ಹ್ಯಾಪಿ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಸರ್ಕಾರ

Recommended Video

      ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಂತಸದ ಸುದ್ದಿ ನೀಡಿದ ಕರ್ನಾಟಕ ಶಿಕ್ಷಣ ಇಲಾಖೆ

      ಬೆಂಗಳೂರು, ಮೇ 04: ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಸಿಹಿಸುದ್ದಿಯೊಂದನ್ನು ಸರ್ಕಾರ ನೀಡಿದೆ. ಶಾಲಾ ಮಕ್ಕಳ ಬ್ಯಾಗ್ ಭಾರವನ್ನು ಇಳಿಸುವ ಗಟ್ಟಿ ನಿರ್ಧಾರವನ್ನು ಸರ್ಕಾರ ತಳೆದಿದೆ.

      ಸರ್ಕಾರಿ ಮತ್ತು ಅನುದಾನಿತ, ಹಾಗೂ ಖಾಸಗಿ ಶಾಲೆಗಳ ಮಕ್ಕಳಿಗೆ ಶಾಲಾ ಬ್ಯಾಗ್‌ ತೂಕವನ್ನು ನಿಗದಿಪಡಿಸಿದ್ದು, ಅಷ್ಟೆ ತೂಕದ ಬ್ಯಾಗುಗಳನ್ನು ವಿದ್ಯಾರ್ಥಿಗಳು ಶಾಲೆಗೆ ತರಬೇಕಾಗಿದೆ. ಈ ಮುಂಚೆಯೂ ಇದೇ ಮಾದರಿಯ ಆದೇಶವೊಂದು ಹೊರಡಿಸಲಾಗಿತ್ತು, ಆದರೆ ಈ ಬಾರಿ ನವೀಕರಿಸಿದ ಆದೇಶ ಹೊರಡಿಸಲಾಗಿದೆ.

      ಹೊಸ ಆದೇಶದ ಅನ್ವಯ ಮಕ್ಕಳ ತೂಕದ ಶೇ 10 ಕ್ಕಿಂತಲೂ ಕಡಿಮೆ ತೂಕದ ಶಾಲಾ ಬ್ಯಾಗ್ ಅನ್ನು ವಿದ್ಯಾರ್ಥಿಗಳು ಶಾಲೆಗೆ ತರಬೇಕು ಎಂಬ ನಿಯಮ ರೂಪಿಸಲಾಗಿದೆ. ಈ ನಿಯಮವು ಒಂದನೇ ತರಗತಿ ವಿದ್ಯಾರ್ಥಿಗಳಿಂದ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಪ್ರತಿ ತಿಂಗಳ ಮೂರನೇ ಶನಿವಾರ ನೋ ಬ್ಯಾಗ್ ಡೇ ಎಂದು ಸರ್ಕಾರದ ಶಾಲೆಗಳಿಗೆ ನಿರ್ದೇಶಿಸಿದೆ.

      Karnataka education department ordered schools to reduce weight of school bags

      ಶಿಕ್ಷಣ ಇಲಾಖೆಯು ಶಾಲಾ ಬ್ಯಾಗ್ ಬಗ್ಗೆ ನಿರ್ದೇಶನಗಳನ್ನು ನೀಡಿದ್ದು, ಒಂದನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ 1ನೇ ತರಗತಿ ಮಗುವಿನ ಬ್ಯಾಗ್ ತೂಕ 1.5 ಯಿಂದ 2 ಕೆ.ಜಿ., 3 ರಿಂದ 5 ನೇ ತರಗತಿವರೆಗಿನ ವಿದ್ಯಾರ್ಥಿಗಳ ಬ್ಯಾಗ್ ತೂಕ 2-3 ಕೆ.ಜಿ, 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್ ತೂಕ 3-4 ಕೆ.ಜಿ, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್ ತೂಕ 4-5 ಕೆ.ಜಿ ಮೀರಬಾರದು ಎಂದು ತಿಳಿಸಿದೆ.

      ವಿದ್ಯಾರ್ಥಿಗಳಿಗೆ ಒಂದು ದಿನದ ಮುಂಚಿತವಾಗಿಯೇ ಆಯಾ ದಿನದ ವಿಷಯಗಳನ್ನು ತಿಳಿಸಿ ಅಷ್ಟನ್ನೇ ಶಾಲೆಗೆ ತರಲು ಹೇಳಬೇಕೆಂದು ಶಿಕ್ಷಣ ಇಲಾಖೆ ಹೇಳಿದೆ. ಅಷ್ಟೆ ಅಲ್ಲದೆ, ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಮ್‌ ವರ್ಕ್ ನೀಡಬಾರದು ಎಂದು ಸಹ ಶಿಕ್ಷಣ ಇಲಾಖೆ ಶಾಲೆಗಳಿಗೆ ನಿರ್ದೇಶನ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+