: ರಾಜ್ಯ ರಾಜಕಾರಣದ ಇಂದಿನ ಪ್ರಮುಖ ಸುದ್ದಿ ಸುತ್ತುತ್ತಿರುವುದು ಡಿಕೆ ಶಿವಕುಮಾರ್ ಅವರ ನಾಮಪತ್ರದ ಸುತ್ತ. ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸುತ್ತಿದ್ದು, ಡಿಕೆ ಶಿವಕುಮಾರ್ ಅವರ ನಾಮಪತ್ರ ಪರಿಶೀಲನೆ ವೇಳೆ ಏನಾಗಲಿದೆಯೋ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ಈ ಬಗ್ಗೆ ಏನಾದರೂ ಹೇಳುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದೆ. ಆದರೆ ನಾಮಪತ್ರ ತಿರಸ್ಕೃತವಾದರೆ ಉಂಟಾಗುವ ಲಾಭ - ನಷ್ಟಗಳ ಲೆಕ್ಕಾಚಾರ ಶುರುವಾಗಿದೆ. ಡಿಕೆ ಶಿವಕುಮಾರ್ ಮುಂಜಾಗ್ರತ ಕ್ರಮವಾಗಿ ಈಗಾಗಲೇ ಡಿಕೆ ಸುರೇಶ್ ಅವರನ್ನು ಕಣಕ್ಕೆ ಇಳಿಸಿ ನಾಮಪತ್ರ ಸಲ್ಲಿಸಿದ್ದಾರೆ.

Karnataka Election 2023: If DK Shivakumar Nomination Gets Rejected? Who Are the Beneficiaries?

ಆದರೆ, ಒಂದು ವೇಳೆ ಚುನಾವಣಾ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ನಾಮಪತ್ರವನ್ನು ತಿರಸ್ಕರಿಸಿದರೆ ಅದರಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭ!. ಹೌದು. ಇದು ಆಶ್ಚರ್ಯವಾದರೂ ಸತ್ಯ. ಈಗಾಗಲೇ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಸೋಲಿಲ್ಲದ ಸರದಾರ ಆಗಿದ್ದಾರೆ. ಅಲ್ಲಿನ ಜನರಿಗೆ ಡಿಕೆ ಶಿವಕುಮಾರ್ ಎಂದರೆ ಗೌರವ, ಪ್ರೀತಿ ಎರಡು ಇದೆ.

ಇಡಿ, ಐಟಿ, ಸಿಬಿಐ ದಾಳಿಗಳಿಂದ ವರ್ಷಗಳಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಬಗ್ಗೆ ಈಗಾಗಲೇ ಕನಕಪುರದ ಜನರು ಭಾವುಕರಾಗಿದ್ದಾರೆ. ಶಿವಕುಮಾರ್ ಅವರಿಗೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಂದರೆ ನೀಡುತ್ತಿವೆ ಎಂದು ಬಹಿರಂಗವಾಗಿಯೇ ಜನ ಮಾತಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾದರೆ ಮತ್ತೆ ಜನರ ದೃಷ್ಠಿಯಲ್ಲಿ ಡಿಕೆಶಿ ದೇವರಾಗುವುದರಲ್ಲಿ ಎರಡು ಮಾತಿಲ್ಲ.

ಡಿಕೆ ಶಿವಕುಮಾರ್ ನಾಮಪತ್ರ ತಿರಸ್ಕೃತವಾದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿಕೆ ಸುರೇಶ್ ಭಾರಿ ಬಹುಮತದೊಂದಿಗೆ ಭರ್ಜರಿ ಜಯ ಕಾಣಲಿದ್ದಾರೆ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಕನಕಪುರದ ಜನರು ಡಿಕೆ ಬ್ರದರ್ಸ್ ಅನ್ನು ಕೈಬಿಡುವ ಮಾತೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಮತ್ತಷ್ಟು ಕರುಣೆಯಿಂದ ಅಣ್ಣ- ತಮ್ಮನನ್ನು ಮೆರೆಸಿಯೇ ಮೆರೆಸುತ್ತಾರೆ.

ಇದಕ್ಕೆ ಕಾರಣ ಎಲ್ಲಿಗೂ ಗೊತ್ತಿರುವಂತಹದ್ದೇ. ಕಳೆದ ಬಾರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ ನಂತರ ಅವರ ವರ್ಷಸ್ಸು ಮತ್ತಷ್ಟು ಹೆಚ್ಚಾಗಿರುವುದು ಗಮನಿಸಬೇಕಾದ ಅಂಶ. ಜೈಲಿನಿಂದ ಬಿಡುಗಡೆಯಾಗಿ ಬಂದ ಅವರಿಗೆ ರಾಜ್ಯದಲ್ಲಿ ನೀಡಿದ ಭರ್ಜರಿ ಸ್ವಾಗತವನ್ನು ಯಾವ ರಾಜಕಾರಣಿಯೂ ಪಡೆದಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+