Karnataka Dam Water Level: ಲಿಂಗನಮಕ್ಕಿಯಲ್ಲಿ 39,961 ಕ್ಯೂಸೆಕ್ ಒಳಹರಿವು, ಇತರ ಡ್ಯಾಂಗಳ ಇಂದಿನ ಸಂಗ್ರಹ

ಬೆಂಗಳೂರು, ಜೂನ್ 16: ಕರ್ನಾಟಕದಾದ್ಯಂತ ಮುಂದುವರಿದ ಮುಂಗಾರು ಮಳೆಗೆ ಮಲೆನಾಡು, ಕರಾವಳಿ ಭಾಗದಲ್ಲಿ ಅಲ್ಲೋ ಕಲ್ಲೋಲ ಸೃಷ್ಟಿಯಾಗಿದೆ. ಗುಡ್ಡ ಕುಸಿತ, ಸಾವು ನೋವು ವರದಿ ಆಗಿದೆ. ಮೇ ಅಂತ್ಯದಿಂದ ಇಂದಿನವರೆಗೆ (ಜೂನ್ 16) ರವರೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ಒಳಹರಿವು ಹಾಗೂ ಹೊರ ಹರಿವು ಎರಡು ಹೆಚ್ಚಾಗಿದೆ. ನದಿ ಪಾತ್ರದ ಜನರಿಗೆ ಪ್ರವಾಹ ಎಚ್ಚರಿಕೆ ಸಂದೇಶ ರವಾನಿಸಿದೆ. ಭಾರೀ ಮಳೆಗೆ ಕೆಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ.

ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕಬಿನಿ ಅಣೆಕಟ್ಟು, ಕೃಷ್ಣ ರಾಜಸಾಗರ (KRS Dam), ಹಾರಂಗಿ, ಆಲಮಟ್ಟಿ, ಹೇಮಾವತಿ, ತುಂಗಭದ್ರಾ, ಲಿಂಗನಮಕ್ಕಿ ಸೇರಿದಂತೆ ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಅಡಿಗಳ ಪ್ರಮಾಣದಲ್ಲಿ ನೀರು ಸಂಗ್ರಹದಲ್ಲಿ ಏರಿಕೆ ಆಗುತ್ತಿದೆ. ಮಳೆಗಾಲ ಈಗಷ್ಟೇ ಆರಂಭವಾಗಿರುವ ಕಾರಣ ಎಲ್ಲ ನೀರನ್ನು ಸಂಗ್ರಹಿಸಿಕೊಳ್ಳದೇ ಅಗತ್ಯತೆ ನೋಡಿಕೊಂಡು ಹೊರ ಬಿಡಲಾಗುತ್ತಿದೆ.

Karnataka Dam Water Level Updates on June 16th Almatti Harangi Kabini Dam Outflow Surged

ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿ, ಭಾಗಮಂಡಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ವಾರದಿಂದಲೂ ಜೋರು ಮಳೆ ಆಗುತ್ತಿದೆ. ಹೀಗಾಗಿ ಕೆಆರ್‌ಎಸ್ ಡ್ಯಾಂ ಒಳಹರಿವು ಏರಿಕೆ ಆಗಿದೆ. ಕಬಿನಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು, ನದಿ ಹಾಗೂ ಕಾಲುವೆಗೆ ನೀರು ಬಿಡುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ವಿವಿಧ ಅಣಕೆಟ್ಟುಗಳ ಇಂದಿನ ನೀರಿನ ಮಟ್ಟ, ವಿವರ ಇಲ್ಲಿದೆ.

ರಾಜ್ಯದ ಅಣೆಕಟ್ಟುಗಳ ನೀರಿನ ಸಂಗ್ರಹ

ಹಾರಂಗಿ ಡ್ಯಾಂ ನೀರಿನ ವಿವರ

* ಡ್ಯಾಂನ ಒಟ್ಟು ನೀರಿನ ಸಂಗ್ರಹ: 8.5 ಟಿಎಂಸಿ

* ಇಂದಿನ ನೀರಿನ ಮಟ್ಟ: 6.313 ಟಿಎಂಸಿ

* ಒಂದಿನ ಒಳಹರಿವು: 4736 ಕ್ಯೂಸೆಕ್

* ಹೊರ ಹರಿವಿನ ಮಟ್ಟ: 4583 ಕ್ಯೂಸೆಕ್

ಕಬಿನಿ ಅಣೆಕಟ್ಟಿನ ನೀರಿನ ಮಟ್ಟ

* ಡ್ಯಾಂನ ಒಟ್ಟು ನೀರಿನ ಸಂಗ್ರಹ: 19.52 ಟಿಎಂಸಿ

* ಇಂದಿನ ನೀರಿನ ಮಟ್ಟ: 15.42 ಟಿಎಂಸಿ

* ಒಂದಿನ ಒಳಹರಿವು: 9820 ಕ್ಯೂಸೆಕ್

* ಹೊರ ಹರಿವಿನ ಮಟ್ಟ: 5000 ಕ್ಯೂಸೆಕ್

ಕೆಆರ್‌ಎಸ್ ಡ್ಯಾಂ ಇಂದಿನ ಅಪ್ಡೇಟ್ಸ್

* ಕೆಆರ್‌ಎಸ್ ಒಟ್ಟು ಎತ್ತರ: 124.80 ಅಡಿಗಳು

* ಡ್ಯಾಂನ ಒಟ್ಟು ನೀರಿನ ಸಂಗ್ರಹ: 49.452 ಟಿಎಂಸಿ

* ಇಂದಿನ ನೀರಿನ ಮಟ್ಟ: 31.322 ಟಿಎಂಸಿ

* ಒಂದಿನ ಒಳಹರಿವು: 6631 ಕ್ಯೂಸೆಕ್

* ಹೊರ ಹರಿವಿನ ಮಟ್ಟ: 915 ಕ್ಯೂಸೆಕ್

ಭದ್ರಾ ಜಲಾಶಯದ ನೀರಿನ ಸಂಗ್ರಹ

* ಡ್ಯಾಂನ ಒಟ್ಟು ನೀರಿನ ಸಂಗ್ರಹ: 71.54 ಟಿಎಂಸಿ

* ಇಂದಿನ ನೀರಿನ ಮಟ್ಟ: 30.26 ಟಿಎಂಸಿ

* ಒಂದಿನ ಒಳಹರಿವು: 5417 ಕ್ಯೂಸೆಕ್

* ಹೊರ ಹರಿವಿನ ಮಟ್ಟ: 1170 ಕ್ಯೂಸೆಕ್

ಲಿಂಗನಮಕ್ಕಿ ಡ್ಯಾಂ ವಿವರ

* ಡ್ಯಾಂನ ಒಟ್ಟು ನೀರಿನ ಸಂಗ್ರಹ: 151.75 ಟಿಎಂಸಿ

* ಇಂದಿನ ನೀರಿನ ಮಟ್ಟ: 35.03 ಟಿಎಂಸಿ

* ಒಂದಿನ ಒಳಹರಿವು: 39961 ಕ್ಯೂಸೆಕ್

* ಹೊರ ಹರಿವಿನ ಮಟ್ಟ: 3011 ಕ್ಯೂಸೆಕ್

ಆಲಮಟ್ಟಿ ಅಣೆಕಟ್ಟಿನ ನೀರಿನ ವಿವರ

* ಡ್ಯಾಂನ ಒಟ್ಟು ನೀರಿನ ಸಂಗ್ರಹ: 123.08 ಟಿಎಂಸಿ

* ಇಂದಿನ ನೀರಿನ ಮಟ್ಟ: 64.60 ಟಿಎಂಸಿ

* ಒಂದಿನ ಒಳಹರಿವು: 20,478 ಕ್ಯೂಸೆಕ್

* ಹೊರ ಹರಿವಿನ ಮಟ್ಟ:14,583 ಕ್ಯೂಸೆಕ್

ರಾಜ್ಯ ಭಾರೀ ಮಳೆ ಮುನ್ಸೂಚನೆ ಇದೆ

ಕರ್ನಾಟಕದ ಮಲೆನಾಡು ಹಾಗೂ ಕರಾವಳಿಯ ಮೂರು ಜಿಲ್ಲೆಗಳು ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಲಿಗೆ ರೆಡ್ ಅಲರ್ಟ್ ಇನ್ನು ಕೆಲ ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+