Get Updates
Get notified of breaking news, exclusive insights, and must-see stories!

ಕರ್ನಾಟಕ ಕಾಂಗ್ರೆಸ್ ಬಣ ರಾಜಕೀಯ: ಸಿದ್ದರಾಮಯ್ಯ ಟೀಂನ 25 ಶಾಸಕರು ಫಾರಿನ್ ಟ್ರಿಪ್, ಡಿಕೆಶಿ ರೆಸಾರ್ಟ್ ರಾಜಕೀಯಕ್ಕೆ ಸಜ್ಜು?

ಬೆಂಗಳೂರು: ಕರ್ನಾಟಕ ರಾಜ್ಯದ ಜನರು ಮತ್ತೊಂದು ರಾಜಕೀಯ ಬೃಹನ್ ನಾಟಕ ನೋಡಲು ಸಜ್ಜಾಗಬೇಕಿದೆ. ನಾಯಕತ್ವ ಬದಲಾವಣೆ, ಸಿಎಂ ಕುರ್ಚಿ ರಾಜಕೀಯ ಮತ್ತೊಂದು ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಕರ್ನಾಟಕ ಬಜೆಟ್ 2026 ಮಂಡನೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬಣದ 25 ಶಾಸಕರು 15ದಿನ ಫಾರಿನ್ ಟೂರ್ ಮಾಡುವುದು ನಿಕ್ಕಿಯಾಗಿದೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣವು ರೆಸಾರ್ಟ್ ರಾಜಕೀಯಕ್ಕೆ ಧುಮುಕುವ ಸಾಧ್ಯತೆ ಇದ್ದು, ಆ ಮೂಲಕ ಸಿಎಂ ಬಣಕ್ಕೆ ಟಾಂಗ್ ಕೊಡಬಹುದು. ರಾಜ್ಯದ ಹಿತ ಮರೆತು ಅಧಿಕಾರ ಹಿಡಿಯಲು ನಾಯಕರು ಹವಣಿಸುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಮೂರು ನಾಲ್ಕು ಬಾರಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದರೂ ರಾಹುಲ್ ಗಾಂಧಿ ಭೇಟಿಗೆ ಅವಕಾಶ ದೊರೆತಿಲ್ಲ. ಸಿಎಂ ಪುತ್ರ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎನ್ನುತ್ತಿದ್ದಾರೆ. ಈ ಮಧ್ಯ ಶಾಸಕರ ವಿಶ್ವಾಸ ಹಿಡಿದಿಟ್ಟುಕೊಳ್ಳಲು ಸಿದ್ದರಾಮಯ್ಯ ನವರೇ ತಮ್ಮ ಬಣದ 25 ಶಾಸಕರಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಟೂರ್ ಕಳುಹಿಸುತ್ತಿದ್ದಾರೆರೆ ಎಂಬ ಮಾತುಗಳು ಕೇಳಿ ಬಂದಿವೆ. ಪಶುಸಂಗೋಪನೆ ಸಚಿವ ವೆಂಕಟೇಶ್ ಅವರ ನೇತೃತ್ವದಲ್ಲಿ ಶಾಸಕರಿಗೆ ಈಗಾಗಲೇ ಟಿಕೆಟ್ ಬುಕ್ ಆಗಿದೆ. ಒಟ್ಟು 15 ದಿನ ಶಾಸಕರ ಫಾರಿನ್ ನಲ್ಲಿ ಇರಲಿದ್ದಾರೆ.

Karnataka Congress Crisis

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಫೆಬ್ರವರಿ 16ಕ್ಕೆ 1000 ದಿನ ಆಗಲಿದೆ. ಮಾರ್ಚ್ 6ಕ್ಕೆ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಲಿದ್ದಾರೆ. ಸಿದ್ದರಾಮೋತ್ಸವ ನಡೆಸುವ ಮಾತು ಕೇಳಿ ಬಂದಿತ್ತು. ಸಿಎಂ ಬದಲಾವಣೆ ವಿಚಾರ ಚರ್ಚೆ ಜೋರಾಗಿದ್ದು, ಎರಡು ಬಣದ ನಾಯಕರು, ಶಾಸಕರು ತೆರೆ ಮರೆಯ ಕಸರತ್ತು ಮುಂದುವರಿಸಿದ್ದಾರೆ. ಬಜೆಟ್ ಮಂಡನೆ ಆಗಬೇಕಿದೆ. ಈ ಹೊತ್ತಿನಲ್ಲಿ ಸಿಎಂ ಬಣದ ಶಾಸಕರ ಫಾರಿನ್ ಟ್ರಿಪ್ ರಾಜ್ಯದಲ್ಲಿ ಕುತೂಹಲ ಮೂಡಿಸಿದೆ. ಇದು ಡಿಕೆ ಶಿವಕುಮಾರ್ ಬಣದ ರಾಸಾರ್ಟ್ ರಾಜಕಾರಣಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಫಾರಿನ್ ಟ್ರಿಪ್‌ನಲ್ಲಿ ಯಾರೆಲ್ಲ ಶಾಸಕರಿದ್ದಾರೆ?

ಫೆಬ್ರವರಿ 16 ರಿಂದ ಮಾರ್ಚ್ 6ರವರೆಗೆ 25 ಶಾಸಕರು ಫಾರಿನ್‌ನಲ್ಲಿ ಕಾಲ ಕಳೆಯಲಿದ್ದಾರೆ. ನೆಪ ಮಾತ್ರಕ್ಕೆ ಇದು 'ಪಶು ಸಂಗೋಪನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ವಿದೇಶಿ ಪ್ರವಾಸಕ್ಕೆ ಹೋಗುವುದಾಗಿ ಸಚಿವರು ಸಬೂಬು' ಹೇಳಿದ್ದಾರೆ. ಶಾಸಕರಾದ ಪುಟ್ಟರಂಗ ಶೆಟ್ಟಿ, ಬಿಎಂ ನಾಗರಾಜು, ಯಶವಂತಗೌಡ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸನಗೌಡ ದದ್ದಲ್, ರಾಘವೇಂದ್ರ ಹಿಟ್ನಾಳ್, ಅನಿಲ್ ಚಿಕ್ಕಮಾಧು, ಜೆ.ಟಿ ಪಾಟೀಲ್, ಎ.ಆರ್.ಕೃಷ್ಣಮೂರ್ತಿ, ಬಸನಗೌಡ ತುರವಿಹಾಳ್ ಸೇರಿ 25 ಶಾಸಕರಿಗೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಟೂರ್ ಟಿಕೆಟ್ ಬುಕ್ ಆಗಿದೆ. ಈ ಮೂಲಕ ಸಿಎಂ ಬಣದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಹೇಳಲಾಗುತ್ತಿದೆ.

Karnataka Congress Crisis

ಶಾಸಕರ ಫಾರಿನ್ ಟ್ರಿಪ್‌: ಈ ಪ್ರಶ್ನೆ ಕೇಳಬೇಡಿ ಎಂದ ಸಿದ್ದರಾಮಯ್ಯ!

ನಾಯಕತ್ವ ಬದಲಾವಣೆ ಹಾಗೂ ಶಾಸಕರ ಫಾರಿನ್ ಟ್ರಿಪ್‌ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ನಾಯಕತ್ವ ಬದಲಾವಣೆ ಬಗ್ಗೆ ಪದೇ ಪದೆ ಕೇಳಬೇಡಿ. ಮೂರು ತಿಂಗಳಿನಿಂದ ಇದೇ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಮಾಧ್ಯಮದವತ್ತ ಕೈ ತೋರಿಸಿ ಮರು ಪ್ರಶ್ನಿಸಿದ್ದಾರೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ. ಅವರ ನಿರ್ಧಾರವೇ ಅಂತಿಮ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಈ ಪ್ರಶ್ನೆ ಬೇರೆ ಯಾರಿಗೂ ಕೇಳಬೇಡಿ. ನಾವೆಲ್ಲರೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ತಿಳಿಸಿದರು. ಇನ್ನೂ ಶಾಸಕರು ಅವರವರ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದರೆ ಹೋಗಲಿ, ಏನು ತಪ್ಪು. ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಚುಟುಕಾಗಿ ಉತ್ತರಿಸಿದರು.

ರೆಸಾರ್ಟ್ ರಾಜಕಾರಣಕ್ಕೆ ಡಿಕೆಶಿ ಬಣ ಸಜ್ಜು?

ಸಿಎಂ ಬಣದ ಫಾರಿನ್ ಟ್ರಿಪ್ ವಿರುದ್ಧ ರೆಸಾರ್ಟ್ ರಾಜಕೀಯಕ್ಕೆ ಡಿಕೆ ಶಿವಕುಮಾರ್ ಬಣ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಹೊತ್ತಿನಲ್ಲಿ ತೆಲಂಗಾಣ, ತಮಿಳುನಾಡು, ಕೇರಳ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪಕ್ಷದಲ್ಲಿ ತೊಂದರೆ ಆದಾಗ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಬಳಸಿಕೊಂಡಿದೆ. ಆದರೆ ಕರ್ನಾಟಕದಲ್ಲಿ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಅಂಶ ಸ್ವತಃ ಡಿಕೆ ಶಿವಕುಮಾರ್ ಗಮನಕ್ಕೂ ಬಂದಂತಿದೆ. ನಿರಂತರ ಪ್ರಯತ್ನಪಟ್ಟರು ರಾಹುಲ್ ಗಾಂಧಿ ಭೇಟಿ ಆಸೆಗೆ ನಿರಾಸೆ ಉಂಟಾಗಿದೆ. ಇದೀಗ ಫಾರಿನ್ ರಾಜಕೀಯ ಮುನ್ನೆಲೆಗೆ ಬಂದು ಡಿಕೆಶಿಯವರ ನಿದ್ದೆಗೆಡಿಸಿದೆ. ಇದಕ್ಕೆ ಟಕ್ಕರ್ ಕೊಡಲು ಡಿಕೆಶಿ ಅವರ ಬಣವು ರೆಸಾರ್ಟ್ ರಾಜಕೀಯ ಮಾಡುವ ಲಕ್ಷಣಗಳು ಎದ್ದು ಕಾಣುತ್ತಿವೆ. ಏಕೆಂದರೆ ತಮ್ಮ ಬಣದ ಶಾಸಕರು ಕೈತಪ್ಪಿ ಹೋಗದಂತೆ, ವಿಶ್ವಾಸ ಕಳೆದುಕೊಳ್ಳದಂತೆ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ.

ಸಿದ್ದರಾಮೋತ್ಸವ ಬದಲಾಗಿ ಪಕ್ಷದಿಂದ ಕಾರ್ಯಕ್ರಮ ಮಾಡೋಣ!

ಈ ಮಧ್ಯೆ ಸರ್ಕಾರ 1000 ದಿನ ಪೂರೈಸಿದ್ದಕ್ಕೆ ಸಿದ್ದರಾಮೋತ್ಸವ ಮಾಡುವುದಾಗಿ ಸಿಎಂ ಬೆಂಬಲಿಗರು ಹೇಳಿದ್ದರು. ಇದನ್ನು ವಿರೋಧಿಸಿದಂತೆ ಮಾತನಾಡಿದ್ದ ಡಿಕೆ ಶಿವಕುಮಾರ್, ಈ ಸಮಾವೇಶ ಬದಲಾಗಿ, ಪಕ್ಷದಿಂದ ಕಾರ್ಯಕ್ರಮ ಮಾಡೋಣ ಎಂದು ತಿಳಿಸಿದ್ದರು. ಇದೀಗ ಇದೆಲ್ಲ ಸಂಗತಿಗಳು ಮರೆಯಾಗಿ ದಿವಾಳಿ ಆರೋಪ ಹೊತ್ತ ಸರ್ಕಾರಕ್ಕೆ ಜನರ ಕಾಳಜಿ ಇಲ್ಲ

ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳಿಂದ ಆರ್ಥಿಕ ದಿವಾಳಿ ಆಗಿದೆ ಎಂಬ ಆರೋಪ ಎದುರಿಸುತ್ತಿದೆ. ಈ ಮಧ್ಯೆ ಜನರ ಚಿತ್ತ ಬಜೆಟ್ ಮೇಲೆ ನೆಟ್ಟಿದೆ. ಹೀಗಿರುವಾಗ ಅಭಿವೃದ್ಧಿ ಕಡೆಗೆ ಗಮನಹರಿಸಬೇಕಾದ ನಾಯಕರು ಹೀಗೆ ಅಧಿಕಾರದಾಸೆಗೆ ಜನರ ತೆರಿಗೆ ಹಣದಲ್ಲಿ ಫಾರಿನ್, ರೆಸಾರ್ಟ್ ರಾಜಕೀಯಕ್ಕೆ ಇಳಿದರೆ ಆಡಳಿತ ಯಂತ್ರ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಇದೆಲ್ಲವನ್ನು ವಿರೋಧಿಸಬೇಕಾದ ವಿಪಕ್ಷ ನಾಯಕರು ಟ್ವಿಟ್ ಪೋಸ್ಟ್ ಮಾಡಲು ಮಾತ್ರವೇ ಸಿಮೀತವಾಗಿದ್ದಾರೆ ಎಂದು ಜನ ರಾಜ್ಯ ರಾಜಕಾರಣಿಗಳ ನಡವಳಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+