Karnataka Dam Water Level: ಕರ್ನಾಟಕದಲ್ಲಿ ಧಾರಾಕಾರ ಮಳೆ: ಪ್ರಮುಖ ಜಲಾಶಯದ ಇಂದಿನ ನೀರಿನ ಮಟ್ಟ ವಿವರ ಇಲ್ಲಿದೆ!

Karnataka Dam Water Level: ಕರ್ನಾಟಕದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯಿಂದಾಗಿ ರಾಜ್ಯದ ಹಲವು ಜಲಾಶಯಗಳು ಭರ್ತಿ ಆಗಿವೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು ಜಲಾಯಶಗಳು ಭರ್ತಿ ಆಗಿವೆ. ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಅವಧಿಗೆ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹೀಗಾಗಿ ಜಲಾಶಯಗಳ ಒಳಹರಿವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು ವಿವಿಧ ಜಲಾಯಗಳಲ್ಲಿ ಒಳಹರಿವು ಹೆಚ್ಚಳವಾಗಿದೆ.

ಜಲಾಶಯದಿಂದ ನೀರು ಬಿಡುಗಡೆ: ಇನ್ನು ರಾಜ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಜಲಾಶಯಗಳು ಭರ್ತಿ ಆಗುತ್ತಿದ್ದು. ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟಿನ ವಿಶ್ವೇಶ್ವರಯ್ಯ ನಾಲೆ ಹಾಗೂ ನದಿ ಒಡ್ಡಿನ ಚಿಕ್ಕದೇವರಾಜಸಾಗರ ನಾಲೆಗೆ ನೀರು ಬಿಡಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆಗೆ ಜಲಾಶಯದಿಂದ 1500 ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಹಂತ ಹಂತವಾಗಿ 2500 ಕ್ಯೂಸೆಕ್‌ಗೆ ಹೆಚ್ಚಿಸುವುದಕ್ಕೆ ಉದ್ದೇಶಿಸಲಾಗಿದೆ.

Karnataka Dam Water Level rain in Karnataka Here is details of today s water level of a major reservoir

ಹೇಮಾವತಿ ಜಲಾಶಯ

ಜಲಾಶಯದ ನೀರಿನ ಮಟ್ಟ: 2922 ಅಡಿ
ಇಂದಿನ ನೀರಿನ ಮಟ್ಟ: 2919.90 ಅಡಿ
ಸಂಗ್ರಹ: 35.077 / 37.10 ಟಿಎಂಸಿ
ಒಳಹರಿವು: 13,475 ಕ್ಯೂಸೆಕ್‌ಗಳು
ಹೊರಹರಿವು: 12,250 ಕ್ಯೂಸೆಕ್‌ಗಳು

ಹಾರಂಗಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2853.18
ಶೇಖರಣಾ ಸಾಮರ್ಥ್ಯ: 6.625 / 8.5 ಟಿಎಂಸಿ
ಒಳಹರಿವು: 5493 ಕ್ಯೂಸೆಕ್
ಹೊರಹರಿವು: 4000 ಕ್ಯೂಸೆಕ್
ಒಟ್ಟು ಹೊರಹರಿವು: 4000 ಕ್ಯೂಸೆಕ್

ಕೃಷ್ಣರಾಜಸಾಗರ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 122.35
ಸಂಗ್ರಹಣೆ: 46.099 / 49.452 ಟಿಎಂಸಿ
ಒಳಹರಿವು: 26,551 ಕ್ಯೂಸೆಕ್
ಹೊರಹರಿವು: 24,958 ಕ್ಯೂಸೆಕ್
ಲೈವ್ ಸ್ಟೋರೇಜ್: 37.720 ಟಿಎಂಸಿ

ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ. ವಿವಿಧೆಡೆ ವ್ಯಾಪಕವಾಗಿ ಹಗುರ- ಸಾಧಾರಣ ಮಳೆ ಮುಂದುವರೆಯಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲು / ಆಗಾಗ ಮೋಡಕವಿದ ವಾತಾವರಣ ಹಾಗೂ ಕೆಲವು ಕಡೆ ಗುಡುಗು ಸಹಿತ ಹಗುರದಿಂದ-ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+