Karnataka Dam Water Level: ರಾಜ್ಯದ ಡ್ಯಾಂಗಳಿಗೆ ಭರಪೂರ ನೀರು; ಶೇ.65ರಷ್ಟು ಜಲಾಶಯಗಳು ಭರ್ತಿ: ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ವಿಶೇಷವಾಗಿ ಕಾವೇರಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನಲೆ ಭದ್ರಾ, ಹಾರಂಗಿ, ಕಬಿನಿ, ಕೆಆರ್​ಎಸ್, ಹೇಮಾವತಿ, ಲಿಂಗನಮಕ್ಕಿ, ಆಲಮಟ್ಟಿ, ಮಲಪ್ರಭಾ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಕ್ಕೆ ಹೆಚ್ಚಿನ ಮಳೆಯಾಗುತ್ತಿದ್ದು, ಬಹುತೇಕ ಡ್ಯಾಂಗಳು ಭರ್ತಿಯಾಗಿವೆ. ಹಾಗಾದರೆ ಆಗಸ್ಟ್‌ 08 ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.

Karnataka Dams Water level Today

ಆಗಸ್ಟ್‌ ಮೊದಲ ವಾರದ ವರದಿಗಳ ಪ್ರಕಾರ, ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 100 ಅಡಿ ಗಡಿ ದಾಟಿದ್ದು, ಕಬಿನಿ ಜಲಾಶಯದಿಂದಲೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯದಿಂದ ಆಗಸ್ಟ್‌ 3ರಂದು ಸುಮಾರು 27 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗಿತ್ತು. ಇನ್ನು ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲೂ ಒಳಹರಿವು ಹೆಚ್ಚಿದೆ. ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ನೀರು ಹೊರಬಿಡಲಾಗಿದೆ. ಆಗಸ್ಟ್‌ 5ರಂದು ನಾರಾಯಣಪುರ ಜಲಾಶಯದಿಂದ ಸುಮಾರು 1.4 ಲಕ್ಷ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿತ್ತು.

100 ಅಡಿ ಗಡಿ ದಾಟಿದ KRS

ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ (KRS) ಅಣೆಕಟ್ಟು ಕೂಡ ಉತ್ತಮ ನೀರಿನ ಸಂಗ್ರಹ ಹೊಂದಿದೆ. 124.80 ಅಡಿ ಗರಿಷ್ಠ ಮಟ್ಟದ KRSನಲ್ಲಿ ಪ್ರಸ್ತುತ 100.34 ಅಡಿ ನೀರಿದೆ. ವಿಶೇಷವೆಂದರೆ ಜಲಾಶಯದ ನೀರಿನ ಮಟ್ಟ 100 ಅಡಿ ಗಡಿ ದಾಟಿದೆ. KRSಗೆ 32,048 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಹಾರಂಗಿ ಬಹುತೇಕ ಭರ್ತಿ

ಕೊಡಗು ಜಿಲ್ಲೆಯ ಹಾರಂಗಿ ಅಣೆಕಟ್ಟು ಬಹುತೇಕ ಭರ್ತಿಯಾಗಿದೆ. 2,859 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2,858.28 ಅಡಿ ನೀರಿದೆ. ಜಲಾಶಯ ಶೇ.97.12ರಷ್ಟು ಭರ್ತಿಯಾಗಿದ್ದು, 8.256 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 5,626 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಹೇಮಾವತಿಯಲ್ಲೂ ಹೆಚ್ಚಿದ ನೀರು

ಹೇಮಾವತಿ ಅಣೆಕಟ್ಟು 2,922 ಅಡಿ ಗರಿಷ್ಠ ಮಟ್ಟ ಹೊಂದಿದ್ದು, ಪ್ರಸ್ತುತ 2,914.35 ಅಡಿ ನೀರಿದೆ. ಜಲಾಶಯ ಶೇ.81.22ರಷ್ಟು ಭರ್ತಿಯಾಗಿದ್ದು, 30.135 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಶೇ.94.35 ಭರ್ತಿ

ಕಬಿನಿ ಅಣೆಕಟ್ಟು ಕೂಡ ಭರ್ತಿಯತ್ತ ಸಾಗುತ್ತಿದೆ. 2,284 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2,282.28 ಅಡಿ ನೀರಿದೆ. ಕಬಿನಿ ಶೇ.94.35ರಷ್ಟು ಭರ್ತಿಯಾಗಿದೆ.

ಆಲಮಟ್ಟಿಗೆ ಭರ್ಜರಿ ಒಳಹರಿವು

ಉತ್ತರ ಕರ್ನಾಟಕದ ಪ್ರಮುಖ ಜಲಾಶಯವಾದ ಆಲಮಟ್ಟಿ ಅಣೆಕಟ್ಟು 1,704.81 ಅಡಿ ಗರಿಷ್ಠ ಮಟ್ಟ ಹೊಂದಿದ್ದು, ಪ್ರಸ್ತುತ 1,701.39 ಅಡಿ ನೀರಿದೆ. ಜಲಾಶಯ ಶೇ.86.50ರಷ್ಟು ಭರ್ತಿಯಾಗಿದ್ದು, 106.473 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿಗೆ ಬರೋಬ್ಬರಿ 1,18,751 ಕ್ಯೂಸೆಕ್ ಒಳಹರಿವು ದಾಖಲಾಗಿರುವುದು ಗಮನಾರ್ಹವಾಗಿದೆ.

ತುಂಗಭದ್ರಾದಲ್ಲೂ ನೀರಿನ ಸಂಗ್ರಹ ಹೆಚ್ಚಳ

ತುಂಗಭದ್ರಾ ಅಣೆಕಟ್ಟು ಪ್ರಸ್ತುತ ಶೇ.65.01ರಷ್ಟು ಭರ್ತಿಯಾಗಿದೆ. ಜಲಾಶಯದಲ್ಲಿ 68.776 ಟಿಎಂಸಿ ನೀರು ಸಂಗ್ರಹವಾಗಿದ್ದು, 47,559 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಹಿಡಕಲ್ ಜಲಾಶಯ ಶೇ.88ರಷ್ಟು ಭರ್ತಿ

ಬೆಳಗಾವಿ ಜಿಲ್ಲೆಯ ಹಿಡಕಲ್ ಅಣೆಕಟ್ಟು ಕೂಡ ಉತ್ತಮ ನೀರಿನ ಸಂಗ್ರಹ ಹೊಂದಿದೆ. ಜಲಾಶಯ ಶೇ.88.23ರಷ್ಟು ಭರ್ತಿಯಾಗಿದ್ದು, 45.002 ಟಿಎಂಸಿ ನೀರು ಸಂಗ್ರಹವಾಗಿದೆ.

ನಾರಾಯಣಪುರಕ್ಕೆ ಭಾರೀ ಒಳಹರಿವು

ನಾರಾಯಣಪುರ ಅಣೆಕಟ್ಟು ಕೂಡ ಭರ್ತಿಯತ್ತ ಸಾಗುತ್ತಿದೆ. ಜಲಾಶಯ ಶೇ.87.23ರಷ್ಟು ಭರ್ತಿಯಾಗಿದ್ದು, ಬರೋಬ್ಬರಿ 1,52,843 ಕ್ಯೂಸೆಕ್ ಭಾರೀ ಒಳಹರಿವು ದಾಖಲಾಗಿದೆ.

ಭದ್ರಾ ಜಲಾಶಯದ ಗರಿಷ್ಠ ಸಾಮರ್ಥ್ಯ 71.50 ಟಿಎಂಸಿ ಇದ್ದು, ಪ್ರಸ್ತುತ 50.27 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 10,009 ಕ್ಯೂಸೆಕ್‌ ಒಳಹರಿವು ಮತ್ತು 195 ಕ್ಯೂಸೆಕ್‌ ಹೊರಹರಿವು ಇದೆ. ತುಂಗಭದ್ರಾ ಜಲಾಶಯದ ಗರಿಷ್ಠ ಸಾಮರ್ಥ್ಯ 105.79 ಟಿಎಂಸಿ ಇದ್ದು, ಪ್ರಸ್ತುತ 68.78 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 47,559 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ.

ಘಟಪ್ರಭಾ ಜಲಾಶಯದ ಗರಿಷ್ಠ ಸಾಮರ್ಥ್ಯ 51.00 ಟಿಎಂಸಿ ಇದ್ದು, ಪ್ರಸ್ತುತ 45.00 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 17,680 ಕ್ಯೂಸೆಕ್‌ ಒಳಹರಿವು ಇದ್ದು, 1,785 ಕ್ಯೂಸೆಕ್‌ ಹೊರಹರಿವು ಇದೆ.ಮಲಪ್ರಭಾ ಜಲಾಶಯದ ಗರಿಷ್ಠ ಸಾಮರ್ಥ್ಯ 37.73 ಟಿಎಂಸಿ ಇದ್ದು, ಪ್ರಸ್ತುತ 19.49 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 7,335 ಕ್ಯೂಸೆಕ್‌ ಒಳಹರಿವು ಮತ್ತು 194 ಕ್ಯೂಸೆಕ್‌ ಹೊರಹರಿವು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+