• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರೀಕ್ಷೆಗೆ ಶುಭ ಕೋರಿದ ಕುಮಾರಸ್ವಾಮಿ: ಬೆಚ್ಚಿಬೀಳಿಸುವ ವಿದ್ಯಾರ್ಥಿಗಳ ಮರುಪ್ರಶ್ನೆ

|
   ಯು ಪಿ ಎಸ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶ್ ಮಾಡಿದ ಎಚ್ ಡಿ ಕೆ | ಟ್ವಿಟ್ಟರ್ ನಲ್ಲಿ ಲೇವಡಿ

   ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದು, ಏನೆಲ್ಲಾ ಆಟಮೇಲಾಟಕ್ಕೆ ರಾಜ್ಯ ಸಾಕ್ಷಿಯಾಯಿತು, ಚುನಾವಣೆಗೆ ಮುನ್ನ ಮೂರು ಪಕ್ಷಗಳು ಎಂತೆಂಥಾ ಪದಪ್ರಯೋಗ ಬಳಸಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

   ಆದರೆ, ಈ ಎಲ್ಲಾ ರಾಜಕೀಯ ಪ್ರಹಸನಗಳು ವಿದ್ಯಾರ್ಥಿಗಳ ಜೀವನದಲ್ಲಿ ಯಾವ ಮಟ್ಟಿಗೆ ಪ್ರಭಾವ ಬೀರಿರಬಹುದು ಎನ್ನುವುದಕ್ಕೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರ ಟ್ವೀಟ್ ಒಂದಕ್ಕೆ ವಿದ್ಯಾರ್ಥಿಗಳ ಮರುಪ್ರಶ್ನೆ ನೋಡಿದರೆ ಅರ್ಥವಾಗುತ್ತದೆ.

   ಅನಗತ್ಯ ವೆಚ್ಚ ಕಡಿತಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ

   'UPSC ಪರೀಕ್ಷೆ ಬರೆಯುವ ಎಲ್ಲಾ ಯುವಕ-ಯುವತಿಯರಿಗೆ ಶುಭವಾಗಲಿ' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. hd_kumaraswamy ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದ ಈ ಸಂದೇಶಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದಿವೆ.

   ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಇನ್ನೊಂದಿದ್ದರೂ, ಮೇಲಿನ ಅಕೌಂಟ್ ಮೂಲಕವೂ ಕುಮಾರಸ್ವಾಮಿ, ತಮ್ಮ ಸರಕಾರದ ಆಗುಹೋಗುಗಳನ್ನು ಪ್ರಕಟಿಸುತ್ತಾ ಬರುತ್ತಿದ್ದಾರೆ.

   ಯುಪಿಎಸ್ಸಿ ಸಂಬಂಧ ಸಿಎಂ ಟ್ವೀಟಿಗೆ ಬಂದಿರುವ ಪ್ರತಿಕ್ರಿಯೆಗಳಲ್ಲಿ, ಕೆಲವು ವಿದ್ಯಾರ್ಥಿಗಳು ತಮ್ಮ ಕಷ್ಟವನ್ನು ತೋಡಿಕೊಂಡಿದ್ದರೆ, ಕೆಲವರಂತೂ ಅಕ್ಷರಸಃ ಈಗಿನ ರಾಜಕೀಯವನ್ನು ಅಣಕವಾಡಿದ್ದಾರೆ. ಮುಂದೆ ಓದಿ..

   ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಟ್ವೀಟ್

   ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಟ್ವೀಟ್

   "#UPSC ಪರೀಕ್ಷೆ ಬರೆಯುತ್ತಿರುವ ಕನ್ನಡ ನಾಡಿನ ಎಲ್ಲಾ ಯುವಕ-ಯುವತಿಯರಿಗೆ ಶುಭವಾಗಲಿ. ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ" ಇದು ಕುಮಾರಸ್ವಾಮಿ ಮಾಡಿದ ಟ್ವೀಟ್. ಕನ್ನಡದಲ್ಲಿ ಉತ್ತರಿಸಲು ಸಾಧ್ಯವಿಲ್ಲ, ಈ ಬಗ್ಗೆ ಗಮನ ಹರಿಸಿ, ಇದು ಎಚ್ಡಿಕೆ ಟ್ವೀಟಿಗೆ ಬಂದ ಒಂದು ರಿಪ್ಲೈ.

   ಸಿಎಂ ಟ್ವೀಟಿಗೆ ಬಂದ ರಿಪ್ಲೈ

   ಸಿಎಂ ಟ್ವೀಟಿಗೆ ಬಂದ ರಿಪ್ಲೈ

   ಅಣ್ಣೋ, ನನ್ನ್ ತಮ್ಮನೂ (ಮಂಡ್ಯದೈದ), ಅವ್ನ್ ದೋಸ್ತೂ (ಹಾಸ್ನದೈದ) ಇಬ್ರುವೆ #UPSCExam ಬರಿತಾ ಅವ್ರೆ ಕಣಣ್ಣೋ. ಒಂದ್ವೇಳೆ ನನ್ ತಮ್ಮಂಗ್ 37 ಮಾರ್ಕ್ಸ್, ಅವ್ನ್ ಗೆಳೆಯಂಗ್ 79 ಮಾರ್ಕ್ಸ್ ಬಂದ್ರೆ; ಇಬ್ರ್ ಮಾರ್ಕ್ಸ್‌ನೂ ಸೇರ‌್ಸಿ ಒಬ್ನಿಗ್ ಕೆಲ್ಸ ಕೊಡುಸ್ಬುಡಣ್ಣೋ; ನಿನ್ನ್ ಕೈಲಾತದೆ ಕಣ. 104 ತಗೊಂಡಿರೋರು ಎಲ್ಲೋಗೋದು ಗಿರಿಶಣ್ಣ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ನಿಲ್ಲಿಸಿ - ಹೀಗೊಂದು ಸಿಎಂ ಟ್ವೀಟಿಗೆ ಬಂದ ರಿಪ್ಲೈ..

   2-3 ಪರೀಕ್ಷಾರ್ಥಿಗಳು ಸೇರಿ ಅಂಕವನ್ನು ಒಟ್ಟು ಸೇರಿಸಿದರೆ ಉದ್ಯೋಗ ಸಿಗುತ್ತದೆಯೇ?

   2-3 ಪರೀಕ್ಷಾರ್ಥಿಗಳು ಸೇರಿ ಅಂಕವನ್ನು ಒಟ್ಟು ಸೇರಿಸಿದರೆ ಉದ್ಯೋಗ ಸಿಗುತ್ತದೆಯೇ?

   ಆತ್ಮವಿಶ್ವಾಸದಿಂದಪರೀಕ್ಷೆ ಬರೆಯುತ್ತೇವೆ, ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬಾರದಿದ್ದರೆ, ನೀವು ಕಾಂಗ್ರೆಸ್ ಆಡಳಿತ ನಡೆಸುವಂತೆ, ಎರಡು ಮೂರು ಪರೀಕ್ಷಾರ್ಥಿಗಳು ಸೇರಿ ಅಂಕವನ್ನು ಒಟ್ಟು ಸೇರಿಸಿದರೆ ಉದ್ಯೋಗ ಸಿಗುತ್ತದೆಯೇ? ಯುಪಿಎಸ್ಸಿ ಆಮೇಲಿರಲಿ.. ಮೊದಲು ಕೆಪಿಎಸ್ಸಿ ಬಗ್ಗೆ ಹೇಳಿ.. ಅರ್ಹತೆ ಇದ್ದೂ ಸಹ ನಿರುದ್ಯೋಗಿಗಳಾಗಿರುವ ಯುವಜನತೆಯ ಮೇಲೆ ಸ್ವಲ್ಪ ಕರುಣೆ ತೋರಿ..

   ಕಠಿಣ ಪರಿಶ್ರಮ ಪಟ್ಟು ಓದಿದವರಿಗೆ ನ್ಯಾಯ ಒದಗಿಸಿ

   ಕಠಿಣ ಪರಿಶ್ರಮ ಪಟ್ಟು ಓದಿದವರಿಗೆ ನ್ಯಾಯ ಒದಗಿಸಿ

   ಸರ್ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟಲು, ಕಠಿಣ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಕಠಿಣ ಪರಿಶ್ರಮ ಪಟ್ಟು ಓದಿದವರಿಗೆ ನ್ಯಾಯ ಒದಗಿಸಿ. ಸಕಾರಾತ್ಮಕ ಪ್ರತಿಕ್ರಿಯೆಗೆ ಕಾಯುತ್ತಿರುವೆ. ನಿಮ್ಮ ಸಂಪುಟ ಪರೀಕ್ಷೆ ಹೇಗಾಯಿತು? ವಿದ್ಯಾರ್ಥಿಗಳು ಇವರು ಹೇಳಿಲ್ಲಾಂದ್ರೂ ಪಾಸ್ ಆಗ್ತಾರೆ, ಆದರೆ ಸಂಪುಟ ರಚನೆ ಹಾಗಲ್ಲವೇ?

   ಮಾರ್ಕ್ಸ್ ತೆಗೆದುಕೊಳ್ಲದೇನೇ ಎಕ್ಸಾಂ ಪಾಸ್ ಮಾಡುವ ಐಡಿಯಾ ಕೊಡಿ

   ಮಾರ್ಕ್ಸ್ ತೆಗೆದುಕೊಳ್ಲದೇನೇ ಎಕ್ಸಾಂ ಪಾಸ್ ಮಾಡುವ ಐಡಿಯಾ ಕೊಡಿ

   ಸೀಟ್ ಇಲ್ಲದೆಯೇ ಸಿಎಂ ಆಗಿದ್ದೀರಾ, ಅದೇ ತರ ಮಾರ್ಕ್ಸ್ ತೆಗೆದುಕೊಳ್ಲದೇನೇ ಎಕ್ಸಾಂ ಪಾಸ್ ಮಾಡುವ ಐಡಿಯಾ ಕೊಡಿ.ನಿಮ್ಮ ಆತ್ಮವಿಶ್ವಾಸ ತಂತ್ರಗಾರಿಕೆ ನಮಗೂ ಹೇಳಿ.. ಈ ರೀತಿಯ ಹಲವಾರು ಕಾಲೆಳೆಯುವ ರಿಪ್ಲೈಗಳು ಮುಖ್ಯಮಂತ್ರಿಗಳ ಟ್ವೀಟಿಗೆ ಬಂದಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು twitter ಸುದ್ದಿಗಳುView All

   English summary
   Karnataka Chief Minister HD Kumaraswamy tweet to UPSC students: Funny and strong reply from students. HDK wished to students, all the best. Some of the students expressed their difficulties and some students mocked at coalition government.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more