KRS Dam: ಕರ್ನಾಟಕ ಪ್ರಮುಖ ಜಲಾಶಯಗಳ ನೀರಿನ ಒಳಹರಿವು, ಸಂಗ್ರಹ ಇಂದಿನ ಮಟ್ಟ, ಮಾಹಿತಿ

ಬೆಂಗಳೂರು, ಜೂನ್ 05: ಕರ್ನಾಟಕದಾದ್ಯಂತ ಒಟ್ಟು ಮುಂಗಾರು ಮಳೆ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಹಗುರ, ತುಂತುರು ಹಾಗೂ ಸಾಧಾರಣದಿಂದ ಧಾರಾಕಾರ ಮಳೆ ನಿರೀಕ್ಷೆ ಇದೆ. ಮುಂದಿನ ಐದಾರು ದಿನಗಳ ಕಾಲ ಕರಾವಳಿ ಹೊರತುಪಡಿಸಿ ಒಳನಾಡು ಎಲ್ಲ 28 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬರಲಿದೆ. ಈ ಮಧ್ಯೆ ಕೊಡಗು, ಮಡಿಕೇರಿ, ಮೈಸೂರು ಭಾಗದಲ್ಲಿ ಮುಂದುವರಿದ ಮಳೆ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ.

ಕೊಡಗು ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ಈ ಹಿಂದೆ ಕೇರಳ, ವಯನಾಡು ಭಾಗದಲ್ಲಿ ಆಗಿದ್ದ ಮಳೆಯಿಂದ ಕಾವೇರಿ ನದಿ, ಅದರ ಉಪನದಿಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗುತ್ತಿದೆ. ಮಳೆ ನೀರು ನದಿ ಸೇರುವ ಪ್ರಮಾಣ ಏರಿಕೆ ಆಗಿದ್ದರಿಂದ ಕೃಷ್ಣ ರಾಜ ಸಾಗರ, ಹಾರಂಗಿ, ಹೇಮಾವತಿ, ಕಬಿನಿ ಸೇರಿದಂತೆ ಮೊದಲಾದ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಹಾಗಾದರೆ ಇಂದಿನ ಜಲಾಶಯಗಳ ಒಳಹರಿವು ಎಷ್ಟಿದೆ ಎಂಬ ಅಪ್ಡೇಟ್ ಮಾಹಿತಿ ಇಲ್ಲಿದೆ.

Karnataka Dam Water Storeage Increased on June 5 its Includes Hemavati Harangi and KRS

* ಹೇಮಾವತಿ ಅಣೆಕಟ್ಟು ವಿವರ

ಅಣೆಕಟ್ಟು ಡ್ಯಾಂ ಒಟ್ಟು ಎತ್ತರ: 2922 ಅಡಿ

ಒಟ್ಟು ಸಂಗ್ರಹಣಾ ಸಾಮರ್ಥ್ಯ : 37.10 ಟಿಎಂಸಿ

ಇಂದಿನ ನೀರಿನ ಸಂಗ್ರಹ : 24.074 ಟಿಎಂಸಿ

ಇಂದಿನ ಒಳಹರಿವು ಮಟ್ಟ : 2344 ಕ್ಯೂಸೆಕ್ಸ್

ಇಂದಿನ ಹೊರಹರಿವು : 1450 ಕ್ಯೂಸೆಕ್ಸ್

* ಹಾರಂಗಿ ಅಣೆಕಟ್ಟು ವಿವರ

ಡ್ಯಾಂನ ಒಟ್ಟು ಎತ್ತರ: 2859 ಅಡಿ

ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ

ಇಂದಿನ ನೀರು ಸಂಗ್ರಹ: 6.236 ಟಿಎಂಸಿ

ಇಂದಿನ ಒಳಹರಿವು : 1908 ಕ್ಯೂಸೆಕ್

ಇಂದಿನ ಹೊರಹರಿವು ಮಟ್ಟ: 1729 ಕ್ಯೂಸೆಕ್

* ಕಬಿನಿ ಅಣೆಕಟ್ಟು ಅಪ್ಡೇಟ್ಸ್

ಅಣೆಕಟ್ಟಿನ ಒಟ್ಟು ಎತ್ತರ : 2284 ಅಡಿ

ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ನೀರು ಸಂಗ್ರಹ: 17.34 ಟಿಎಂಸಿ

ಇಂದಿನ ಒಳಹರಿವು: 6488 ಕ್ಯೂಸೆಕ್ಸ್

ಹೊರಹರಿವು : 8000 ಕ್ಯೂಸೆಕ್ಸ್

KRS ಜಲಾಶಯದ ಸ್ಟೋರೆಜ್ ಮಾಹಿತಿ

ಡ್ಯಾಂನ ಒಟ್ಟು ಎತ್ತರ : 124.80 ಅಡಿ

ಒಟ್ಟು ನೀರು ಸಂಗ್ರಹ ಸಾಮರ್ಥ್ಯ : 49.452 ಟಿಎಂಸಿ

ಇಂದಿನ ನೀರು ಸಂಗ್ರಹ : 28.981

ಇಂದಿನ ಒಳಹರಿವು : 7262 ಕ್ಯೂಸೆಕ್ಸ್

ಹೊರಹರಿವು : 786 ಕ್ಯೂಸೆಕ್ಸ್

ಈ ಮೇಲಿನ ನಾಲ್ಕು ಡ್ಯಾಂಗಳು ಸೇರಿದಂತೆ ಆಲಮಟ್ಟಿ, ತುಂಗಭದ್ರಾ, ಮೆಟ್ಟೂರು ಸೇರಿದಂತೆ ವಿವಿಧ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗಿದೆ. ಹೀಗಾಗಿ ಆಯಾ ಡ್ಯಾಂಗಳಲ್ಲೂ ನೀರು ಸಂಗ್ರಹ ಹೆಚ್ಚಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+