Karnataka Dam Water Level: ರಾಜ್ಯದಲ್ಲಿ ಮಳೆಯ ಆರ್ಭಟ; 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು, ಆಗಸ್ಟ್‌ 01: ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದೆ, ಕಳೆದ ಎರಡು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಅನಾಹುತಗಳನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಭಾರೀ ಮಳೆ ಮುಂದುವರೆದಿದೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ.

ಕರ್ನಾಟಕ, ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ ಕೊಳ್ಳದ ಜಲಾಶಯಗಳಿಂದ ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ರಾಜ್ಯದ ಉದ್ದಗಲಕ್ಕೂ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಹಲವು ಕಡೆ ಮಳೆಯಿಂದಾಗಿ ಜಲಾಶಯಗಳು, ನದಿಗಳು ತುಂಬಿದ್ದು ಪ್ರವಾಹ ಭೀತಿ ಎದುರಾಗಿದೆ. ರಸ್ತೆ, ಮನೆಗಳು, ದೇವಾಲಯಗಳು ಮುಳುಗುತ್ತಿವೆ. ಹಲವು ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇನ್ನೂತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ರೈತರಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಅನಕೂಲವಾಗಿದೆ.

Karnataka Dams Water level Today KRS Kabini Bhadra dam water level as on August 1st

ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿರುದೆ. ರಾಜ್ಯದ ಪ್ರಮುಖ ಜಲಾಶಯಗಳ ಫೈಕಿ ಹಾರಂಗಿ, ಘಟಪ್ರಭಾ, ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಆಗಸ್ಟ್‌ 01) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ಜಲಾಶಗಳು ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ಮಟ್ಟ(ಟಿಎಂಸಿ) ಒಳಹರಿವು(ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ 123.08 67.66 3,23,259
​ತುಂಗಭದ್ರಾ ಜಲಾಶಯ 105.79 99.70 52,414
​ಮಲಪ್ರಭಾ ಜಲಾಶಯ 37.73 32.08 21,222
​ಕೆ ಆರ್‌ ಎಸ್‌ 49.45 47.31 95,502
​ಲಿಂಗನಮಕ್ಕಿ ಜಲಾಶಯ 151.75 131.27 82,587
​ಕಬಿನಿ ಜಲಾಶಯ 19.52 18.07 54,137
​ಭದ್ರಾ ಜಲಾಶಯ 71.54 69.65 61,042
​ಘಟಪ್ರಭಾ ಜಲಾಶಯ 51.00 48.22 39,006
​ಹೇಮಾವತಿ ಜಲಾಶಯ 37.10 34.94 61,273
​ವರಾಹಿ ಜಲಾಶಯ 31.10 17.87 10,787
​ಹಾರಂಗಿ ಜಲಾಶಯ 8.50 6.95 9,098
​ಸೂಫಾ 145.33 104.09 45,738
​ನಾರಾಯಣಪುರ 33.31 23.56 3,07,487
​ವಾಣಿವಿಲಾಸ ಸಾಗರ 30.42 18.45 1301

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+