ಸಿಇಟಿ 2015 ಫಲಿತಾಂಶ ಪ್ರಕಟ, 5 ಟಾಪರ್ಸ್ ಗೆ ಉಚಿತ ಸೀಟು
ಬೆಂಗಳೂರು, ಜೂ.01: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ.) ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಅವರು ಜೂನ್ 1 ರಂದು ಮಧ್ಯಾಹ್ನ ವೆಬ್ ಸೈಟ್ ಗಳ ಮೂಲಕ ಫಲಿತಾಂಶ ಹೊರಹಾಕಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಳಿಸಿ ಸುದ್ದಿಗೋಷ್ಠಿ ನಡೆಸಿದ ದೇಶಪಾಂಡೆ ಅವರು ಮೊದಲ ಐದು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 'ಉಚಿತ ಸೀಟು ಭಾಗ್ಯ' ಘೋಷಿಸಿದರು.
ಇಂಜಿನಿಯರಿಂಗ್
* 1ನೇ ಸ್ಥಾನ ಸ್ವಾಗತ್ ಎಸ್ ಯಾದವಾಡ, ಗುರು ಜ್ಯೂ. ಕಾಲೇಜ್ ಹೈದರಾಬಾದ್.
* 2ನೇ ಸ್ಥಾನ ಕೊಮ್ಮೂರುಅಲೆಕ್ಯಾರೆಡ್ಡಿ
* 3ನೇ ಸ್ಥಾನ ಎಂ ಕಾರ್ತಿಕ್, ವಿವಿಎಸ್ ಸರ್ದಾರ್ ಪಟೇಲ್ ಕಾಲೇಜು, ಬೆಂಗಳೂರು.
ವಾಸ್ತುಶಿಲ್ಪ
* ಪ್ರಥಮ: ಶರಣ್ ಜಿ.ಎಸ್.
* ದ್ವಿತೀಯ: ಅಪರ್ಣ
* ತೃತೀಯ: ವಂದನಾ ಟಿ.ಶೇಖರ್
ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ
* ಪ್ರಥಮ: ಮಾನಸ ಎಲ್
* ದ್ವಿತೀಯ: ಪಲ್ಲವಿ
* ತೃತೀಯ: ಪ್ರಿಯಾ
ವೈದ್ಯಕೀಯ, ದಂತ ವೈದ್ಯಕೀಯ
* ಪ್ರಥಮ: ಪ್ರಿಯಾ ನರವಾಲ್
* ದ್ವಿತೀಯ: ಮಾನಸ ಎಲ್
* ತೃತೀಯ: ಪಲ್ಲವಿ
2ನೇ ಪಿಯುಸಿ ಫಲಿತಾಂಶ ಗೊಂದಲ ಹಾಗೂ ಅನಿವಾರ್ಯ ಕಾರಣಗಳಿಂದ ಮೇ.26ರಂದು ಪರೀಕ್ಷೆ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಲಿಲ್ಲ. ಜೂ,1 ರಂದು ಮಧ್ಯಾಹ್ನ 12.45 ಗಂಟೆ ನಂತರ ಅಧಿಕೃತ ವೆಬ್ ತಾಣಗಳಾದ (http://kea.kar.nic.in/cet_2015.htm ಹಾಗೂ http://karresults.nic.in/) ಸೇರಿದಂತೆ ಹೊಸದಾಗಿ http://cet.kar.nic.in ವೆಬ್ ಸೈಟ್ ನಲ್ಲ್ಲೂ ಸಿಇಟಿ ಫಲಿತಾಂಶ ನೋಡಬಹುದು.

ಮೆಡಿಕಲ್, ಡೆಂಟಲ್ ಅಥವಾ ಇಂಜಿನಿಯರಿಂಗ್ ಪೂರ್ಣಾವಧಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.
ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ದೋಷಗಳು ಕಂಡು ಬಂದಿದ್ದರಿಂದ ಭೌತಶಾಸ್ತ್ರ ಹಾಗೂ ಗಣಿತದಲ್ಲಿ ಕೃಪಾಂಕ ನೀಡಲಾಗಿದೆ.ರೈತರ ಮಕ್ಕಳಿಗೆ ಕೃಷಿ ಕೋಟಾ ಮೀಸಲಾತಿಯನ್ನು ಶೇ.23.8ರಿಂದ ಶೇ.40ಕ್ಕೆ ಹೆಚ್ಚಿಸಲಾಗಿದೆ.ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಕೇಂದ್ರ ಆರಂಭಿಸಿದ್ದು , 080-2346 0460ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.(ಒನ್ ಇಂಡಿಯಾ ಸುದ್ದಿ)












Click it and Unblock the Notifications