Karnataka Cabinet Ministers List: ಸಿದ್ದರಾಮಯ್ಯ ಸರ್ಕಾರದ ಸಚಿವರು, ಖಾತೆಗಳ ಸಂಪೂರ್ಣ ಪಟ್ಟಿ ಒಂದೇ ಕ್ಲಿಕ್ಕಿನಲ್ಲಿ
ಕರ್ನಾಟಕ ಸಂಪುಟದ 34 ಸಚಿವರು ಹಾಗು ವಹಿಸಿರುವ ಖಾತೆಗಳ ಪಟ್ಟಿ: ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಕಳುಹಿಸಿದ್ದ ಪಟ್ಟಿಗೆ ಭಾನುವಾರ ತಡರಾತ್ರಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರು ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ರಾಜ್ಯಪತ್ರವನ್ನು ಹೊರಡಿಸಿದೆ.
ಹದಿನಾರನೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ, ಇವರ ಜೊತೆಗೆ ಎಂಟು ಮುಖಂಡರು ಪ್ರಮಾಣ ವಚನ ಸ್ವೀಕರಿಸಿದ್ದರು.
ಎರಡನೇ ಹಂತದ ಸಂಪುಟ ವಿಸ್ತರಣೆಯಾಗಿದ್ದು, 24 ನಾಯಕರು ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನವನ್ನು ಶನಿವಾರದಂದು (ಮೇ 27) ಸ್ವೀಕರಿಸಿದ್ದರು. ರಾಜ್ಯಪಾಲರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಹಲವು ಹಿರಿಯ ಕಾಂಗ್ರೆಸ್ ನಾಯಕರಿಗೆ ಈ ಬಾರಿ ಸಚಿವ ಸ್ಥಾನ ಮಿಸ್ ಆಗಿದೆ. ಖಾತೆ ಹಂಚಿಕೆಯ ಅಂತಿಮ ಪಟ್ಟಿ ಈ ರೀತಿಯಿದೆ:

| ಕ್ರ.ಸಂಖ್ಯೆ | ಹೆಸರು | ಪ್ರತಿನಿಧಿಸುವ ಕ್ಷೇತ್ರ | ಹಂಚಿಕೆಯಾದ ಖಾತೆಗಳು | |
| 1 | ಸಿದ್ದರಾಮಯ್ಯ | ವರುಣಾ | ಮುಖ್ಯಮಂತ್ರಿ, ಹಣಕಾಸು, ಆಡಳಿತ ಸುಧಾರಣೆ , ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳು | |
| 2 | ಡಿ.ಕೆ.ಶಿವಕುಮಾರ್ | ಕನಕಪುರ | ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ | |
| 3 | ಡಾ. ಜಿ.ಪರಮೇಶ್ವರ್ | ಕೊರಟಗೆರೆ | ಗೃಹ (ಗುಪ್ತಚರ ಹೊರತು ಪಡಿಸಿ) | |
| 4 | ರಾಮಲಿಂಗಾ ರೆಡ್ಡಿ | ಬಿಟಿಎಂ ಲೇಔಟ್ | ಸಾರಿಗೆ, ಮುಜರಾಯಿ | |
| 5 | ಎಂ.ಬಿ.ಪಾಟೀಲ್ | ಬಬಲೇಶ್ವರ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ | |
| 6 | ಸತೀಶ್ ಜಾರಕಿಹೊಳಿ | ಯಮಕನಮರಡಿ | ಲೋಕೋಪಯೋಗಿ | |
| 7 | ಪ್ರಿಯಾಂಕ್ ಖರ್ಗೆ | ಚಿತ್ತಾಪುರ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | |
| 8 | ಜಮೀರ್ ಅಹ್ಮದ್ ಖಾನ್ | ಚಾಮರಾಜಪೇಟೆ | ವಸತಿ ಮತ್ತು ವಕ್ಫ್ | |
| 9 | ಕೆ.ಎಚ್.ಮುನಿಯಪ್ಪ | ದೇವನಹಳ್ಳಿ | ಆಹಾರ ಮತ್ತು ನಾಗರಿಕ ಪೂರೈಕೆ | |
| 10 | ಕೆ.ಜೆ.ಜಾರ್ಜ್ | ಸರ್ವಜ್ಞ ನಗರ | ಇಂಧನ | |
| 11 | ಡಾ.ಎಂ.ಸಿ.ಸುಧಾಕರ್ | ಚಿಂತಾಮಣಿ | ವೈದ್ಯಕೀಯ ಶಿಕ್ಷಣ | |
| 12 | ಮಂಕಾಳ ವೈದ್ಯ | ಭಟ್ಕಳ | ಮೀನುಗಾರಿಕೆ | |
| 13 | ಈಶ್ವರ್ ಖಂಡ್ರೆ | ಭಾಲ್ಕಿ | ಅರಣ್ಯ, ಪರಿಸರ | |
| 14 | ಲಕ್ಷ್ಮೀ ಹೆಬ್ಬಾಳ್ಕರ್ | ಬೆಳಗಾವಿ ಗ್ರಾಮೀಣ | ಮಹಿಳಾ ಮತ್ತು ಮಕ್ಕಳ ಕಲ್ಯಾಣ | |
| 15 | ಮಧು ಬಂಗಾರಪ್ಪ | ಸೊರಬ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | |
| 16 | ಕೆ.ವೆಂಕಟೇಶ್ | ಪಿರಿಯಾಪಟ್ಟಣ | ಪಶುಸಂಗೋಪನೆ ಮತ್ತು ರೇಷ್ಮೆ | |
| 17 | ಡಿ ಸುಧಾಕರ್ | ಹಿರಿಯೂರು | ಯೋಜನೆ ಮತ್ತು ಸಾಂಖಿಕ ಇಲಾಖೆ | |
| 18 | ಎಚ್.ಕೆ.ಪಾಟೀಲ್ | ಗದಗ | ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ | |
| 19 | ಎನ್.ಚೆಲುವರಾಯಸ್ವಾಮಿ | ನಾಗಮಂಗಲ | ಕೃಷಿ | |
| 20 | ಶಿವಾನಂದ ಪಾಟೀಲ್ | ಬಸವನಬಾಗೇವಾಡಿ | ಜವಳಿ ಮತ್ತು ಸಕ್ಕರೆ | |
| 21 | ಡಾ.ಎಚ್.ಸಿ.ಮಹದೇವಪ್ಪ | ತಿ.ನರಸೀಪುರ | ಸಮಾಜ ಕಲ್ಯಾಣ | |
| 22 | ಬೈರತಿ ಸುರೇಶ್ | ಹೆಬ್ಬಾಳ, ಬೆಂಗಳೂರು | ನಗರಾಭಿವೃದ್ಧಿ (ಬಿಬಿಎಂಪಿ, ಬಿಡಿಎ, BWSSB, BMRDA, BMRCL ಹೊರತು ಪಡಿಸಿ) | |
| 23 | ಕೃಷ್ಣ ಭೈರೇಗೌಡ | ಬ್ಯಾಟರಾಯನಪುರ | ಕಂದಾಯ | |
| 24 | ಕೆ.ಎನ್.ರಾಜಣ್ಣ | ಮಧುಗಿರಿ | ಸಹಕಾರ | |
| 25 | ಬಿ.ನಾಗೇಂದ್ರ | ಬಳ್ಳಾರಿ ಗ್ರಾಮಾಂತರ | ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ | |
| 26 | ಶರಣಬಸಪ್ಪ ದರ್ಶನಾಪುರ | ಶಹಾಪುರ | ಸಣ್ಣ ಕೈಗಾರಿಕೆ | |
| 27 | ಎಸ್.ಎಸ್. ಮಲ್ಲಿಕಾರ್ಜುನ | ದಾವಣಗೆರೆ ಉತ್ತರ | ಗಣಿಗಾರಿಕೆ ಮತ್ತು ತೋಟಗಾರಿಕೆ | |
| 28 | ಶಿವರಾಜ ತಂಗಡಗಿ | ಕನಕಗಿರಿ | ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ | |
| 29 | ರಹೀಂ ಖಾನ್ | ಬೀದರ್ | ಪೌರಾಡಳಿತ | |
| 30 | ಸಂತೋಷ್ ಲಾಡ್ | ಕಲಘಟಗಿ | ಕಾರ್ಮಿಕ | |
| 31 | ಆರ್.ಬಿ.ತಿಮ್ಮಾಪುರ | ಮುಧೋಳ | ಅಬಕಾರಿ | |
| 32 | ಡಾ.ಶರಣಪ್ರಕಾಶ್ ಪಾಟೀಲ್ | ಸೇಡಂ | ವೈದ್ಯಕೀಯ ಶಿಕ್ಷಣ | |
| 33 | ದಿನೇಶ್ ಗುಂಡೂರಾವ್ | ಗಾಂಧಿನಗರ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | |
| 34 | ಎನ್.ಎಸ್.ಬೋಸ್ ರಾಜು | ಮಾಜಿ ಎಂಎಲ್ಎ | ಸಣ್ಣ ನೀರಾವರಿ |












Click it and Unblock the Notifications