Karnataka Dam Water Level: ಮಳೆಯಿಂದ ಭರ್ತಿಯಾದ ಜಲಾಶಯಗಳು; ಆಗಸ್ಟ್‌ 21 ರಂದು ರಾಜ್ಯದ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು?

ಬೆಂಗಳೂರು, ಆಗಸ್ಟ್‌ 21: ರಾಜ್ಯದಲ್ಲಿ ಈ ಬಾರೀ ಮುಂಗಾರು ಅಬ್ಬರ ಜೋರಾಗಿತ್ತು. ಇದೀಗ ರಾಜ್ಯದಲ್ಲಿ ನಿನ್ನೆಯಿಂದ ಎರಡನೇ ಹಂತದ ಮುಂಗಾರು ಪ್ರಾರಂಭವಾಗಿದೆ. ಆಗಸ್ಟ್‌ 20ರವರೆಗೂ ರಾಜ್ಯದ ವಿವಿಧೆಡೆ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಎಡೆಬಿಡದೆ ಮುಂಗಾರು ಮಳೆ ಸುರಿದ ಹಿನ್ನಲೆಯಲ್ಲಿ ಭದ್ರಾ, ಹಾರಂಗಿ, ಕಬಿನಿ, ಕೆಆರ್ ಎಸ್, ಹೇಮಾವತಿ, ಲಿಂಗನಮಕ್ಕಿ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಈ ವರ್ಷದ ಮಳೆಯಿಂದಾಗಿ ಉತ್ತರ ಕರ್ನಾಟಕದ ಜನತೆ ಸಂತಸದಲ್ಲಿದ್ದು, ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನದಿಯಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾನದಿಗೆ ಅಡ್ಡಲಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ನಿರ್ಮಾಣ ಮಾಡಲಾಗಿದೆ. ಭರ್ಜರಿ ಮಳೆಯಿಂದಾಗಿ ಡ್ಯಾಂ ಭರ್ತಿಯಾಗಿದೆ.

Karnataka Dams Water level Today KRS Kabini Bhadra dam water level as on August 21st

ಆಲಮಟ್ಟಿ ಜಲಾಶಯ 9 ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಆಗಸ್ಟ್‌ 21) ಬಾಗಿನ ಅರ್ಪಿಸಲಿದ್ದಾರೆ.ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಆಗಸ್ಟ್‌ 21) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಲಾಶಯಗಳು

ಒಟ್ಟು ಸಾಮರ್ಥ್ಯ

(ಟಿಎಂಸಿ)

ಇಂದಿನ ನೀರಿನ ಮಟ್ಟ

(ಟಿಎಂಸಿ)

ಒಳಹರಿವು‌

(ಕ್ಯೂಸೆಕ್ಸ್)

ಆಲಮಟ್ಟಿ ಜಲಾಶಯ 123.08 123.08 31968
ತುಂಗಭದ್ರಾ ಜಲಾಶಯ 105.79 76.91 31033
ಮಲಪ್ರಭಾ ಜಲಾಶಯ 37.73 34.45 1644
ಕೆ ಆರ್‌ ಎಸ್‌ 49.45 47.73 10393
ಲಿಂಗನಮಕ್ಕಿ ಜಲಾಶಯ 151.75 144.42 8811
ಕಬಿನಿ ಜಲಾಶಯ 19.52 18.44 3474
ಭದ್ರಾ ಜಲಾಶಯ 71.54 64.30 6855
ಘಟಪ್ರಭಾ ಜಲಾಶಯ 51.00 51.00 3909
ಹೇಮಾವತಿ ಜಲಾಶಯ 37.10 35.97 4896
ವರಾಹಿ ಜಲಾಶಯ 31.10 21.77 751
ಹಾರಂಗಿ ಜಲಾಶಯ 8.50 8.03 1507
ಸೂಫಾ 145.33 122.64 3404
ನಾರಾಯಣಪುರ ಜಲಾಶಯ 33.31 33.31 27631
ವಾಣಿವಿಲಾಸ ಜಲಾಶಯ 30.42 20.21 1456

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+