Karnataka Dam Water Level Today: 14 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಾಗಿದೆ, ಒಂದೇ ತಿಂಗಳಲ್ಲಿ ಶೇ.10ರಷ್ಟು ಕುಸಿತ
Karnataka Dam Water Level Today: ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆ ಆಗುತ್ತಿದ್ದರೂ ಸಹ ಕರ್ನಾಟಕದ ಜಲಾಯಗಳ ನೀರಿನ ಮಟ್ಟ ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರೀ ಕುಸಿತವಾಗಿದೆ. ಕರ್ನಾಟಕದಲ್ಲಿ ಮಳೆ ಕೊರತೆಯ ತೀವ್ರತೆ ಹೆಚ್ಚಾಗುತ್ತಿದೆ. ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಕಳೆದ 1 ತಿಂಗಳಲ್ಲಿ ನೀರಿನ ಸಂಗ್ರಹವು 88.87 (ಶೇ.10) ಟಿಎಂಸಿ ಇಳಿಕೆ ಆಗಿದೆ ಎಂದು ವರದಿಯಾಗಿದೆ. ಬರದ ಸುಳಿಯಲ್ಲಿರುವ ಕರ್ನಾಟಕಕ್ಕೆ ಈ ವಿಷಯವು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಮನ್ನಾರ್ ಕೊಲ್ಲಿ ಮತ್ತು ಅದನ್ನು ಹೊಂದಿಕೊಂಡಿರುವ ದಕ್ಷಿಣ ತಮಿಳುನಾಡು ಕರಾವಳಿಯ ಮೇಲೆ, ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಮೇಲ್ಮ ವಾಯುಭಾರ ಕುಸಿತದ ಸುಳಿಗಾಳಿ ಕಂಡುಬಂದಿದೆ. ಮನ್ನಾರ್ ಕೊಲ್ಲಿ ಮತ್ತು ಅದನ್ನು ಹೊಂದಿಕೊಂಡಿರುವ ದಕ್ಷಿಣ ತಮಿಳುನಾಡು ಕರಾವಳಿಯ ಮೇಲಿನ ಸುಳಿಗಾಳಿಯಿಂದ, ಉತ್ತರ ಒಳನಾಡು ತಮಿಳುನಾಡು ಮತ್ತು ಉತ್ತರ ಕೇರಳದ ಮೂಲಕ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದವರೆಗೆ, ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ವಾಯುಭಾರ ಕುಸಿತದ ಹಾದಿ ವ್ಯಾಪಿಸಿದೆ.

ದಕ್ಷಿಣ ಒಳನಾಡು ಕರ್ನಾಟಕ ಮತ್ತು ಅದನ್ನು ಹೊಂದಿಕೊಂಡಿರುವ ಉತ್ತರ ಕೇರಳದ ಮೇಲೆ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿದ್ದ ವಾಯುಭಾರ ಕುಸಿತದ ಸುಳಿಗಾಳಿಯು, ಮೇಲೆ ತಿಳಿಸಲಾದ ವಾಯುಭಾರ ಕುಸಿತದ ಹಾದಿಯೊಂದಿಗೆ ವಿಲೀನಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮುಂದಿನ ಎರಡರಿಂದ ಮೂರು ದಿನ ಮಳೆ ಆಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಮಳೆ ಕೊರತೆಯ ತೀವ್ರತೆ ದಿನದಿಂದ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಮುಂಗಾರು ಅಂತ್ಯವಾಗುವ ಸಮಯಕ್ಕೆ ಬಂದರೂ ಸಹ ಮಳೆ ಕೊರತೆಯ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕದ 14 ಪ್ರಮುಖ ಡ್ಯಾಂಗಳು 895.65 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಇದೆ. ಸೆಪ್ಟೆಂಬರ್ 4ರಂದು ಜಲಾಶಯಗಳಲ್ಲಿ 687.07 ಟಿಎಂಸಿ (ಶೇ.77) ನೀರಿತ್ತು. ಆದರೆ ಒಂದೇ ತಿಂಗಳ ಅವಧಿಯಲ್ಲಿ ಅಂದರೆ, ಅಕ್ಟೋಬರ್ 4ಕ್ಕೆ 598.20 ಟಿಎಂಸಿಗೆ (ಶೇ.67) ಇಳಿಕೆ ಆಗಿದೆ. ಒಟ್ಟಾರೆ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಪ್ರಮಾಣವು ಒಂದು ತಿಂಗಳ ಅಂತರದಲ್ಲಿ ಶೇ.10ರಷ್ಟು ಕುಸಿದಿದ್ದು, 88.87 ಟಿಎಂಸಿ ನೀರು ಕಡಿಮೆ ಆದಂತೆ ಆಗಿದೆ.
ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 103.33
ಒಳಹರಿವು: 514
ಹೊರಹರಿವು: 3,230 ಕ್ಯೂಸೆಕ್ಸ್‌ಗಳಲ್ಲಿ
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,851.50
ಒಳಹರಿವು: 462
ಹೊರಹರಿವು: 1,382 ಕ್ಯೂಸೆಕ್ಸ್‌ಗಳಲ್ಲಿ
ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 2,268.45
ಒಳಹರಿವು: 444
ಹೊರಹರಿವು: 1,300 ಕ್ಯೂಸೆಕ್ಸ್‌ಗಳಲ್ಲಿ
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2,892.25
ಒಳಹರಿವು: 543
ಹೊರಹರಿವು: 300 ಕ್ಯೂಸೆಕ್ಸ್‌ಗಳಲ್ಲಿ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,794.50
ಒಳಹರಿವು: 454
ಹೊರಹರಿವು: 4,385.86 ಕ್ಯೂಸೆಕ್ಸ್‌ಗಳಲ್ಲಿ
ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 547.19
ಒಳಹರಿವು: 407.73
ಹೊರಹರಿವು: 5,473.64 ಕ್ಯೂಸೆಕ್ಸ್‌ಗಳಲ್ಲಿ
ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 585.67
ಒಳಹರಿವು: 0
ಹೊರಹರಿವು: 1,167
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,622.39
ಒಳಹರಿವು: 0
ಹೊರಹರಿವು: 9,958
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50
ಇಂದಿನ ಮಟ್ಟ: 2,065.48
ಒಳಹರಿವು: 0
ಹೊರಹರಿವು: 194
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,174.70
ಒಳಹರಿವು: 185
ಹೊರಹರಿವು: 185
ತುಂಗಾ
ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24
ಇಂದಿನ ಮಟ್ಟ: 588.23
ಒಳಹರಿವು: 1,970
ಹೊರಹರಿವು: 2,039
ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 173.10
ಒಳಹರಿವು: 324
ಹೊರಹರಿವು: 1,388
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 518.39
ಒಳಹರಿವು: 0
ಹೊರಹರಿವು: 1,747
ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 491.40
ಒಳಹರಿವು: 0
ಹೊರಹರಿವು: 453


Click it and Unblock the Notifications
