Karnataka Dam Water Level: ಆಲಮಟ್ಟಿ ಡ್ಯಾಂ ಬಹುತೇಕ ಭರ್ತಿ; ಕರ್ನಾಟಕದ 14 ಜಲಾಶಯಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು, ಜುಲೈ 20: ರಾಜ್ಯದಾದ್ಯಂತ ಮಳೆರಾಯನ ಅಬ್ಬರಕ್ಕೆ ಗುಡ್ಡ ಕುಸಿತ. ಮನೆ ಕುಸಿತ. ನೀರುಪಾಲು. ಸಾವು ನೋವುಗಳು ಒಂದರ ನಂತರ ಒಂದು ಅವಘಡಗಳು ನಡೆಯುತ್ತಲೇ ಇದೆ. ಕಳೆದ 15 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು,. ಜೂನ್ ಆರಂಭದಲ್ಲಿ ಬಿತ್ತನೆ ಬೇಸಾಯ ಮಾಡಿದ ಗದ್ದೆಗಳೆಲ್ಲಾ ಮಳೆ ನೀರಲ್ಲಿ ಜಲಾವೃತವಾಗಿದೆ. ಮಳೆಯ ಅಬ್ಬರ ಜೊತೆ ಕಡಲ ತೀರದಲ್ಲಿ ಗಾಳಿಯ ತೀವ್ರತೆಯೂ ಹೆಚ್ಚಾಗಿದೆ.
ಇತ್ತ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಒಳಹರಿವು, ಹೊರಹರಿವಿನಲ್ಲೂ ಹೆಚ್ಚಳವಾಗಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ 14 ಗೇಟ್ಗಳು ಹಾಗೂ ವಿದ್ಯುದಾಗಾರದ ಮೂಲಕ 65 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತದೆ. ಆಲಮಟ್ಟಿ ಜಲಾಶಯ ಮಾತ್ರವಲ್ಲದೇ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದೆ. ಹಾಗಾದ್ರೆ ಆಲಮಟ್ಟಿ ಜಲಾಶಯ ಸೇರಿದಂತೆ ಇಂದು(ಜುಲೈ 20) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

| ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ | ಇಂದಿನ ನೀರಿನ ಮಟ್ಟ | ಒಳಹರಿವು | ಹೊರಹರಿವು |
| ಆಲಮಟ್ಟಿ ಜಲಾಶಯ | 519.60 | 97.42 | 43478 | 65480 |
| ತುಂಗಭದ್ರಾ ಜಲಾಶಯ | 497.71 | 55.97 | 106723 | 592 |
| ಕೆ ಆರ್ ಎಸ್ | 38.04 | 38.90 | 44617 | 2566 |
| ಮಲಪ್ರಭಾ ಜಲಾಶಯ | 633.80 | 15.93 | 10935 | 194 |
| ಲಿಂಗನಮಕ್ಕಿ ಜಲಾಶಯ | 554.44 | 76.44 | 77496 | 0 |
| ಕಬಿನಿ ಜಲಾಶಯ | 696.13 | 17.05 | 49334 | 61200 |
| ಭದ್ರಾ ಜಲಾಶಯ | 657.73 | 41.01 | 49555 | 181 |
| ಘಟಪ್ರಭಾ ಜಲಾಶಯ | 662.91 | 31.57 | 21455 | 1680 |
| ಹೇಮಾವತಿ ಜಲಾಶಯ | 890.58 | 31.63 | 35871 | 1500 |
| ವರಾಹಿ ಜಲಾಶಯ | 594.36 | 10.87 | 65559 | 0 |
| ಹಾರಂಗಿ ಜಲಾಶಯ | 871.38 | 6.82 | 13188 | 10000 |
| ಸೂಫಾ ಜಲಾಶಯ | 564.00 | 64.37 | 47385 | 0 |
| ನಾರಾಯಣಪುರ | 492.25 | 30.57 | 65801 | 70931 |
| ವಾಣಿವಿಲಾಸ ಸಾಗರ | 652.24 | 17.96 | 0 | 147 |












Click it and Unblock the Notifications