ಸಾಮಾಜಿಕ ತಾಣದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ವಿದಾಯ ಭಾಷಣ

Written By:
Subscribe to Oneindia Kannada

ದೆಹಲಿಯಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ವಿದಾಯದ ನುಡಿಯನ್ನು ಪೋಸ್ಟ್ ಮಾಡಿದ್ದಾರೆ.

ಮಾಜಿ ಸಿಎಂ ಎಸ್ ಎಂ ಕೃಷ್ಣ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮತ್ತು ವೈಟ್ ಕಾಲರ್ ರಾಜಕಾರಣಿಯೆಂದೇ ಹೆಸರಾಗಿರುವ ಕಿಮ್ಮನೆ, ಕಳೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದರು. (ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು)

ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಸರಕಾರದ ಮಾನ ಹರಾಜಾಗಿತ್ತು. ಸಚಿವ ಕಿಮ್ಮನೆ ರತ್ನಾಕರ್ ಅವರ ರಾಜೀನಾಮೆಗೆ ಸಾರ್ವಜನಿಕ ವಲಯದಲ್ಲಿ ಮತ್ತು ವಿಪಕ್ಷದವರು ಭಾರೀ ಒತ್ತಡ ತಂದಿದ್ದರು.

ಸಿದ್ದರಾಮಯ್ಯ ಸಂಪುಟದಿಂದ ಹೊರಹೋಗುವ ಸಚಿವರುಗಳ ಪಟ್ಟಿಯಲ್ಲಿ ತನ್ನ ಹೆಸರು ಇರುವುದು ಅಂತಿಮವಾಗುತ್ತಿದ್ದಂತೆಯೇ, ಸಚಿವ ಕಿಮ್ಮನೆ ರತ್ನಾಕರ್ 'ಎಲ್ಲಾ ಗೆಳೆಯರಿಗೂ ಧನ್ಯವಾದಗಳು' ಎನ್ನುವ ಮೂಲಕ ವಿದಾಯದ ಭಾಷಣವನ್ನು ಮಾಡಿದ್ದಾರೆ.

ಕಿಮ್ಮನೆ ರತ್ನಾಕರ್ ವಿದಾಯದ ಭಾಷಣ ಯಥಾವತ್ತಾಗಿ
ಎಲ್ಲಾ ಗೆಳೆಯರಿಗೆ ಧನ್ಯವಾದಗಳು. ಕಳೆದ ಎರಡು ಮೂರು ದಿನಗಳಿಂದ ಸಂಪುಟ ಪುನರ್ ರಚನೆ ವಿಷಯಕ್ಕೆ ಸಂಭಂದಿಸಿದ ಹಾಗೆ ಹಲವಾರು ಗೆಳೆಯರು ಆತಂಕ ವ್ಯಕ್ತ ಪಡಿಸಿದ್ದರು.

ಹಲವರು ಫೋನ್ ಮುಖಾಂತರ ಇನ್ನು ಹಲವರು ಮೆಸೇಜ್ ಮೂಲಕ ಸಂವಹನ ನಡೆಸಿದ್ದರು. ಎಲ್ಲರ ಕಾಳಜಿಗೆ ಧನ್ಯವಾದಗಳು. (ಕಿಮ್ಮನೆ ರಾಜೀನಾಮೆ ಅಗತ್ಯವಿಲ್ಲ)

ಯೌವ್ವನದ ದಿನದಿಂದಲೂ ನಾನು ಸಾರ್ವಜನಿಕ ಜೀವನದಲ್ಲಿ ಇದ್ದೆ. ಆಗ ನನ್ನ ಸಹೋದರರು ನನಗೆ ಪ್ರೀತಿಯಿಂದ ಗದರಿದ್ದರು ..ವಕೀಲ ವೃತ್ತಿಯಲ್ಲೂ ನಾನು ವೃತ್ತಿಯನ್ನು ಲಾಭದಾಯಕವಾಗಿ ಪರಿಗಣಿಸಲಿಲ್ಲ ಎಂದು ಸಹದ್ಯೋಗಿಗಳು, ಸ್ನೇಹಿತರು ಸ್ನೇಹದಿಂದ ಗದರಿಸಿದ್ದರು. ಮುಂದೆ ಓದಿ..

ರಾಜಕಾರಣದಲ್ಲಿದ್ದು ಹೋರಾಟ ಮಾಡಿದ್ದೆ

ರಾಜಕಾರಣದಲ್ಲಿದ್ದು ಹೋರಾಟ ಮಾಡಿದ್ದೆ

ಹೋರಾಟದಿಂದ ರಾಜಕಾರಣ ಮಾಡಿ, ರಾಜಕಾರಣದಲ್ಲಿದ್ದು ಹೋರಾಟ ಮಾಡಿದ್ದೆ ..ವಿರೋಧಿ ಮಿತ್ರರು ನನ್ನನ್ನು ಇನ್ ಶರ್ಟ ರಾಜಕಾರಣಿ ವೈಟ್ ಕಾಲರ್ ರಾಜಕಾರಣಿ ಎಂದು ರಾಜಕೀಯವಾಗಿ ಗದರಿದ್ದರು..ಹೋರಾಟ ಮಾಡಿ ಗೆದ್ದೆ.. ಗೆದ್ದು ಹೋರಾಟ ಮಾಡಿದೆ ..ಯಾರ ಕೈಯಲ್ಲೂ ಹೇಳಿಸದೇ ಲಾಬಿ ಮಾಡದೆ ಅಧಿಕಾರ ಬಂದಿತು ..ಲಾಬಿಯಿಂದ ಅಧಿಕಾರ ಉಳಿಸಿಕೊಳ್ಳಲು ನಾನು ಶಕ್ತನೂ ಅಲ್ಲ ಆಸಕ್ತನೂ ಅಲ್ಲ..

ವರಿಷ್ಠರು ಹಾಗು ಹಿರಿಯರು ಅವಕಾಶವನ್ನು ನೀಡಿದರು

ವರಿಷ್ಠರು ಹಾಗು ಹಿರಿಯರು ಅವಕಾಶವನ್ನು ನೀಡಿದರು

ನನ್ನನ್ನ ನಂಬಿ ವರಿಷ್ಠರು ಹಾಗು ಹಿರಿಯರು ಅವಕಾಶವನ್ನು ನೀಡಿದರು.. ಎಷ್ಟು ಸಾಧ್ಯವೋ ಅದಕ್ಕೂ ಮಿಗಲಾಗಿ ಸಿಕ್ಕ ಅವಕಾಶಕ್ಕೆ ,ಅಧಿಕಾರಕ್ಕೆ ಪಕ್ಷಾತೀತವಾಗಿ ನ್ಯಾಯ ಒದಗಿಸಲು ಪ್ರಯತ್ನ ಮಾಡಿದ್ದೇನೆ..ತೀರ ಕಳಂಕ ಹೊತ್ತು ನಿಷ್ಕ್ರಿಯ ಎಂಬ ಮಾತನ್ನು ಕೇಳಲಿಲ್ಲ..

ಒಂದು ಮಾತು ಹೇಳಬಲ್ಲೆ

ಒಂದು ಮಾತು ಹೇಳಬಲ್ಲೆ

ಒಂದು ಮಾತು ಹೇಳಬಲ್ಲೆ ಕೆಲವೊಮ್ಮೆ ಕೆಲವೊಂದು ನಿರ್ಧಾರಗಳು ಕೆಲವರಿಗೆ ಪಥ್ಯವಾಗಿರಲಿಕ್ಕಿಲ್ಲ..ಕೆಲವೊಂದು ನಿಷ್ಠುರ ನಡೆಗಳಿಂದ ಅಹಂಕಾರಿ ಅನಿಸಿಕೊಂಡಿದ್ದಿದೆ, ಆದರೆ ಮರುಮಾತಿನಲ್ಲೇ ಪ್ರಾಮಾಣಿಕ ಎಂದು ಹೇಳಿಸಿ ಕೊಂಡು ಧನ್ಯತಾ ಭಾವನೆ ಅನುಭವಿಸಿದ ಉದಾಹರಣೆಗಳೂ ಇವೆ..

ಹತಾಶ ಮನಸ್ಥಿತಿ ನನ್ನದಲ್ಲ

ಹತಾಶ ಮನಸ್ಥಿತಿ ನನ್ನದಲ್ಲ

ಹತಾಶ ಮನಸ್ಥಿತಿ ನನ್ನದಲ್ಲ..ಬಯಸದೇ ಹಲವಾರು ಅವಕಾಶ ವ್ಯವಸ್ಥೆ ನನಗೆ ನೀಡಿದೆ ಪ್ರತಿಯೊಬ್ಬರ ಸಾನಿಧ್ಯವೂ ನನಗೆ ಸಂಪೂರ್ಣ ತೃಪ್ತಿ ತಂದಿದೆ..ಕೆಲವರು ಪ್ರೀತಿಯಿಂದ ಹರಸಿ ಹಾರೈಸಿದರೆ ಇನ್ನು ಕೆಲವರು ಅದೇ ಪ್ರೀತಿಯಿಂದ ತುಸು ಪ್ರೀತಿಯಿಂದಲೇ ಗದರಿದ್ದಾರೆ, ಟೀಕಿಸಿದ್ದಾರೆ.. ಈ ಎಲ್ಲರೂ ವೈಯಕ್ತಿಕ ಮಟ್ಟದಲ್ಲಿ ನನಗೆ ಮಾನ್ಯರೇ..ಪಕ್ಷದ ವಿಷಯದಲ್ಲಿ ನಾನು ಶಿಸ್ತಿನ ಕಾರ್ಯಕರ್ತ.. ನೀಡಿದ ಜವಾಬ್ದಾರಿ ನಾನು ನಿರ್ವಹಿಸಿದ್ದೇನೆ ಇನ್ನೂ ಮುಂದೆಯೂ ನಿರ್ವಹಿಸುವ ವಿಶ್ವಾಸವಿದೆ..

ಎಂದೆಂದಿಗೂ ನಿಮ್ಮ ಸ್ನೇಹಿತ...ಕಿಮ್ಮನೆ ರತ್ನಾಕರ್

ಎಂದೆಂದಿಗೂ ನಿಮ್ಮ ಸ್ನೇಹಿತ...ಕಿಮ್ಮನೆ ರತ್ನಾಕರ್

ನನ್ನ ಪ್ರತಿ ಹಂತದ ಬೆಳವಣಿಗೆಗೆ ಸಹಕರಿಸಿದ ಪ್ರತಿಯೂಬ್ಬರಿಗೂ ಧನ್ಯವಾದಗಳು..ನಾನು ನನ್ನಂತೆ ಸದಾ ಕಾಲ ನಿಮ್ಮಗಳ ಜೊತೆಯಲ್ಲಿ ಇರುವೆ ಅದಕ್ಕೆ ಅವಕಾಶ ನೀವು ನೀಡುತ್ತೀರ..ಸ್ಥಾನ ಮಾನಗಳು ಗೂಟದ ಕಾರಿನಲ್ಲಿ ಇರುವುದು ಎಂಬ ನಂಬಿಕೆ ನಿಮ್ಮಂತೆ ನನಗೂ ಇಲ್ಲ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Education Minister Kimmane Rathnakar post in Facebook. Kimmane thanks to all his friends, followers, fans, High Command and Party leaders through his post FB timeline.
Please Wait while comments are loading...