Karnataka Dam Water Level Today: ಪ್ರಮುಖ ಅಣೆಕಟ್ಟುಗಳ ಇಂದಿನ ಮಟ್ಟ, ಲಿಂಗನಮಕ್ಕಿ ಡ್ಯಾಂ ಭರ್ತಿ ಶೀಘ್ರ
ಬೆಂಗಳೂರು, ಸೆಪ್ಟಂಬರ್ 04: ಕರ್ನಾಟಕದ ವಿವಿಧ ಭಾಗದಲ್ಲಿ ಮಳೆ ಮುಂದುವರಿದಿದೆ. ಪರಿಣಾಮ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಈ ಪೈಕಿ ಲಿಂಗನಮಕ್ಕಿಯಲ್ಲಿ ಹೆಚ್ಚಿನ ಒಳಹರಿವು ಕಂಡು ಬಂದಿದ್ದು, ಅಣೆಕಟ್ಟಿನ ಭರ್ತಿಗೆ ಕೆಲವೇ ಅಡಿಗಳಷ್ಟು ಬಾಕಿ ಇದೆ. ಮಲೆನಾಡು ಸೇರಿ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದ್ದು, ಲಿಂಗನಮಕ್ಕಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದು ಸೆಪ್ಟಂಬರ್ 04ರಂದು ನೀರಿನ ಮಟ್ಟ, ಒಳ ಮತ್ತು ಹೊರ ಹರಿವಿನ ಮಾಹಿತಿ ಇಲ್ಲಿದೆ.
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಆಗುತ್ತಿದೆ. ಇದರಿಂದ ಶರಾವತಿ ನದಿ ನೀರು ಮೈದುಂಬಿ ಹರಿಯುತ್ತಿದೆ. ಈ ನೀರು ಹರಿದುಕೊಂಡು ಹೋಗಿ ಲಿಂಗನಮಕ್ಕಿ ಅಣೆಕಟ್ಟು ಸೇರುತ್ತದೆ. ಇದರಿಂದಾಗಿ ಡ್ಯಾಂ ಭರ್ತಿಯಾಗಲು ಕೆಲವೇ ಅಡಿ ಬಾಕಿ ಇದೆ. ಉಳಿದಂತೆ ಭದ್ರಾ, ಕೆಆರ್‌ಎಸ್, ಹಾರಂಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಜೊತೆಗೆ ಹೊರ ಹರಿವು ಸಹ ಏರಿಕೆ ಆಗಿದೆ.

ಅಣೆಕಟ್ಟುಗಳ ಇಂದಿನ ನೀರಿನ ಮಟ್ಟ, ಪಟ್ಟಿ
ಲಿಂಗನಮಕ್ಕಿ ಅಣೆಕಟ್ಟು
ಒಳ ಹರಿವು : 17363 ಕ್ಯೂಸೆಕ್
ಹೊರ ಹರಿವು : 18528 ಕ್ಯೂಸೆಕ್
ಗರಿಷ್ಟ ನೀರಿನ ಮಟ್ಟ : 1819 ಅಡಿ
ಇಂದಿನ ಮಟ್ಟ : 1817.55 ಅಡಿ
ಒಟ್ಟು ನೀರಿನ ಸಾಮರ್ಥ್ಯ: 151.64 ಟಿಎಂಸಿ
ಇಂದು ನೀರಿನ ಮಟ್ಟ: 146.78 ಟಿಎಂಸಿ
ತುಂಗಾ ಜಲಾಶಯದ ಮಾಹಿತಿ
ಒಳ ಹರಿವು : 20491 ಕ್ಯೂಸೆಕ್
ಹೊರ ಹರಿವು : 20491 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ:24 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 3.24 ಟಿಎಂಸಿ
ಭದ್ರಾ ಜಲಾಶಯ ಮಾಹಿತಿ
ಒಳ ಹರಿವು : 15574 ಕ್ಯೂಸೆಕ್
ಹೊರ ಹರಿವು : 11118 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ: 71.5 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 68.21 ಟಿಎಂಸಿ
ಹೇಮಾವತಿ ಜಲಾಶಯ
ಒಳಹರಿವು : 7541 ಕ್ಯೂಸೆಕ್
ಹೊರಹರಿವು :11275 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ : 37.103 ಟಿಎಂಸಿ
ಇಂದಿನ ನೀರನ ಸಾಮರ್ಥ್ಯ : 37.055 ಟಿಎಂಸಿ
ಕೆಆರ್‌ಎಸ್ ಜಲಾಶಯ
ಒಳಹರಿವು : 11248 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು : 10715 ಕ್ಯೂಸೆಕ್ಸ್
ಡ್ಯಾಂನ ಒಟ್ಟು ಸಾಮರ್ಥ್ಯ : 49.45 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 48.89 ಟಿಎಂಸಿ
ಕಬಿನಿ ಜಲಾಶಯ
ಒಳಹರಿವು : 8702 ಕ್ಯೂಸೆಕ್ಸ್
ಹೊರ ಹರಿವು : 7000 ಕ್ಯೂಸೆಕ್ಸ್
ಡ್ಯಾಂನ ಒಟ್ಟು ಸಾಮರ್ಥ್ಯ : 19.52 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 19.31 ಟಿಎಂಸಿ












Click it and Unblock the Notifications