Karnataka Dam Water Level: ಕಬಿನಿಯಿಂದ 4000 ಕ್ಯೂಸೆಕ್ ನೀರು ಹೊರಕ್ಕೆ, ಪ್ರವಾಹ ಎಚ್ಚರಿಕೆ: ಇತರ ಡ್ಯಾಂಗಳ ವಿವರ
ಬೆಂಗಳೂರು, ಜೂನ್ 14: ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆ ಕಟ್ಟೆಗಳಲ್ಲಿ, ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದಿದೆ. ಜಲಾಶಯಗಳು ಒಡಲು ತುಂಬುತ್ತಿದೆ. ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು ಸೇರಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ, ಕೇರಳದ ಅರಣ್ಯ ಪ್ರದೇಶ ಸುತ್ತಮುತ್ತ ಮುಂಗಾರು ಚುರುಕಾಗಿದೆ. ಇದರಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದು ಒಳಹರಿವು ಹೆಚ್ಚಾಗಿದೆ. ಮೈಸೂರಿನ ಕಬಿನಿ ಡ್ಯಾಂ ನಿಂದ 4000 ಕ್ಯೂಸೆಕ್ ನೀರು ಹೊರ ಬಿಡಲಾಗಿದ್ದು, ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಕಾವೇರಿ ನೀರಾವರಿ ನಿಗಮವು ಕಬಿನಿ ಡ್ಯಾಂ ನಿಂದ ನೀರು ಬಿಡುವ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ. ಈ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಬಿನಿ ಜಲಾಶಯವು ಶೀಘ್ರವೇ ಗರಿಷ್ಟ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುವುದು. ಆದ್ದರಿಂದ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ.
ಜೂನ್ 14ರ ಪ್ರಮುಖ ಡ್ಯಾಂಗಳ ನೀರಿನ ಮಟ್ಟ
ಕಬಿನಿ ಅಣಕೆಟ್ಟಿನ ನೀರಿನ ಮಟ್ಟ
* ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 15.07 ಟಿಎಂಸಿ
* ಇಂದಿನ ಒಳಹರಿವು: 2461 ಕ್ಯೂಸೆಕ್
* ಹೊರ ಹರಿವು ಮಟ್ಟ: 5000 ಕ್ಯೂಸೆಕ್
ಹಾರಂಗಿ ಅಣೆಕಟ್ಟಿನ ನೀರಿನ ವಿವರ
* ಒಟ್ಟು ನೀರಿನ ಸಾಮರ್ಥ್ಯ: 8.5 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 6.352 ಟಿಎಂಸಿ
* ಇಂದಿನ ಒಳಹರಿವು: 3184 ಕ್ಯೂಸೆಕ್
* ಹೊರ ಹರಿವು ಮಟ್ಟ: 2000 ಕ್ಯೂಸೆಕ್
ಕೆಆರ್‌ಎಸ್ ಡ್ಯಾಂನಲ್ಲಿ ಎಷ್ಟಿದೆ ನೀರು?
* ಒಟ್ಟು ನೀರಿನ ಸಾಮರ್ಥ್ಯ: 49.452 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 30.648 ಟಿಎಂಸಿ
* ಇಂದಿನ ಒಳಹರಿವು: 2770 ಕ್ಯೂಸೆಕ್
* ಹೊರ ಹರಿವು ಮಟ್ಟ: 847 ಕ್ಯೂಸೆಕ್
ಹೇಮಾವತಿ ಜಲಾಶಯದ ನೀರಿನ ಸಂಗ್ರಹ
* ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 24.782 ಟಿಎಂಸಿ
* ಇಂದಿನ ಒಳಹರಿವು: 417 ಕ್ಯೂಸೆಕ್
* ಹೊರ ಹರಿವು ಮಟ್ಟ: 350 ಕ್ಯೂಸೆಕ್
ಆಲಮಟ್ಟಿ ಡ್ಯಾಂ ನೀರಿನ ಮಟ್ಟ
* ಒಟ್ಟು ನೀರಿನ ಸಾಮರ್ಥ್ಯ: 123.08 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 62.81 ಟಿಎಂಸಿ
* ಇಂದಿನ ಒಳಹರಿವು: 12,240ಕ್ಯೂಸೆಕ್
* ಹೊರ ಹರಿವು ಮಟ್ಟ: 5500 ಕ್ಯೂಸೆಕ್
ಲಿಂಗನಮಕ್ಕಿ ಡ್ಯಾಂ ಒಳ ಹರಿವು ವಿವರ
* ಒಟ್ಟು ನೀರಿನ ಸಾಮರ್ಥ್ಯ: 151.75 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 31.40 ಟಿಎಂಸಿ
* ಇಂದಿನ ಒಳಹರಿವು: 7565 ಕ್ಯೂಸೆಕ್
* ಹೊರ ಹರಿವು ಮಟ್ಟ: 6612 ಕ್ಯೂಸೆಕ್
ಭದ್ರಾ ಡ್ಯಾಂ ನೀರಿನ ವಿವರ
* ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 29.74 ಟಿಎಂಸಿ
* ಇಂದಿನ ಒಳಹರಿವು: 1993 ಕ್ಯೂಸೆಕ್
* ಹೊರ ಹರಿವು ಮಟ್ಟ: 569 ಕ್ಯೂಸೆಕ್












Click it and Unblock the Notifications