Karnataka Reservoir Level: ಪ್ರಮುಖ ಜಲಾಶಯಗಳಿಗೆ ಒಳಹರಿವು ಕುಸಿತ, ಅ.11ರ ಡ್ಯಾಂಗಳ ನೀರಿನ ಮಟ್ಟ?
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತು ನಾಳೆ ವಿವಿಧ ಭಾಗಗಳಲ್ಲಿ ಮಳೆ ಮುನ್ಸೂಚನೆ ಇದೆ. ರಾಜ್ಯಾದ್ಯಂತ ಬಹುತೇಕ ಒಣಹವೆ ಮುಂದುವರಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈ ಹಿಂದೆ ಸುರಿದಿದ್ದ ಮಳೆಗೆ ಜಲಾಶಯಗಳಲ್ಲಿ ಜೀವಕಳೆ ಬಂದಿದ್ದು, ಆದರೆ ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ಮಾಯವಾಗಿದ್ದು, ರಾಜ್ಯದ ಪ್ರಮುಖ ಜಲಾಶಯಗಳು, ನದಿಗಳಲ್ಲಿ ಒಳಹರಿವು ಕಡಿಮೆ ಆಗಿದೆ. ಇಂದಿನ (ಅ.11) ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ? ಅಂಕಿ ಅಂಶ ಇಲ್ಲಿದೆ.
ಇತ್ತೀಚಿನ ವಾರಗಳಲ್ಲಿ ಮಳೆ ದುರ್ಬಲವಾಗಿದ್ದು, ಆಗೊಮ್ಮೆ ಈಗೊಮ್ಮೆ ವಿವಿಧ ಭಾಗಗಳಲ್ಲಿ ಸುರಿಯುತ್ತಿದೆ. ಹಿಂಗಾರು ಮಳೆ ಆರಂಭವಾಗಿದ್ದು, ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಆಗಾಗ ವರ್ಷಧಾರೆಯ ದರ್ಶನವಾಗುತ್ತಿದೆ. ಉತ್ತರ ಒಳನಾಡು ಮತ್ತು ಮಲೆನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಕಳೆದ ವಾರ ಮಳೆ ಆಗಿದ್ದು ಬಿಟ್ಟರೆ ಸದ್ಯಕ್ಕೆ ಭಾರೀ ಮಳೆ ಮನ್ಸೂಚನೆ ಇಲ್ಲ. ಮಳೆ ಕೊರತೆಯಿಂದಾಗಿ ನದಿಗಳ ಒಳಹರಿವು, ಜಲಾಶಯಗಳಲ್ಲಿ ನೀರಿನ ಸಂಗ್ರಹ ಕ್ಷೀಣಿಸುತ್ತಿದೆ. ಕೆ.ಆರ್.ಎಸ್. ಕಬಿನಿ, ಹಾರಂಗಿ, ಆಲಮಟ್ಟಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನೇ ದಿನ ಕಡಿಮೆಯಾಗುತ್ತಿದೆ.

ಕೃಷ್ಣ ರಾಜ ಸಾಗರ ಅಣೆಕಟ್ಟು, ಹಾರಂಗಿ, ಹೇಮಾವತಿ, ಕಬಿನಿ, ಆಲಮಟ್ಟಿ, ತುಂಗಭದ್ರಾ ನದಿಗಳು ಅವುಗಳಿಗೆ ಕಟ್ಟಲಾಗಿರುವ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ, ಒಳಹರಿವು ನಿರಂತರವಾಗಿ ಇಳಿಕೆ ಆಗಿದ್ದು, ಹೊರ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.
ಪ್ರಮುಖ ಜಲಾಶಯಗಳ ಇಂದಿನ (ಅ.11) ಮಟ್ಟ
ಕಬಿನಿ ಜಲಾಶಯದ ಮಾಹಿತಿ
ಜಲಾಶಯ ಗರಿಷ್ಠ ಮಟ್ಟ: 19.52 ಟಿಎಂಸಿ
ಇಂದಿನ ಮಟ್ಟ: 10.73 ಟಿಎಂಸಿ
ಒಳಹರಿವು: 881 ಕ್ಯೂಸೆಕ್
ಹೊರ ಹರಿವು: 1300 ಕ್ಯೂಸೆಕ್
ಕೆ.ಆರ್.ಎಸ್. ಅಣೆಕಟ್ಟು ವಿವರ
ಜಲಾಶಯ ಗರಿಷ್ಠ ಮಟ್ಟ: 49.452 ಟಿಎಂಸಿ
ಇಂದಿನ ಮಟ್ಟ: 24.091 ಟಿಎಂಸಿ
ಒಳಹರಿವು: 560 ಕ್ಯೂಸೆಕ್
ಹೊರ ಹರಿವು: 2670 ಕ್ಯೂಸೆಕ್
ಹೇಮಾವತಿ ಜಲಾಶಯ
ಜಲಾಶಯ ಗರಿಷ್ಠ ಮಟ್ಟ: 37.103 ಟಿಎಂಸಿ
ಇಂದಿನ ಮಟ್ಟ: 15.487 ಟಿಎಂಸಿ
ಒಳಹರಿವು: 735 ಕ್ಯೂಸೆಕ್
ಹೊರ ಹರಿವು: 300 ಕ್ಯೂಸೆಕ್
ಹಾರಂಗಿ ಡ್ಯಾಂ ನೀರಿನ ಮಟ್ಟ
ಜಲಾಶಯ ಗರಿಷ್ಠ ಮಟ್ಟ: 8.5 ಟಿಎಂಸಿ
ಇಂದಿನ ಮಟ್ಟ: 5.372 ಟಿಎಂಸಿ
ಒಳಹರಿವು: 85 ಕ್ಯೂಸೆಕ್
ಹೊರಹರಿವು: 1700 ಕ್ಯೂಸೆಕ್


Click it and Unblock the Notifications
